Published: 2024-08-05

Table of Contents

Table of Contents

I to V

ಕರ್ನಾಟಕದಲ್ಲಿ ದಲಿತರು

ಎಸ್. ಎಸ್. ಹಿರೇಮಠ

01 to 44

ನೆಲಮೂಲ ಸಂಸ್ಕೃತಿಯ ಮಹಾಶೋಧಕರಾಗಿ ಪ್ರೊ.ಎಸ್.ಎಸ್.ಹಿರೇಮಠರ ಕಾಯಕ
ನೆಲಮೂಲ ಸಂಸ್ಕೃತಿಯ ಜಾಡಿನಲ್ಲಿ ಸಂಶೋಧನೆಯನ್ನು ಕೈಗೊಂಡು ಬಹುತ್ವ ಭಾರತ ಹಾಗೂ ದಲಿತ ಸಂಸ್ಕೃತಿಯ ವಿರಾಟ್ ಸ್ವರೂಪವನ್ನು ಅನಾವರಣ ಮಾಡಿದ ಮಹಾಶೋಧಕರಲ್ಲಿ ಪ್ರೊ.ಎಸ್.ಎಸ್.ಹಿರೇಮಠ ಅವರು ಪ್ರಾತಃಸ್ಮರಣೀಯರಾಗಿದ್ದಾರೆ. ತಮ್ಮ ಅಧ್ಯಾಪನ ಮತ್ತು ಸಂಘಟನಾ ಕಾಯಕದ ಮೂಲಕ ಜನಪರ ಮನಸುಗಳನ್ನು ರೂಪಿಸಿದ ಕ್ರಾಂತಿಕಾರಿಯೂ ಆಗಿದ್ದ ಹಿರೇಮಠ ಮೇಷ್ಟ್ರು ಸಂಶೋಧನಾ ಕಾಯಕದ ಮೂಲಕ ಸೀಮಿತ ಬೌದ್ಧಿಕ ಹಾಗೂ ಸಾಂಸ್ಕೃತಿಕ ಸೀಮೆಗಳನ್ನು ಬಹುವಾಗಿ ವಿಸ್ತರಿಸಿಕೊಟ್ಟಿದ್ದಾರೆ. ಆದಿಮ ನೆಲೆಯಿಂದ ಹಿಡಿದು ಆಧುನಿಕ ನೆಲೆಯ ಸಾಂಸ್ಕೃತಿಕ ಸಂಗತಿಗಳ ವರೆಗೂ ಆಳವಾದ ಸಂಶೋಧನೆಯನ್ನು ಕೈಗೊಂಡ ಹಿರೇಮಠರು ಲೋಕಮುಖೀ ಒಳಹರವಿನ ಅನೇಕ ಸೂಕ್ಷ್ಮಗಳನ್ನು ನಿಕಷಕ್ಕೆ ಒಡ್ಡಿದ್ದಾರೆ; ನೆಲದರಿವಿನ ಸೀಮೆಗಳನ್ನು ವಿಶಾಲಗೊಳಿಸಿದ್ದಾರೆ. ಸಬಾಲ್ಟ್ರನ್ ಸಂಶೋಧನೆಗೆ ಮಹತ್ತರ ನುಡಿಫಸಲನ್ನು ನಾಡಿಗೆ ಸಮರ್ಪಿಸುವ ಮೂಲಕ ಮಾದರಿ ಮಾರ್ಗದರ್ಶಿಯಾಗಿದ್ದಾರೆ.
ವಿದ್ಯಾರ್ಥಿ ಹಾಗೂ ವಿದ್ವಾಂಸ ವಲಯಲ್ಲಿ ಪ್ರಗತಿಪರ ಪ್ರೀತಿಯ ಮೇಷ್ಟ್ರು ಎನಿಸಿದ್ದ ಪ್ರೊ.ಎಸ್.ಎಸ್.ಹಿರೇಮಠ (ಶಿವರುದ್ರಯ್ಯ ಸದಾಶಿವಯ್ಯ ಹಿರೇಮಠ) ಅವರು ಜನಿಸಿದ್ದು 1950ರ ಜೂನ್ 1ರಂದು ಬೆಳಗಾವಿ ಜಿಲ್ಲೆಯ ಸಾಣಿಕೊಪ್ಪದದಲ್ಲಿ. ಬೆಳಗಾವಿಯಲ್ಲಿ ಬಿ.ಎ. ಮತ್ತು ಧಾರವಾಡದಲ್ಲಿ ಎಂ.ಎ. ಪದವಿ ಪಡೆದ ನಂತರ ಹಿರೇಮಠರು ಹೊಸಪೇಟೆ, ಹಡಗಲಿ, ಹರಪನಹಳ್ಳಿಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಜಾತಿಮೂಲದ ಶ್ರೇಷ್ಠ-ಕನಿಷ್ಠತೆಯ ವ್ಯಸನಕ್ಕೆ ಎಂದೂ ಸಿಕ್ಕಿಕೊಳ್ಳದೆ, ಅಬಲ ಸಮುದಾಯಗಳ ಸಬಲೀಕರಣಕ್ಕಾಗಿ ತಮ್ಮ ಬದುಕನ್ನೇ ಮುಡಿಪಿಟ್ಟು, ಪ್ರಗತಿಪರ ಸಂಘಟನೆ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನಪರವಾದ ದುಡಿಮೆಯನ್ನೂ ಮಾಡಿದ್ದು ಅವಿಸ್ಮರಣೀಯ. ಅನೇಕ ಬಡವಿದ್ಯಾರ್ಥಿಗಳಿಗೆ ಬದುಕಿನ ಜೀವಸೆಲೆ ತುಂಬಿದ ಹಿರೇಮಠರು ಮಾನವತೆಯ ಮೇಷ್ಟ್ರು ಸಹ. ಸಾವಿರಾರು ವಿದ್ಯಾರ್ಥಿಗಳ ಲೋಕದೃಷ್ಟಿಯನ್ನು ಬದಲಿಸಿದ ಕೀರ್ತಿ ಮೇಷ್ಟ್ರಿಗೆ ಸಲ್ಲುತ್ತದೆ. 
