ವಿದ್ಯುನ್ಮಾನ ಆಡಳಿತದಲ್ಲಿ ನಾಗರಿಕ ಸಮಾಜದ ಹೊಣೆಗಾರಿಕೆ
Main Article Content
Abstract
ವಿದ್ಯುನ್ಮಾನ ಆಡಳಿತವು ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಪಾರದರ್ಶಕತೆ, ಕ್ಷಿಪ್ರತೆ ಮತ್ತು ಕಾರ್ಯದಕ್ಷತೆಯನ್ನು ಹೆಚ್ಚಿಸುವ ಮಹತ್ವದ ಸಾಧನವಾಗಿದೆ. ವಿದ್ಯುನ್ಮಾನ ಆಡಳಿತದ ಮೂಲಕ ಆಡಳಿತದಲ್ಲಾದ ಬೆಳವಣಿಗೆಯ ಜೊತೆಗೆ ಮಾಹಿತಿ ಸೋರಿಕೆ, ದುರ್ಬಳಕೆ ಮತ್ತು ತಂತ್ರಜ್ಞಾನದ ಮೇಲಿನ ಅವಲಂಬನೆಯು ಮಾನವ ಸಂಪನ್ಮೂಲ ಕೌಶಲ್ಯವನ್ನು ಕಡಿಮೆ ಮಾಡುವ ಸಾಧ್ಯತೆಯೂ ವಿದ್ಯುನ್ಮಾನ ಆಡಳಿತಕ್ಕಿದೆ, ಆದುದರಿಂದ ವಿದ್ಯುನ್ಮಾನ ಆಡಳಿತದ ನೀತಿಗಳು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅನುಗುಣವಾಗಿರಲು ನಾಗರಿಕ ಸಮಾಜದ ಜಾಗೃತಿಯಿಂದ ಕೂಡಿದ ಜವಾಬ್ದಾರಿಯು ಪ್ರಮುಖವಾಗಿದೆ. ವಿದ್ಯುನ್ಮಾನ ಆಡಳಿತದ ಉತ್ತೇಜನಕ್ಕೆ ಸರಕಾರ ಮತ್ತು ಪ್ರಜೆಗಳ ಸಹಕಾರ, ಜವಾಬ್ದಾರಿತ್ವ, ಉಪಯೋಗಿಸುವಿಕೆ ಮತ್ತು ವಿಮರ್ಶೆಯ ಅಗತ್ಯವನ್ನು ವಿವರಿಸುವುದರ ಜೊತೆಗೆ, ಈ ಲೇಖನವು ವಿದ್ಯುನ್ಮಾನ ಆಡಳಿತ ಮತ್ತು ನಾಗರಿಕ ಸಮಾಜದ ಹೊಣೆಗಾರಿಕೆ ಪಾತ್ರವನ್ನು ವಿಶ್ಲೇಷಿಸುತ್ತದೆ. ವಿದ್ಯುನ್ಮಾನ ಆಡಳಿತದ ಸೇವೆಗಳು ಲಕ್ಷಾಂತರ ಜನರಿಗೆ ನಿರ್ವಹಣಾ ಸುಲಭತೆ ಉಂಟು ಮಾಡಿದರೂ, ಅದರೊಂದಿಗೆ ಹಲವು ಆರ್ಥಿಕ, ಸಾಮಾಜಿಕ ಮತ್ತು ನೀತಿತಾತ್ತ್ವಿಕ ಸವಾಲುಗಳೂ ಹುಟ್ಟಿಕೊಂಡಿವೆ. ವಿದ್ಯುನ್ಮಾನ ಆಡಳಿತಾಧಿಕಾರದ ದುರುಪಯೋಗದಿಂದ ನಾಗರಿಕ ಹಕ್ಕುಗಳಿಗೆ ಉಂಟಾಗಬಹುದಾದ ಅಪಾಯಗಳನ್ನು ತಡೆಗಟ್ಟಲು ನಾಗರಿಕ ಸಮಾಜವು ಹೇಗೆ ಪಾರದರ್ಶಕತೆ, ಜವಾಬ್ದಾರಿ ಮತ್ತು ಸಮಾನ ಹಕ್ಕುಗಳನ್ನು ಕಾಯ್ದಿರಿಸಲು ಹೊಣೆಗಾರಿಕೆಯಿಂದ ಕೆಲಸ ಮಾಡುತ್ತದೆ ಎಂಬುದನ್ನು ಈ ಪ್ರಬಂಧವು ವಿವರಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅಪ್ಪಾದುರೈ, ಎ.(2012). ರಾಜ್ಯ ಮತ್ತು ಆಡಳಿತದ ಸಿದ್ಧಾಂತಗಳು. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು
ಚಂದ್ರಶೇಖರ್, ಕೆ.ಎಸ್.(2015) ಸಾರ್ವಜನಿಕ ಆಡಳಿತ:ಸಿದ್ಧಾಂತ ಮತ್ತು ಅಭ್ಯಾಸ. ಮೈಸೂರು ವಿಶ್ವವಿದ್ಯಾಲಯ ಪ್ರಕಾಶನ. ಮೈಸೂರು
ನಾಗರಾಜ, ಎಸ್. ಎಂ.(2018). ಭಾರತೀಯ ಆಡಳಿತ ವ್ಯವಸ್ಥೆ. ಬೆಂಗಳೂರು: ಸಪ್ನ ಬುಕ್ ಹೌಸ್.
ರಾಜೇಂದ್ರ ಪ್ರಸಾದ್, ಎನ್.(2014). ಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜ. ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.
ಶಿವಾನಂದಯ್ಯ, ಬಿ. ಎಂ.(2016). ಮಾನವ ಹಕ್ಕುಗಳು ಮತ್ತು ಆಡಳಿತ. ಮಂಗಳೂರು: ಮಂಗಳ ಪ್ರಕಾಶನ.
ರಾಮಚಂದ್ರಗೌಡ, ಎಚ್. ಎನ್.(2019). ಭಾರತದಲ್ಲಿ ಇ-ಆಡಳಿತ. ಬೆಂಗಳೂರು: ಅಂಕಿತ ಪ್ರಕಾಶನ.
ವೆಂಕಟೇಶ್, ಆರ್.(2017). ಮಾಹಿತಿ ತಂತ್ರಜ್ಞಾನ ಮತ್ತು ಆಡಳಿತ. ತುಮಕೂರು: ಶ್ರೀ ಸಿದ್ಧಾರ್ಥ ಪ್ರಕಾಶನ.