ಭಾಷಾ ಕಲಿಕೆ ಮತ್ತು ಬೋಧನೆಯ ಮನೋವೈಜ್ಞಾನಿಕ ನಿಯಮಗಳು

Main Article Content

ಜೆ. ರಾಜ ಗುಂಡಾಪುರ

Abstract

ಭಾಷೆಯನ್ನು ಬೆಳಕು, ಜ್ಯೋತಿ ಎನ್ನುತ್ತಾರೆ. ಅಲ್ಲಮನು ತನ್ನ ವಚನವೊಂದರಲ್ಲಿ ಮಾತೆಂಬುದು ಜ್ಯೋತಿರ್‌ಲಿಂಗ" ಎಂದಿದ್ದಾರೆ. ಭಾಷೆ ಇಲ್ಲದಿದ್ದರೆ ನಮ್ಮ ಜೀವನ ಕತ್ತಲಲ್ಲಿ ತುಂಬಿರುತ್ತಿತ್ತು. ಆದ್ದರಿಂದಲೇ ದಂಡಿ ಎಂಬ ದಾರ್ಶನಿಕ ಭಾಷೆ ಇಲ್ಲದಿದ್ದರೆ ಜಗತ್ತೇ ಕತ್ತಲೆಯಿಂದ ತುಂಬಿರುತ್ತಿತ್ತೆಂದು ಹೇಳಿದ್ದಾನೆ. ಮನುಷ್ಯನ ವ್ಯವಹಾರ ಆಲೋಚನೆ, ಭಾವನೆಗಳ ಅಭಿವ್ಯಕ್ತಿ-ಇವೆಲ್ಲವೂ ಸಾಧ್ಯವಾಗಿರುವುದು ಭಾಷೆಯಲ್ಲಿ, ಭಾಷೆಯು ಅಭಿವ್ಯಕ್ತಿಯ ಒಂದು ಶಸಕ್ತವಾದ ಶಾಚ್ಛಿಕ ಮಾಧ್ಯಮ. ಮನುಷ್ಯರು ತಮ್ಮ ಬುದ್ಧಿಶಕ್ತಿಯಿಂದ ಭಾಷೆಯನ್ನು ರೂಢಿಸಿಕೊಂಡಿದ್ದಾರೆ. ಭಾಷೆ ಎಂಬುದು ನಿಸರ್ಗದತ್ತವಾದ, ಸಹಜವಾದ ಸ್ವಾಭಾವಿಕ ಕ್ರಿಯೆಯಲ್ಲ. ಒಂದು ನಿರ್ದಿಷ್ಟವಾದ ಪರಿಸರದಲ್ಲಿ ಬಾಲ್ಯದಿಂದ ಕಲಿಯುವುದರಿಂದ ಭಾಷೆ ಬರುತದೆಯೇ ಹೊರತು, ಹುಟ್ಟಿ ನೋಡನೆ ಬರುವುದಿಲ್ಲ. ಭಾಷೆಯು ವ್ಯಕ್ತಿ, ಕುಟುಂಬ, ಸಮುದಾಯ, ಸಮಾಜ ಅಥವಾ ನಿರ್ದಿಷ್ಟ ಪ್ರದೇಶಗಳಲ್ಲಿ, ನಿರ್ದಿಷ್ಟ ಪರಿಸರದಲ್ಲಿ ಪರಸ್ಪರ ಒಪ್ಪಿಗೆ ಮತ್ತು ರೂಢಿಯಿಂದ ಬಂದ ಒಂದು ವ್ಯವಸ್ಥೆಯಾಗಿದೆ.

Article Details

Section

Essay

Author Biography

ಜೆ. ರಾಜ ಗುಂಡಾಪುರ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಮನಗರ.

How to Cite

ಜೆ. ರಾಜ ಗುಂಡಾಪುರ. (2023). ಭಾಷಾ ಕಲಿಕೆ ಮತ್ತು ಬೋಧನೆಯ ಮನೋವೈಜ್ಞಾನಿಕ ನಿಯಮಗಳು. ಅಕ್ಷರಸೂರ್ಯ (AKSHARASURYA), 2(13), 133 to 142. https://aksharasurya.com/index.php/latest/article/view/301

References

ಕೃಷ್ಣಯ್ಯ ಎಂ. ಎಚ್. (1993). ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಸುವಿದ್ಯಾ ಪ್ರಕಾಶನ. ಬೆಂಗಳೂರು.

ಅನಸೂಯ ವಿ. ಪರಗಿ (2014). ಮಾತೃ ಭಾಷೆ ಕನ್ನಡ-ತತ್ವ ಮತ್ತು ಬೋಧನಾ ಮಾರ್ಗ. ವಿವೇಕ ಪ್ರಕಾಶನ. ಚಿಕ್ಕಬಳ್ಳಾಪುರ.

ಶ್ರೀಕಂಠಯ್ಯ ತೀ. ನಂ. (1992). ಕನ್ನಡ ಮದ್ಯಮ ವ್ಯಾಕರಣ. ಗೀತಾ ಬುಕ್ ಹೌಸ್. ಮೈಸೂರು.

ನಾರಾಯಣ ಕೆ. ವಿ. (2001). ಮತ್ತೆ ಭಾಷೆಯ ಸುತ್ತಮುತ್ತ. ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ವೆಂಕಟಾಚಲ ಶಾಸ್ತ್ರೀ ಟಿ. ವಿ. (1990), ಹೊಸಗನ್ನಡ ವ್ಯಾಕರಣ. ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ. ಬೆಂಗಳೂರು.

ಮರುಳಯ್ಯ ಸಾ. ಶಿ. (1999). ಕನ್ನಡ ಭಾಷೆಯ ಚರಿತ್ರೆ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

ಶಂಕರಭಟ್ ಡಿ. ಎನ್. (2006). ಕನ್ನಡ ನುಡಿಯ ಬಗೆಗೆ ಚಿಂತನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಶಂಕರಭಟ್ ಡಿ. ಎನ್. (1999). ಕನ್ನಡ ಶಬ್ದ ರಚನೆ. ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್, ಬೆಂಗಳೂರು.

Most read articles by the same author(s)