ಹಿರೇಮಠ ಮಾಸ್ತರರ ಅನೇಕ ವಿದ್ಯಾರ್ಥಿಗಳು ಹೇಳುವಂತೆ, “ಹಿರೇಮಠ ಮೇಷ್ಟ್ರು ತಮ್ಮ ಜೀವಮಾನವಿಡಿ ಮಿಡಿದದ್ದು ಬಡವರಿಗಾಗಿ, ದಲಿತರಿಗಾಗಿ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ. ಅವರ ಸಂಸ್ಕೃತಿ, ಪರಂಪರೆ ಹಬ್ಬಗಳು ಮತ್ತು ಜಾತ್ರೆಗಳ ಬಗೆಗೆ ಅವರ ವಿಭಿನ್ನ ಚಿಂತನೆಗಳು ಹಾಗೂ ಹೋರಾಟದ ಮಜಲುಗಳನ್ನು ನಾಡಿಗೆ ಪರಿಚಯಿಸಿ ಅಧ್ಯಯನ ಹಾಗೂ ಅಧ್ಯಾಪನದ ಜೊತೆಗೆ ಸಂಘಟನೆ, ವೈಚಾರಿಕ ಜ್ಞಾನ, ಸಂಸ್ಕೃತಿ ಪರಂಪರೆಯ ಚರ್ಚೆ, ಅಭಿವ್ಯಕ್ತಿ ಹಾಗು ಹೋರಾಟಕ್ಕೆ ಅನೇಕ ವೇದಿಕೆ ಒದಗಿಸಲು ಚರಿತ್ರಾರ್ಹವಾದ ಕಾಯಕವನ್ನು ಮಾಡಿದ್ದಾರೆ”. ಇಂತಹ ಬಹುಮುಖಿ ವ್ಯಕ್ತಿತ್ವದ ಹಿರೇಮಠ ಮೇಷ್ಟ್ರು ಅನೇಕ ಹೋರಾಟಗಾರರನ್ನು ಹಾಗೂ ಚಿಂತಕರನ್ನು ತಮ್ಮ ಜ್ಞಾನಗರಡಿಯಲ್ಲಿ ಪಳಗಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ವಾಂಸರು ಗುರ್ತಿಸುವಂತೆ, ಚಾರಿತ್ರಿಕ ಭೌತವಾದವನ್ನು ಅತ್ಯಂತ ವೈಜ್ಞಾನಿಕವಾಗಿ ಈ ದೇಶಕ್ಕೆ ಪರಿಚಯ ಮಾಡಿಕೊಟ್ಟಂತ ದೇವಿಪ್ರಸಾದ್ ಚಟ್ಟೋಪಾಧ್ಯಾಯ, ಲೇಖಕರಾದ ಡಿ.ಡಿ.ಕೋಸಾಂಬಿ, ಎಸ್.ಜಿ.ಸರ್ದೇಸಾಯಿ ಅವರ ಪ್ರವಾಹಕ್ಕೆ ಒಳಗಾಗಿದ್ದ ಹಿರೇಮಠ ಮೇಷ್ಟ್ರು ತಮ್ಮ ಶಿಷ್ಯರಿಗೆ ಭಾರತದಲ್ಲಿ ದ್ವಂದ್ವಮಾನ ಮತ್ತು ಚಾರಿತ್ರಿಕ ಭೂತವಾದವನ್ನು E=mc2 ಒಂದೇ ಸೂತ್ರದ ಮೂಲಕ ಅತ್ಯಂತ ಸರಳವಾಗಿ ಮನದಟ್ಟು ಮಾಡಿದ ರೀತಿ ಅತ್ಯಂತ ಮನೋಜ್ಞವಾದದ್ದು
ಭಾರತೀಯ ಸಾಂಸ್ಕೃತಿಕ ಸಂದರ್ಭದಲ್ಲಿ ಜಾತಿವ್ಯವಸ್ಥೆಯ ಬೇರುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಹೊಸ ಹೋರಾಟಗಳನ್ನು ರೂಪಿಸಬೇಕು ಎನ್ನುವ ಚಿಂತನೆಯಿದ್ದ ಎಸ್.ಎಸ್.ಹಿರೇಮಠ ಮೇಷ್ಟ್ರು, ವೈಜ್ಞಾನಿಕ ಸೈದ್ಧಾಂತಿಕ ಸ್ಪಷ್ಟತೆಯಲ್ಲಿ ಮುನ್ನಡೆದಿದ್ದರು. ರಾಜ್ಯಾದ್ಯಂತ ಅನೇಕ ಜಾಥಾಗಳನ್ನು ಸಂಘಟಿಸಿ ಅಸ್ಪೃಶ್ಯತೆಯ ವಿರುದ್ಧ ಹಾಡು ಹಾಗೂ ಬೀದಿ ನಾಟಕಗಳನ್ನು ಆಯೋಜಿಸಿ, ಪಟ್ಟಭದ್ರ ಹಿತಾಸಕ್ತಿಗಳ ವಿರೋಧ ಕಟ್ಟಿಕೊಂಡು ವಯಕ್ತಿಕ ತೊಂದರೆ ಅನುಭವಿಸಿದ್ದರೂ ಕೂಡ ದೃತಿಗೆಡದೆ ಜೀವಮಾನವಿಡಿ ನೊಂದಜನರ ದಿಟ್ಟಧ್ವನಿಯಾಗಿದ್ದರು. ರಂಗನಾಟಕ ಮತ್ತು ಬೀದಿನಾಟಕಗಳನ್ನು ಬರೆದು, ಸಂಭಾಷಣಾ ಪ್ರಸ್ತುತಿಯ ಚಾತರ‍್ಯ, ಕಾಲ-ದೇಶ-ಕ್ರಿಯಾನುಗುಣವಾಗಿ ಬರೆಯುತ್ತಿದ್ದ ಅತ್ಯಂತ ಶಕ್ತ ಸಂಭಾಷಣೆಗಳ ರೀತಿಯಿಂದಾಗಿ ಹಿರೇಮಠರ ಅಸಂಖ್ಯ ಅಭಿಮಾನಿಗಳು ಸೃಷ್ಟಿಯಾಗಿದ್ದು ಮನನೀಯ. 
