ಮಹಿಳೆಯರ ಭಾಗವಹಿಸುವಿಕೆ ಮತ್ತು ಸಬಲೀಕರಣದ ಮೂಲಕ ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಲಪಡಿಸುವಿಕೆ: ವಿಮರ್ಶಾತ್ಮಕ ಅಧ್ಯಯನ

Main Article Content

ಶೈಲೇಶ್ ಕುಮಾರ್ ಸಿ.
ನಾಗರಾಜು ಎನ್.

Abstract

ಮಹಿಳೆಯರ ರಾಜಕೀಯ ಭಾಗವಹಿಸುವಿಕೆ ಮತ್ತು ಸಬಲೀಕರಣವು ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಲಪಡಿಸುವಿಕೆಯಲ್ಲಿ ಬಹುಮುಖ್ಯವಾದ ಪರಿಣಾಮವನ್ನು ಬೀರುತ್ತದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಗುಣಮಟ್ಟವು ಕೇವಲ ಚುನಾವಣೆಗಳಿಂದ ಅಲ್ಲ, ಸಮಾನ ಪ್ರತಿನಿಧಿತ್ವ, ಅರ್ಥಪೂರ್ಣ ಪಾಲ್ಗೊಳ್ಳುವಿಕೆ, ಉತ್ತರದಾಯಿತ್ವ ಮತ್ತು ಪಾರದರ್ಶಕತೆಗಳಿಂದ ನಿರ್ಧರಿಸಲಾಗುತ್ತದೆ. ಭಾರತ ಸಂವಿಧಾನವು ಲಿಂಗಸಮಾನತೆಯನ್ನು ಒಪ್ಪಿಕೊಂಡಿದ್ದು, ನಮ್ಮ ಸಂಸತ್ತು 1993ರಲ್ಲಿ ಸಂವಿಧಾನಕ್ಕೆ 73ನೆಯ ಮತ್ತು 74ನೆಯ ತಿದ್ದುಪಡಿಯನ್ನು ಕ್ರಮವಾಗಿ ತರುವ ಮೂಲಕ ಮಹಿಳೆಯರಿಗೆ ಗ್ರಾಮೀಣ ಮತ್ತು ನಗರ ಸಂಬಂಧಿತ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತವಾದ ಪ್ರಾತಿನಿಧ್ಯವನ್ನು ಮೀಸಲಾತಿಯ ಆಧಾರಿತವಾಗಿಯೇ ನೀಡಲಾಗಿರುತ್ತದೆ. ಇದರಿಂದ ಮಹಿಳಾ ಜನಸಮುದಾಯಕ್ಕೆ ಸಂಖ್ಯಾತ್ಮಕವಾಗಿ ಪ್ರತಿನಿಧಿತ್ವ ಹೆಚ್ಚಾಗಿದ್ದರೂ, ಗುಣಾತ್ಮಕ ಸಬಲೀಕರಣವೂ ಅಗತ್ಯವಿದೆ. ಮಹಿಳಾ ನಾಯಕತ್ವವು ನೀತಿ ರೂಪಣೆ, ಸಾರ್ವಜನಿಕ ಸಂಪನ್ಮೂಲ ಬಳಕೆ, ಪಾರದರ್ಶಕ ಆಡಳಿತ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುತ್ತದೆ. ಗ್ರಾಮ, ತಾಲೂಕು, ನಗರ ಸಂಸ್ಥೆಗಳಲ್ಲಿ ಮಹಿಳೆಯ ನಿರ್ಧಾರ ಸಾಮರ್ಥ್ಯವು ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಬಲೀಕರಣಕ್ಕೆ ಪ್ರಾಕ್ಸಿ ರಾಜಕಾರಣ, ಪಿತೃತ್ವ, ಆರ್ಥಿಕ ಅವಲಂಬನೆ, ರಾಜಕೀಯ ಹಿಂಸಾಚಾರ ಮತ್ತು ಶೈಕ್ಷಣಿಕ ಮಿತಿಗಳು ಅಡ್ಡಿಯಾಗುತ್ತವೆ. ಅವುಗಳನ್ನು ದಾಟಲು ನಾಯಕತ್ವ ತರಬೇತಿ, ಕಾನೂನು ಜಾಗೃತಿ, ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಮನೋಭಾವ ಬದಲಾವಣೆ ಅಗತ್ಯ. ಒಟ್ಟಾರೆ, ಮಹಿಳೆಯರ ಸಕ್ರಿಯ ಹಾಗೂ ಅರ್ಥಪೂರ್ಣ ಭಾಗವಹಿಸುವಿಕೆ ಇಲ್ಲದೆ ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಲಪಡಿಸುವಿಕೆ ಸಾಧ್ಯವಿಲ್ಲ; ಮಹಿಳಾ ಸಬಲೀಕರಣವು ಸಮಗ್ರ, ಒಳಗೊಂಡ ಮತ್ತು ಜವಾಬ್ದಾರಿಯುತ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲ ಶಕ್ತಿಯಾಗಿದೆ.

