ಕೊರಗ ಜನಾಂಗ: ಪರಂಪರೆ ಮತ್ತು ಕೆಲವು ಐತಿಹ್ಯಗಳು

Main Article Content

ಆಶಾ
ಮಾಧವ ಎಂ.ಕೆ.

Abstract

ವೇದಕಾಲದಲ್ಲಿ ಮಾನವರೆಲ್ಲರೂ ಸಮಾನರಾಗಿದ್ದು ಅವರನ್ನು ಜಾತಿವ್ಯವಸ್ಥೆಯಿಂದ ಗುರುತಿಸುವ ಕ್ರಮ ಇರಲಿಲ್ಲ. ಮೇಲು ಕೀಳು, ಉಚ್ಚನೀಚವೆನ್ನುವ ಭೇದ-ಭಾವಗಳ ಕಲ್ಪನೆ ಆ ಕಾಲದಲ್ಲಿ ಇಲ್ಲವಾಗಿತ್ತು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬ ನಾಲ್ಕು ವರ್ಣ ವ್ಯವಸ್ಥೆ ವ್ಯಕ್ತಿವ್ಯವಸ್ಥೆಯಾಗಿತ್ತೇ ವಿನಾಃ ಅದು ಜಾತಿ ವ್ಯವಸ್ಥೆಯಾಗಿರಲಿಲ್ಲ ಎಂಬ ವಿಚಾರ ಗೀತೆಯ ವ್ಯಾಖ್ಯೆಯಿಂದ ತಿಳಿದು ಬರುತ್ತದೆ.
ಕ್ರಮೇಣ ಮುಂದೆ ಅದು ಒಂದೊಂದು ವೃತ್ತಿ ಪ್ರವೃತ್ತಿಯ ಗುಂಪುಗಳಾಗಿ ಒಬ್ಬರಿಂದ ಮತ್ತೊಬ್ಬರಿಗೆ ಪ್ರಬಲವಾದ ಪ್ರತಿಸ್ಪರ್ಧಿಯಾದಾಗ ಅದು ನಂತರದಲ್ಲಿ ಸಮುದಾಯ ವ್ಯವಸ್ಥೆಯಾಗಿ ರೂಪುಗೊಂಡು ಬಲಿಷ್ಠವಾಯಿತು ಎಂದು ನಂಬಲಾಗಿದೆ. ಆಗ ಆ ಪಂಗಡಗಳೊಳಗೆ ಪೈಪೋಟಿ ಏರ್ಪಟ್ಟು ಘರ್ಷಣೆ ನಡೆದು, ವಿಜಯಿ ಆದವರು ಸೋತವರನ್ನು ತಮ್ಮಿಂದ ಕೀಳು ಮಟ್ಟದವರಾಗಿ ಕಂಡು ಅವರ ಕಾಯಕವ್ಯವಸ್ಥೆಯೇ ಮುಂದೆ ಒಂದು ಸಮುದಾಯ ಎಂದು ಗುರುತಿಸಿಕೊಂಡು ಜಾತಿಯ ವ್ಯವಸ್ಥೆಯಾಗಿ ರೂಪು ಪಡೆಯಿತು ಎಂದು ಭಾವಿಸಲಾಗಿದೆ.
ಆರಂಭದಲ್ಲಿ ಆದಿಮ ಜನಾಂಗ ಅಲೆಮಾರಿಯಾಗಿ ಬೇಟೆಯಾಡುತ್ತಾ ಕಾಡುತ್ಪನ್ನಗಳನ್ನು ಆಹಾರ ಕ್ರಮವಾಗಿಸಿ ನಂತರದಲ್ಲಿ ವ್ಯವಸಾಯ ಪದ್ಧತಿಯೊಂದಿಗೆ ಒಂದುಕಡೆ ನೆಲೆಯೂರಿ ಬದುಕುಕಟ್ಟಿಕೊಂಡಿತು ಎಂಬುದು ವಾಸ್ತವ ಸಂಗತಿ. ನಂತರದಲ್ಲಿ ಅದು ಮುಂದುವರಿದು ‘ಕೊಡುಕೊಳ್ಳುವಿಕೆʼಯಿಂದ ವ್ಯಾಪಾರ ಪ್ರವೃತ್ತಿಯೂ ಬೆಳೆದುಬಂತು. ಹೀಗೆ ನೆಲೆನಿಂತ ಅನೇಕ ಪಂಗಡಗಳಲ್ಲಿ ಕೆಲವು ಪಂಗಡಗಳು ಕಾಡಿನಲ್ಲಿಯೇ ಉಳಿದು ಬಾಳು ನಿರ್ವಹಿಸಿದ ಕಾರಣವಾಗಿ ಸಮಾಜದ ಮುಖ್ಯವಾಹಿನಿಯಿಂದ ಹಿಂದುಳಿಯುವಂತಾಯಿತು.
ಹೀಗೆ ಉಳಿದ ಅಲಕ್ಷಿತ ಸಮುದಾಯಗಳಲ್ಲಿ ‘ಕೊರಗʼ ಸಮುದಾಯವು ಒಂದು. ಗಿರಿಜನ ವರ್ಗದಲ್ಲಿ ಗುರುತಿಸಿಕೊಳ್ಳುವ ಈ ಜನಾಂಗ ತಮ್ಮದೇ ಕಟ್ಟುಪಾಡುಗಳಲ್ಲಿ ಜೀವನ ನಡೆಸಿ ಬಾಳುವುದನ್ನು ಕಾಣಬಹುದು.
ಈ ಲೇಖನದಲ್ಲಿ ‘ಕೊರಗʼ ಪದನಿಷ್ಪತ್ತಿ, ಸಮುದಾಯದ ಮೂಲ, ಐತಿಹ್ಯ ಮತ್ತು ಅದಕ್ಕೆ ಸಂಬಂಧಿಸಿದ ಚಾರಿತ್ರಿಕ ವಿಚಾರಗಳನ್ನು ಚರ್ಚಿಸಲಾಗಿದೆ.