ಭಾರತೀಯ ನೆಲದ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಕ್ರಿಯಾಶೀಲತೆಗೆ ದ್ಯೋತಕವಾದ ಶೋಧನ ಹಾಗೂ ಬೋಧನ ಕಾಯಕವನ್ನು ಏಕವಾಗಿ ಕೈಗೊಂಡ ಹಿರೇಮಠರ ಕೃತಿಗಳು ಅತ್ಯಮೂಲ್ಯವಾಗಿದೆ. ಬಯಕೆ ಬಯಲು, ಕೆಂಪು ಕವನಗಳು, ಹಸಿರಿನುಸಿರು, ಚಂದ್ರನ ದಾರಿಗಳು, ಮನುಷ್ಯನೆಲ್ಲಿ?(ಕಾವ್ಯ), ಕ್ಯಾದಗಿಹಳ್ಳಿ ಅಂಬವ್ವನ ಪದಗಳು, ಮೈಲಾರನ ಜಾತ್ರೆ, ಮಾನವಪದ ಶಾಸ್ತ್ರ, ಕೊಪ್ಪಳ ಜಿಲ್ಲೆಯ ಜಾತ್ರೆಗಳು, ಜನಪದ ಸಮಾಜ ಸಂಸ್ಕೃತಿ (ಜಾನಪದ), ಮನುಸ್ಮೃತಿಯಲ್ಲಿ ಜಾತಿ ಮತ್ತು ವರ್ಗ, ಬಳ್ಳಾರಿ ಜಿಲ್ಲೆಯ ಆಧುನಿಕ ಸಾಹಿತ್ಯ, ಬಂಡಾಯ ಸಾಹಿತ್ಯ, ಪಂಚಗಣಾಧೀಶ್ವರ, ಸಮಾಜ ಸಂಸ್ಕೃತಿ ಸಂಘರ್ಷ(ವಿಮರ್ಶೆ), ರಾಘವಾಂಕನ ವೀರೇಶ ಚರಿತೆ, ವಿಚಾರ ಸಾಹಿತ್ಯ-1995, ಹರಿಹರನ ಮೂರು ರಗಳೆಗಳು(ಸಂಪಾದನೆ), ಬಂಡಾಯ ಮತ್ತು ಲೈಂಗಿಕ ಪ್ರಶ್ನೆ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಉಪ ಸಂಸ್ಕೃತಿಗಳು, (ವೈಚಾರಿಕ), ಹಶ್ಮಿ ಅಮರ ಮತ್ತು ಜೋಗತಿ ಕಲ್ಲು(ನಾಟಕಗಳು), ‘ಟಿ.ವಿ.ಶಿವಾನಂದನ್: ಬದ್ಧತೆಗೊಂದು ಮಾದರಿ’(ಪತ್ರಕರ್ತ ಟಿ.ವಿ. ಶಿವಾನಂದನ್ ಅವರಿಗೆ ಸಲ್ಲಿಸಿದ ಅಭಿನಂದನ ಗ್ರಂಥ), ಕರ್ನಾಟಕ ಸಂಸ್ಕೃತಿ ಪರಂಪರೆ: ಭಾಗ-1 ಹಬ್ಬಗಳು, ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ: ಭಾಗ-2 ಜಾತ್ರೆಗಳು, ಮಾದಾರ ಚೆನ್ನಯ್ಯನ ನಾಡಿನಲ್ಲಿ, ಉಪ್ಪಾರರು, ಹರಿಹರ ಚಿತ್ರಿಸಿದ ದಲಿತ ಶರಣರು, ಕನ್ನಡ ಜನಪದ ಗುರುಪರಂಪರೆ, ದಲಿತ ಸಂಸ್ಕೃತಿ, ಸಾಂಖ್ಯ ದರ್ಶನ, ಪಾಶುಪತ ದರ್ಶನ, ಕಾಳಾಮುಖ ದರ್ಶನ, ಲಾಕುಳ ದರ್ಶನ, ಲೋಕಾಯತ ದರ್ಶನ, ಯೋಗ ದರ್ಶನ(ಸಂಶೋಧನೆ) – ಇವು ಹಿರೇಮಠರ ಸಾಹಿತ್ಯಕೃಷಿಯಲ್ಲಿ ಮೂಡಿಬಂದಿರುವ ಮಹತ್ವದ ಕೃತಿಫಸಲುಗಳಾಗಿವೆ. ಹಿರೇಮಠರ ಶೋಧನ ಹಾಗೂ ಬೋಧನ ಕೃಷಿಗಾಗಿ ಶ್ರೀ ಮೃತ್ಯುಂಜಯ ಸಾರಂಗಮಠ ಸ್ಮಾರಕ ಪ್ರಶಸ್ತಿ, ಶ್ರೀ ರುದ್ರೇಶ್ವರ ಸಾಹಿತ್ಯ ಪ್ರಶಸ್ತಿ, ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಗುಲ್ಬರ್ಗಾ ವಿವಿಯ ಗೌರವ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ದತ್ತಿ ಪ್ರಶಸ್ತಿಗಳು ಮೊದಲಾಗಿ ಹಲವಾರು ಗೌರವ ಪುರಸ್ಕಾರಗಳು ದೊರೆತಿವೆ. 
