ವಚನ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ
Main Article Content
Abstract
ಮಾನವ ಮತ್ತು ಪರಿಸರದ ನಡುವಿನ ಅವಿನಾಭಾವ ಸಂಬಂಧವನ್ನು 12ನೇ ಶತಮಾನದ ವಚನ ಸಾಹಿತ್ಯವು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದೆ. ವಚನಕಾರರು ಪ್ರಕೃತಿಯನ್ನು ಕೇವಲ ಭೋಗದ ವಸ್ತುವಾಗಿ ನೋಡದೆ, ಅದನ್ನು ದೈವತ್ವದ ಸ್ವರೂಪವಾಗಿ ಮತ್ತು ಬದುಕಿನ ಆಧಾರವಾಗಿ ಪರಿಗಣಿಸಿದ್ದರು. ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿಯವರ ವಚನಗಳಲ್ಲಿ ಪರಿಸರ ಸಮತೋಲನ, ಅಂತರಂಗ-ಬಹಿರಂಗ ಶುದ್ಧಿ ಮತ್ತು ಜೀವಿಗಳ ಪರಸ್ಪರ ಅವಲಂಬನೆಯ ಕುರಿತಾದ ವೈಜ್ಞಾನಿಕ ಒಳನೋಟಗಳು ಕಂಡುಬರುತ್ತವೆ. ಆಧುನಿಕ ಬದುಕಿನ ದುರಾಸೆ ಮತ್ತು ತಾಂತ್ರಿಕತೆಯ ಭರಾಟೆಯಲ್ಲಿ ಪ್ರಕೃತಿ ನಾಶವಾಗುತ್ತಿದ್ದು, ಈ ಜಾಗತಿಕ ಸಮಸ್ಯೆಗೆ ವಚನಗಳ ಮೌಲ್ಯಗಳು ಪರಿಹಾರ ನೀಡಬಲ್ಲವು. ಭವಿಷ್ಯದ ಸುಸ್ಥಿರ ಬದುಕಿಗಾಗಿ ಶರಣರ ಸರಳ ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ನಾರಾಯಣ ಪಿ.ವಿ., (2005), ವಚನ ಸಮಗ್ರ, ಬೆಂಗಳೂರು: ವಸಂತ ಪ್ರಕಾಶನ.
ಸಿದ್ಧಲಿಂಗ ಸ್ವಾಮಿ, (2014), ವಚನ ಧರ್ಮಸಾರ, ಮೈಸೂರು: ಜಿ.ಶ್ರೀ. ಕ್ರಿಯೇಶನ್ಸ್.
ಶಿವಪ್ಪ ಕೆ.ಸಿ., (2017), ವಚನ ದರ್ಶನ, ಬೆಂಗಳೂರು: ಅಭಿನವ.
ವಿಜಯಕುಮಾರ ಕಮ್ಮಾರ (ಸಂ), (2024), ವಚನ ಸಾಹಿತ್ಯ ಮತ್ತು ಪರಿಸರ ಪ್ರಜ್ಞೆ, ಹುಬ್ಬಳ್ಳಿ: ವಚನ ಸಾಹಿತ್ಯ ಮಂದಾರ ಫೌಂಡೇಶನ್.
ಕಲ್ಬುರ್ಗಿ ಎಂ.ಎಂ. (ಸಂ), (1994), ಸಮಗ್ರ ವಚನ ಸಂಪುಟ-ಒಂದು, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.