Article Details

Section

Research Articles

Author Biographies

ಆಶಾ

ಸಂಶೋಧನಾ ವಿದ್ಯಾರ್ಥಿ, ಎಸ್. ವಿ. ಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ. 

ಮಾಧವ ಎಂ.ಕೆ.

ಮಾರ್ಗದರ್ಶಕರು, ಸಹಾಯಕ ಪ್ರಾಧ್ಯಾಪಕರು, ಮಂಗಳೂರು ವಿಶ್ವವಿದ್ಯಾನಿಲಯ ಘಟಕ ಕಾಲೇಜು, ಮಂಗಳೂರು.

How to Cite

ಆಶಾ, & ಮಾಧವ ಎಂ.ಕೆ. (2025). ಕೊರಗ ಜನಾಂಗ: ಪರಂಪರೆ ಮತ್ತು ಕೆಲವು ಐತಿಹ್ಯಗಳು. ಅಕ್ಷರಸೂರ್ಯ (AKSHARASURYA), 7(04), 13 to 21. https://aksharasurya.com/index.php/latest/article/view/1295

References

ತಪಸ್ವೀಕುಮಾರ್ ನಂ., (1995), ಸಂಸ್ಕೃತಿಯ ವಿಕಾಸ; ಭಾರತೀ ಪ್ರಕಾಶನ, ಮೈಸೂರು.

ದೇಜಪ್ಪ ದಲ್ಲೋಡಿ, (2012), ಬಿಲ್ಲವ ಸಾಂಸ್ಕೃತಿಕ, ಸಂಪದ, ಮಂಗಳೂರು.

ಪುರುಷೋತ್ತಮ ಬಿಳಿಮಲೆ, (1993), ಕೊರಗರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಶೇಷಗಿರಿ ರಾವ್ ಎಲ್.ಎಸ್. (ಅನು), (2015), ಭಗವದ್ಗೀತಾ ಯಥಾರೂಪ, ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು.

Most read articles by the same author(s)