ಹಿರೇಮಠರು ನಾಟಕಕಾರರಾಗಿ ಬೆಟಗೇರಿ ಕೃಷ್ಣಶರ್ಮರ “ಜೋಗತಿಕಲ್ಲು” ಕಥೆಯನ್ನು ನಾಟಕಕ್ಕೆ ಇಳಿಸಿದ ರೀತಿ ಕೂಡ ಅನನ್ಯ. ಈ ಕಥೆಯಲ್ಲಿ ತ್ಯಾಗದ ಪ್ರತೀಕವಾಗಿ, ಆರಾಧ್ಯ ದೈವವಾಗಿ ಸಾರ್ಥಕತೆ ಪಡೆವ ದೇವದಾಸಿ ಚಂದಕ್ಕ-ಹಿರೇಮಠರ ಕಣ್ಣೋಟದಲ್ಲಿ ಸಾಮಾಜಿಕ ಸಮಸ್ಯೆಯೊಂದರ ಕಣ್ಮರೆಯಂತೆ ಕಾಡುತ್ತದೆ. ಪರಂಪರೆಯನ್ನು ನೋಡುವ, ಅರ್ಥೈಸುವ ಪಾಠಗಳನ್ನು ಸಾಮಾನ್ಯರಿಗೆ ಮುಟ್ಟಿಸುವ ರೀತಿಯಿಂದಾಗಿ ಹಿರೇಮಠರ ಪ್ರಯತ್ನ ಬಹುಮುಖ್ಯವಾದದ್ದು. 1986ರಲ್ಲಿ ಪ್ರದರ್ಶನಗೊಂಡ ಈ ನಾಟಕ, ಪ್ರದರ್ಶನವಾದ ಕಡೆಯಲ್ಲೆಲ್ಲಾ ನಾಟಕದ ಪರಿಣಾಮ ಹೃದಯಕ್ಕೆ ತಟ್ಟುವಂತೆ ಮತ್ತು ವ್ಯವಸ್ಥೆ ಕಲಿಸಿರುವ ಕೀಳು ಅಭಿರುಚಿಯ ವಿರುದ್ಧ ಬಂಡಾಯವೇಳುವ ಅಗತ್ಯವನ್ನು ನಾಟಕ ಹೇಳುತ್ತಾ ಹೋಯಿತು. ಇಡೀ ರಾಜ್ಯಾದ್ಯಂತ ಪ್ರಚಾರ ಪಡೆದ ಈ ನಾಟಕದ ಕುರಿತು ಅಂದಿನ ದಿ.5-1-1986ರ ಟೈಮ್ಸ್ ಆಫ್ ಇಂಡಿಯಾದಲ್ಲಿ, “Jogathikallu made a scathing attack on the evils of Devadasi system which is still prevailing in North Karnataka .The play was so rich in songs that it engulfed the action of the play itself” ಚರಿತ್ರೆಯನ್ನು ಮುರಿದು ಕಟ್ಟುವ ಇಂತಹ ಪ್ರಯತ್ನಗಳಿಗೆ ಪ್ರೇಕ್ಷಕರ ಸ್ಪಂದನೆ ಮಾತ್ರ ಅದ್ಭುತವಾಗಿತ್ತು ಎಂದು ಈಗಲೂ ರಂಗನಿರ್ದೇಶಕ ಸಿ.ಬಸವಲಿಂಗಯ್ಯ ಅವರು ನೆನಪಿಸಿಕೊಳ್ಳುತ್ತಾರೆ. 
ಚಿಂತಕರಾದ ಡಾ.ಮೊಗಳ್ಳಿ ಗಣೇಶ್ ಅವರು ಹೇಳುವಂತೆ, ದಲಿತ ಸಮುದಾಯಗಳ ಸಾಂಸ್ಕೃತಿಕ ಅಂತಃಸತ್ವವನ್ನೂ ಸಮಕಾಲೀನತೆಯಲ್ಲಿ ಅವು ಪ್ರಧಾನ ಧಾರೆಯಲ್ಲಿ ಎಲ್ಲ ರೀತಿಯಲ್ಲೂ ಸಂಯೋಗ ಸಂವೇದನೆಯ ವಿಕಾಸತ್ವಕ್ಕೆ ಒಳಗಾಗುವುದನ್ನು ಸೂಕ್ಷ್ಮವಾಗಿ ಆಳವಾಗಿ ವಿಭಿನ್ನವಾಗಿ ಸಮಷ್ಟಿ ಧ್ಯಾನಚಿತ್ತದಿಂದ ವಿಶ್ಲೇಷಿಸಿ ಸಾಂಸ್ಕೃತಿಕ ಚರ್ಚೆಗಳಿಗೆ ಹಾಗೂ ಅವುಗಳ ವಿಕಾಸಗಳಿಗೆ ಪೂರಕವಾದ ಶೋಧನೆಗಳನ್ನು ರೂಪಿಸಬೇಕಾದ ಅಗತ್ಯವಿದೆ. ಆಧುನಿಕ ಯುಗದ ಈ ಹೊತ್ತಿಲಲ್ಲಿ ಕೆಳಜಾತಿ ಎಂಬ ಶಾಪಕ್ಕೆ ಒಳಗಾದ ಅನೇಕ ಸಮುದಾಯಗಳು ಜಗತ್ತಿನ ವೇಗದ ರೂಪ ಮತ್ತು ವಿರೂಪಗಳೆರಡರ ತಕ್ಕಡಿಯಲ್ಲಿ ಅದಲು ಬದಲಾಗುತ್ತಾ ಸಂವೇದನೆಯ ರೂಪಾಂತರಗಳಾಗುತ್ತಾ ಎಲ್ಲೆಲ್ಲಿಯೊ ತಮ್ಮ ಅನನ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಿವೆ. ಪ್ರಭುತ್ವದ ಜೊತೆ ಹೋರಾಡುತ್ತಲೇ ರಾಜಿ ಒಪ್ಪಂದ ಮಾಡಿಕೊಂಡಂತೆಯೂ ಸಾಂಸ್ಕೃತಿ ಅಂತಃಸತ್ವಗಳನ್ನು ರಾಜಕೀಯದ ವರಸೆಗಳಲ್ಲಿ ಈ ಸಮುದಾಯಗಳು ಬೆಸುಗೆ ಮಾಡಿಕೊಳ್ಳುತ್ತ ಎಚ್ಚರದ ಸ್ಥಿತಿಯಲ್ಲಿ ಎಡವಿ ಬೀಳುತ್ತ ಮೇಲೇಳುತ್ತ ತಮ್ಮ ತಮ್ಮ ಅಸ್ತಿತ್ವಗಳಿಗಾಗಿ ಎಲ್ಲ ಬಗೆಯ ಬಾಗಿಲುಗಳನ್ನು ಬಡಿಯುತ್ತಿವೆ. ಇವತ್ತು ನಮ್ಮ ರಾಜಕಾರಣ ಅದರ ಪ್ರಭುತ್ವ ಮತ್ತು ಸಮಕಾಲೀನ ಸಾಮಾಜಿಕ ಪ್ರಕ್ರಿಯೆಗಳೆಲ್ಲ ಒಂದಾಗಿಯೇ ಸಮಸ್ಯೆಗಳನ್ನು ಬಿಡಿಸಿಕೊಳ್ಳುತ್ತಲೇ ಸಂಕೀರ್ಣ ಸವಾಲುಗಳು ಎದುರಾಗುತ್ತಿವೆ. ಇಂತಲ್ಲಿ ಸಮುದಾಯದ ಒಳಗೇ ತಣ್ಣಗೆ ಮೌನವಾಗಿ ಪ್ರವಹಿಸುವ ಮಾನವೀಯ ಜೀವಧಾತುವಿನಂತಹ ಹುಡುಕಾಟಗಳಿಗೆ ಹೊಸ ಪೀಳಿಗೆಯ ಮನಸ್ಸು ತೆರೆದುಕೊಳ್ಳಬೇಕಾಗಿದೆ ಎಂಬ ಆಶಯಕ್ಕೆ ಪೂರಕವಾಗಿ ಮೂಡಿಬಂದಿರುವ ಸಂಶೋಧನ ಗ್ರಂಥಗಳಲ್ಲಿ ಹಿರೇಮಠರ ದಲಿತ ಸಂಸ್ಕೃತಿ ಕೇಂದ್ರಿತ ಶೋಧನ ಕೃತಿಗಳು ಬಹುಮೌಲ್ಯಯುಳ್ಳವಾಗಿವೆ.