Article Details

Section

Research Articles

Author Biographies

ಶೈಲೇಶ್ ಕುಮಾರ್ ಸಿ.

ಸಂಶೋಧನಾ ವಿದ್ಯಾರ್ಥಿ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ, ಶಿವಗಂಗೋತ್ರಿ, ದಾವಣಗೆರೆ.

ನಾಗರಾಜು ಎನ್.

ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿ, ದಾವಣಗೆರೆ.

How to Cite

ಶೈಲೇಶ್ ಕುಮಾರ್ ಸಿ., & ನಾಗರಾಜು ಎನ್. (2026). ಮಹಿಳೆಯರ ಭಾಗವಹಿಸುವಿಕೆ ಮತ್ತು ಸಬಲೀಕರಣದ ಮೂಲಕ ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಲಪಡಿಸುವಿಕೆ: ವಿಮರ್ಶಾತ್ಮಕ ಅಧ್ಯಯನ. ಅಕ್ಷರಸೂರ್ಯ (AKSHARASURYA), 14(06), 146 to 154. https://aksharasurya.com/index.php/latest/article/view/969

References

ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಮಹಿಳಾ ಸಬಲೀಕರಣ ಮತ್ತು ಸ್ಥಳೀಯ ರಾಜಕಾರಣ, ಎನ್.ಶ್ರೀಕಾಂತ್, ಕನ್ನಡ ವಿಶ್ವವಿದ್ಯಾಲಯ ಪ್ರಕಾಶನ, ಹಂಪಿ

ಭಾರತೀಯ ರಾಜಕೀಯ ಮತ್ತು ಲಿಂಗ ಸಮಾನತೆ, ಡಾ.ಎಸ್.ಕೆ.ಚಂದ್ರಶೇಖರ್, ಪೇಜ್ ಪಬ್ಲಿಕೇಶನ್ಸ್, ಮೈಸೂರು

ಪಂಚಾಯತ್ ರಾಜ್ ಮತ್ತು ಮಹಿಳಾ ಮೀಸಲಾತಿ, ಶ್ರೀಮತಿ ಲಕ್ಷ್ಮೀವರ್ಧನ, ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು

ಮಹಿಳಾ ನಾಯಕತ್ವ ಮತ್ತು ಭಾಗವಹಿಸುವಿಕೆ, ಡಾ.ಲಕ್ಷ್ಮಣಪ್ಪ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

ಭಾರತೀಯ ಸಮಾಜದಲ್ಲಿ ಮಹಿಳಾ ರಾಜಕೀಯ ಪಾತ್ರ, ಡಾ.ಗೋಪಾಲಯ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

ಸ್ಥಳೀಯ ಸ್ವಶಾಸನ ವ್ಯವಸ್ಥೆ: ಸವಾಲುಗಳು ಮತ್ತು ಸಾಧನೆಗಳು, ಎಂ.ಬಿ.ರಾಮಚಂದ್ರ, ಕರ್ನಾಟಕ ರಾಜ್ಯ ಪ್ರಶಸ್ತಿ ಪ್ರಕಾಶನ, ಬೆಂಗಳೂರು

ಮಹಿಳಾ ಸಬಲೀಕರಣ: ಸೈದ್ಧಾಂತಿಕ ಮತ್ತು ಕಾರ್ಯಾತ್ಮಕ ದೃಷ್ಟಿಕೋನ, ಡಾ.ವಿ.ಸೀತಾರಾಮ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

Most read articles by the same author(s)