‘ಕರ್ನಾಟಕ ಸಂಸ್ಕೃತಿ ಪರಂಪರೆ ಭಾಗ-1 ಮತ್ತು ಭಾಗ-2’ ಕೃತಿಗಳಲ್ಲಿ ಹಬ್ಬಗಳು ಮತ್ತು ಜಾತ್ರೆಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದ ಹಿರೇಮಠರು ನೆಲಮೂಲದ ದಲಿತ ಸಂಸ್ಕೃತಿ, ವಲಸೆಗಾರ ಪಶುಪಾಲಕ ಸಂಸ್ಕೃತಿ ಹಾಗೂ ವೈದಿಕ ಸಂಸೃತಿಗಳನ್ನು ಕುರಿತು ಗಂಭೀರವಾದ ಸಂಶೋಧನೆ ಮಾಡಿದ್ದಾರೆ. ಆವರೆಗೆ ಅಸ್ಪಷ್ಟವಾಗಿದ್ದ ವಿಚಾರಗಳನ್ನು ಹೊಸ ಮಾಹಿತಿಗಳ ಮೂಲಕ ಇಲ್ಲಿ ಇನ್ನಷ್ಟು ಸ್ಪಷ್ಟಪಡಿಸಿದ್ದಾರೆ. ಇಲ್ಲಿ, ಹಿರೇಮಠರು ಮೂರು ಅಂಶಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ ಮತ್ತು ಅದನ್ನು ಒಂದು ಪ್ರಮೇಯವಾಗಿ ಅಂಗೀಕರಿಸಿ, ವಿಷಯ ಮಂಡನೆ ಮಾಡಿದ್ದಾರೆ, ಅವುಗಳೆಂದರೆ- 1) ಹೊಲೆ ಮಾದಿಗರೇ ಈ ನೆಲದ ಮೊದಲ ಕೃಷಿಕರು. ಕೃಷಿಕರಾಗುವ ಮುನ್ನ ಅವರು ಬೇಟೆಗಾರರಾಗಿದ್ದರು. ಕೃಷಿಕರಾಗಿರುವುದರಿಂದಲೇ ಅವರು ತಂತ್ರದ ಕಡೆ ವಾಲಿದರು. ಮೂಲತಃ ಶಾಕ್ತರಾಗಿರುವ ಅವರು ಯೋನಿ ಪೂಜಕರಾಗಿದ್ದರು. ಇವರಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಇತ್ತು. 2)ಎರಡನೇ ಹಂತದಲ್ಲಿ ಪಶುಪಾಲಕರಾಗಿದ್ದ ದ್ರಾವಿಡರು ದಕ್ಷಿಣಕ್ಕೆ ವಲಸೆ ಬಂದರು. ಹಾಗೆ ವಲಸೆ ಬಂದ ಅನಂತರ ಅವರು ಕೃಷಿಕರಾಗಿ ಮಾರ್ಪಟ್ಟರು ಇಲ್ಲವೇ ಹೊಲೆ ಮಾದಿಗರೊಂದಿಗೆ ಒಂದು ಬಗೆಯ ಸಮನ್ವಯವನ್ನು ಏರ್ಪಡಿಸಿಕೊಂಡರು, ಇವರು ಶಿಶ್ನಾರಾಧಕರು, ಸಿದ್ಧ ಪರಂಪರೆಯವರು. 3)ಮೂರನೆಯ ಹಂತದಲ್ಲಿ ವೈದಿಕರ ಪ್ರವೇಶ ಆಗಿದೆ. ಪುರುಷ ಪ್ರಧಾನ ಚಿಂತಕರಾದ ಇವರ ಪ್ರವೇಶದಿಂದ ಜಾತಿ-ವರ್ಗಗಳು ಕಾಣಿಸಿಕೊಂಡವು. ಈ ಮೂರು ಅಂಶಗಳನ್ನು ಹಿರೇಮಠರು ಸುಮಾರು 51 ಜನಪದ ದೈವಗಳ ಆಚರಣಾ ವಿಧಿ-ವಿಧಾನಗಳ ಸಹಾಯದಿಂದ ಚರ್ಚಿಸಿ, ಸಮರ್ಥಿಸುತ್ತಾರೆ. ಊರು, ಹಳ್ಳಿ, ಲಿಂಗ, ಹಬ್ಬ, ತೇರು, ಜಾತ್ರೆ ಹೀಗೆ ಬಹು ಅಂಶಗಳನ್ನು ಎತ್ತಿಕೊಂಡು ತನ್ನ ವಾದವನ್ನು ಗಟ್ಟಿಗೊಳಿಸಿದ್ದಾರೆ. ಲಭ್ಯವಿರುವ ಮಾಹಿತಿಗಳೆಲ್ಲವನ್ನು ಸಂಗ್ರಹಿಸಿ, ಅವನ್ನು ತನ್ನ ಕೇಂದ್ರ ಉದ್ದೇಶಕ್ಕೆ ಜೋಡಿಸಿ, ವಿಷಯ ಮಂಡನೆ ಮಾಡಿದ್ದಾರೆ; ದಲಿತ ಸಂಸ್ಕೃತಿಯ ವಿರಾಟ್ ಸ್ವರೂಪದ ದರ್ಶನ ಮಾಡಿಸಿದ್ದಾರೆ. ಇದರ ಜೊತೆಗೆ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಎಲ್ಲ ಹಬ್ಬಗಳ ಆಶಯ ಒಂದಿಲ್ಲೊಂದು ರೀತಿಯಿಂದ ಕೃಷಿಗೆ ಸಂಬಂಧಿಸಿರುವುದು. ಮಾನವ ಜೀವನ ಮತ್ತು ಕೃಷಿಗೆ ಅಗತ್ಯವಾದ ಪ್ರಾಣಿ ಜೀವನಗಳೂ ರಂಗಕ್ಕೆ ಪ್ರವೇಶಿಸುತ್ತವೆ. ಆದ್ದರಿಂದ ಹಬ್ಬಗಳ ವೈಜ್ಞಾನಿಕ ಶೋಧನೆಯ ಸಾಧ್ಯತೆಯನ್ನು ಹಿರೇಮಠರು ಕೈಗೊಂಡಿರುವುದು ಮಹತ್ವದ್ದಾಗಿದೆ. ಈ ಕೆಲಸದ ಹಿಂದೆ ಇರುವ ಅಪಾರವಾದ ಶ್ರಮ, ತಾಳ್ಮೆ ಮತ್ತು ಆಳವಾದ ವಿದ್ವತ್ತು ವಿಶೇಷವಾದುದು. ಮೇಲಾಗಿ ತನ್ನ ಇಡೀ ವಾದವನ್ನು ಒಂದು ಜನಪರವಾದ ನಿಲುವಿಗೆ ಸೇರಿಸುವಲ್ಲಿ ಹಿರೇಮಠರು ತೋರುವ ಬದ್ಧತೆಯು ಇಲ್ಲಿ ಗಮನಾರ್ಹ. 
ಕರ್ನಾಟಕದಲ್ಲಿ ಎಪ್ಪತ್ತು ಎಂಬತ್ತರ ದಶಕ ಹಲವು ಚಳುವಳಿಗಳ ಮೂಲಕ ಸಂಚಲನವನ್ನು ಉಂಟುಮಾಡಿತ್ತು. ಸಂಸ್ಕೃತಿಯ ಅರ್ಥ ವ್ಯಾಖ್ಯಾನಗಳು ಪಲ್ಲಟಗೊಂಡು ಹೊಸ ಅರ್ಥ ವ್ಯಾಖ್ಯಾನಗಳನ್ನು ಹುಟ್ಟುಹಾಕಿತು. ಅದರ ಬೆಳಸಿನ ಕೊಯ್ಲಿಗೆ ಎಸ್.ಎಸ್.ಹಿರೇಮಠರ ‘ದಲಿತ ಸಂಸ್ಕೃತಿ’ ಹಾಗೂ ‘ಮಾದಾರ ಚೆನ್ನಯ್ಯನ ನಾಡಿನಲ್ಲಿ’ ಕೃತಿಗಳೂ ಸಾಕ್ಷಿಯಾಗಿವೆ. ಅಧ್ಯಯನ ಕ್ಷೇತ್ರಗಳು ಶ್ರೇಣೀಕರಣದ ಕಾರಣದಿಂದ ಅವಜ್ಞತೆಗೆ ಮತ್ತು ಶ್ರೇಷ್ಠ ಕನಿಷ್ಠತೆಗೆ ಒಳಗಾಗಿದ್ದವು. ಆದರೆ ದಲಿತ ಬಂಡಾಯ ಚಳುವಳಿಯಿಂದ ಈ ಅವಜ್ಞತೆಯನ್ನು ಪ್ರಶ್ನಿಸುವ ಪ್ರತಿಭಟಿಸುವ ಕ್ರಿಯೆಗಳೆಲ್ಲ ನಡೆದವು. ಹೀಗಾಗಿ ಮುಟ್ಟಬಾರದ ಲೋಕಗಳನ್ನು ಮುಟ್ಟಿ ಅದರೊಳಗಿನ ಚಾರಿತ್ರಿಕ ಸಂಗತಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ದಲಿತ ಸಂಸ್ಕೃತಿಯೆಂಬುದನ್ನು ಕಟ್ಟಿಕೊಳ್ಳುವ ಹೊತ್ತಿನಲ್ಲಿ ಚರಿತ್ರೆಯಲ್ಲಿ ಕಾಣೆಯಾಗಿದ್ದವುಗಳನ್ನು ಹುಡುಕಿಕೊಳ್ಳುವುದು ಬಹು ಕಷ್ಟದ ಕೆಲಸ. ಭಾರತದಂತಹ ದೇಶದಲ್ಲಿ ಎಲ್ಲವುಗಳನ್ನು ಸಾಕ್ಷ್ಯಾಧಾರಗಳ ಮೂಲಕ, ಪ್ರಮಾಣಗಳ ಮೂಲಕವೇ ಹೇಳಬೇಕಾಗುತ್ತದೆ, ಬರೆಯಬೇಕಾಗುತ್ತದೆ. ಹೀಗಾಗಿಯೇ ಹಿರೇಮಠರು ಶಾಸನ, ಕಾವ್ಯ, ಪುರಾಣಗಳನ್ನೆಲ್ಲ ಜಾಲಾಡಿರುವರು. ದಲಿತ ಸಂಸ್ಕೃತಿ ಮತ್ತು ಅಧ್ಯಯನ ಸಂಬಂಧವಾಗಿ ಚರಿತ್ರೆಯಲ್ಲಿ ನಡೆದಿರುವ ಮೋಸ, ಶಾಸನಗಳಲ್ಲಿ ನಿರ್ದೇಶಿಸಿರುವ ದಲಿತ ಸಂಸ್ಕೃತಿ, ಕರ್ನಾಟಕ ರಾಜವಂಶಗಳು ಮತ್ತು ದಲಿತರು, ಎಲ್ಲಮ್ಮಪಂಥ, ತಾಯಿಪಂಥ, ತಾಂತ್ರಿಕ ಪಂಥ, ದಲಿತ ಸಂಸ್ಕೃತಿ ಮತ್ತು ವೈಜ್ಞಾನಿಕತೆ, ದಲಿತ ತತ್ವಜ್ಞಾನ ಮೊದಲಾದ ಸಂಗತಿಗಳನ್ನು ಚರ್ಚಿಸಿರುವರು. ಈ ಮೂಲಕ ಏಕಸಂಸ್ಕೃತಿಯ ಕಲ್ಪನೆಯನ್ನು ಒಡೆದು ಬಹುಸಂಸ್ಕೃತಿಗಳನ್ನು ಶೋಧಿಸಿ ಚರಿತ್ರೆಯನ್ನು ಪುನರ್ ನಿರ್ಮಿಸುವ ಬದ್ಧತೆಯ ಕಾಯಕ ಪೂರೈಸಿದ್ದಾರೆ. ಈ ಬದ್ಧತೆಯನ್ನು ಶೋಧನೆ ಹಾಗೂ ಬೋಧನೆಯಲ್ಲಿ ಮಾತ್ರವಲ್ಲದೆ ತಮ್ಮ ಬದುಕಿನುದ್ದಕ್ಕೂ ಜೀವಂತವಾಗಿಟ್ಟುಕೊಂಡು ಬರೆದವರು ಎಸ್.ಎಸ್.ಹಿರೇಮಠರು ಎಂಬುದು ಹೆಮ್ಮೆಯ ಸಂಗತಿ.
‘ಮಾದಾರ ಚೆನ್ನಯ್ಯನ ನಾಡಿನಲ್ಲಿ’ ಎಂಬ ಕೃತಿಯಲ್ಲಿ ಹಿರೇಮಠರು ತಾವು ಈಗಾಗಲೇ ಕೈಗೊಂಡಿದ್ದ ದಲಿತತ್ವ ಶೋಧನೆಯ ಹೊಸಸಾಧ್ಯತೆ ಹಾಗೂ ಹೊಸಸೇರ್ಪಡೆಯನ್ನು ಮಾಡಲು ಪ್ರಯತ್ನಿಸಿರುವುದು ಕಂಡುಬರುತ್ತದೆ. ನೆಲಮೂಲದ ದಲಿತ ಸಂಸ್ಕೃತಿಯ ಆಧುನಿಕ ರೂಪರೇಖೆಗಳನ್ನು ಆದಿಮತೆಯ ಅನುಸಂಧಾನದಲ್ಲಿ ಮುಖಾಮುಖಿಯಾಗಿಸುತ್ತಾ ಈ ಹೊತ್ತಿಗೂ ವಾಸ್ತವವೆನಿಸುವ ದಲಿತತ್ವದ ಬಹುಮುಖಗಳನ್ನು ದರ್ಶಿಸಿದ್ದಾರೆ. ಕರ್ನಾಟಕದಲ್ಲಿ ವರ್ಣ-ಜಾತಿ ಸಮಸ್ಯೆ, ವರ್ಗ; ವರ್ಣ-ಜಾತಿ ಸಮಸ್ಯೆಗಳ ಅಂತರ್‌ಸಂಬಂಧ, ದಲಿತ-ಮುಸ್ಲಿಂರ ಐಕ್ಯತೆಯ ಸಾಧ್ಯಾಸಾಧ್ಯತೆ, ನಾಶವಾಗಬೇಕಾದದ್ದು ಜಾತಿಯೇ ಧರ್ಮವೇ? ಬ್ರಾಹ್ಮಣ ಸಮಾಜ ದ್ರಾವಿಡ ಮೂಲದ್ದೇ? ದ್ರಾವಿಡವಾದ ಎಷ್ಟು ಸರಿ? ಆಂತರಿಕ ಬಿಕ್ಕಟ್ಟಿನಲ್ಲಿ ಕ್ರಾಂತಿಕಾರಿಗಳು, ದಲಿತರ ನೇತೃತ್ವವೇ ಯಾಕೇ?, ಮಾದಾರ ಚೆನ್ನಯ್ಯನ ಮತ ಮತ್ತು ಮತಾಂತರ, ಸಾಮಾಜಿಕ ಸಮಾನತೆಯ ಸತ್ವ, ದಲಿತವಾದಿ ಬದ್ಧತೆ ಮೊದಲಾದ ಸಂಗತಿಗಳನ್ನು ಲೋಹಿಯಾ-ಅಂಬೇಡ್ಕರ್-ಗಾಂಧಿ ಮೊದಲಾದ ಚಿಂತಕರ ಕಣ್ಣೋಟದಲ್ಲಿ ಮೌಲ್ಯೀಕರಿಸಿದ್ದಾರೆ. ಇಲ್ಲಿ ಕಾಣುವ ದಲಿತತ್ವ ಪರವಾದ ಹಿರೇಮಠರ ವಸ್ತುನಿಷ್ಠ ದೃಷ್ಟಿಕೋನ, ಆಳವಾದ ಶೋಧನಪ್ರಜ್ಞೆ, ಪರಂಪರೆಯೊಂದಿಗಿನ ಆಧುನಿಕ ಅನುಸಂಧಾನ ಚಿಂತನೆ, ಸಮಕಾಲೀನ ಪ್ರಜ್ಞೆ ಹಾಗೂ ಪ್ರಖರ ವೈಚಾರಿಕತೆಗಳು ಅನುಕರಣೀಯವಾದುವು.
ಭಾರತೀಯ ಪ್ರಾಚೀನ ದರ್ಶನಗಳ ಸರಣಿಯಲ್ಲಿ ಪಾಶುಪತ ದರ್ಶನ, ಕಾಳಾಮುಖ ದರ್ಶನ, ಲಾಕುಳ ದರ್ಶನ, ಯೋಗದರ್ಶನ, ಲೋಕಾಯತ ದರ್ಶನ ಕೃತಿಗಳನ್ನು ಹಿರೇಮಠರು ರಚಿಸಿದ್ದಾರೆ. ಭಾರತದ ಅವಿಭಾಜ್ಯ ಭಾಗವಾದ ಕನ್ನಡ ನಾಡಿನ ಸಂಸ್ಕೃತಿಯ ಬೆಳವಣಿಗೆಯಲ್ಲಿ ದರ್ಶನಗಳ ಪಾತ್ರವೇನಿರಬಲ್ಲುದು ಎಂಬ ಪ್ರಶ್ನೆ ತುಂಬ ಮಹತ್ವದ್ದು. ಭಾರತದಲ್ಲಿ ತುಂಬ ಪ್ರಾಚೀನ ಕಾಲದಿಂದಲೂ ಹಲವಾರು ದರ್ಶನಗಳು ಪ್ರಚಲಿತವಿದ್ದವು. ಆಸ್ತಿಕ-ನಾಸ್ತಿಕ ಎಂಬ ಪ್ರಧಾನ ಪ್ರಭೇದಗಳ ಮೂಲಕ ನಮ್ಮ ದೇಶದ ‘ದರ್ಶನ’ ಪರಂಪರೆ ತುಂಬ ಪ್ರಾಚೀನ ಕಾಲದಿಂದ ಬೆಳೆದು ಬಂದಿದೆ. ಅದು ನಾಡಿನ ಪ್ರಗತಿಗಾಗಿ ನಡೆದ ಹೋರಾಟಗಳಿಗೆ ನಿರ್ದಿಷ್ಟ ದೃಷ್ಟಿಕೋನವನ್ನು ಮತ್ತು ತಾತ್ವಿಕ ನೆಲೆಗಳನ್ನು ಒದಗಿಸುತ್ತ ಬಂದಿದೆ. ಜಾತಿ, ಧರ್ಮ, ಮತ, ಪಂಥ, ಕೋಮುಗಳ ಪ್ರಭಾವ ದಟ್ಟವಾಗಿರುವ ಹಿನ್ನೆಲೆಯಲ್ಲಿ ಮತ್ತು ಅವುಗಳಿಂದ ಉಂಟಾಗುತ್ತಿರುವ ನಾನಾ ಬಗೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದ ಅವಶ್ಯಕತೆಯಿರುವಲ್ಲಿ ದರ್ಶನಗಳ ಪಾತ್ರವೇನೆಂಬ ಪ್ರಶ್ನೆ ಪ್ರಸ್ತುತವೆನಿಸುತ್ತದೆ. ಆಧುನಿಕ ಪೂರ್ವ ಕಾಲಘಟ್ಟದಲ್ಲಿ ಜಾತಿ, ಧರ್ಮಾದಿಗಳು ಹುಟ್ಟು ಹಾಕಿದ್ದ ಸವಾಲುಗಳನ್ನು ನಮ್ಮ ಸಂಸ್ಕೃತಿ ಪರಂಪರೆಗಳು ಸ್ವೀಕರಿಸಿದ ಮತ್ತು ಎದುರಿಸಿದ ಸಂದರ್ಭ ಹೇಗಿತ್ತು ಮತ್ತು ಪರಿಹಾರಗಳೇನಿದ್ದವು? ಈ ಹಿನ್ನೆಲೆಯಲ್ಲಿ ‘ದರ್ಶನ’ಗಳ ಪಾತ್ರದ ಪ್ರಾಮುಖ್ಯತೆ ಗೊತ್ತಾಗುತ್ತದೆ ಎಂದು ದರ್ಶನಗಳ ಶೋಧನೆಗೆ ಇಳಿದ ಹಿರೇಮಠರು ರಚಿಸಿದ ದರ್ಶನ ಕೃತಿಗಳು ದಾರ್ಶನಿಕತೆಯ ತೋರುದಾರಿಗಳಾಗಿವೆ. 
ಒಂದು ನಾಡಿನ ಅಥವಾ ಸಮುದಾಯದ ಸಂಸ್ಕೃತಿಯಲ್ಲಿ ‘ದರ್ಶನ’ಗಳ ಪಾತ್ರ ಪ್ರಧಾನ. ಜಾಗತಿಕ ದೃಷ್ಟಿಕೋನ, ಅಥವಾ ಲೋಕದೃಷ್ಟಿಗಳನ್ನು ರೂಪಿಸುವ ದರ್ಶನಗಳು ಸಂಸ್ಕೃತಿಯನ್ನು ಪ್ರಭಾವಿಸುತ್ತವೆ. ಕರ್ನಾಟಕದ ಇದ್ದುಳ್ಳವರ ಮತ್ತು ಇಲ್ಲದವರ ಸಂಸ್ಕೃತಿಗಳಲ್ಲಿ ಯಾವ ಯಾವ ದರ್ಶನಗಳು ದುಡಿದಿವೆ ಎಂಬುದನ್ನು ಶೋಧಿಸುವ ಆಶಯದಲ್ಲಿ ಎಸ್.ಎಸ್.ಹಿರೇಮಠರ ‘ಸಾಂಖ್ಯ’, ‘ಪಾಶುಪತ’, ‘ಕಾಳಾಮುಖ’, ‘ಲಾಕುಳ’, ಯೋಗ’ ಹಾಗೂ ‘ಲೋಕಾಯತ’ ದರ್ಶನಗಳನ್ನು ಕುರಿತು ಮಹತ್ತರವಾದ ಸಂಶೋಧನ ಗ್ರಂಥಗಳು ಮೂಡಿಬಂದಿವೆ; ದರ್ಶನ ಶೋಧನೆಯಲ್ಲಿ ಮೌಲ್ಯಯುತ ಸ್ಥಾನಮಾನಕ್ಕೆ ಪಾತ್ರವಾಗಿವೆ. ವೈದಿಕೇತರ ಸಾಂಸ್ಕೃತಿಕ ಜ್ಞಾನಪರಂಪರೆ, ತಾತ್ವಿಕ ಒಳನೋಟಗಳು ಮತ್ತು ಜೀವನ ದರ್ಶನಗಳು ಅನಾತ್ಮವಾದಿಯಾದ ಶುದ್ಧ ಭೌತವಾದವಾಗಿ ಮತ್ತೆ ಪಾರಂಪರಿಕ ಪ್ರಮುಖ ಪ್ರವಾಹಸ್ಥಾನ ಪಡೆಯಬೇಕಾದ ಸಾಂಸ್ಕೃತಿಕ ತುರ್ತಿನ ಈ ದಿನಮಾನಗಳಲ್ಲಿ ಅವೈದಿಕ ದರ್ಶನ ಪರಂಪರೆಗಳೆಡೆಗೆ ಪ್ರೊ. ಹಿರೇಮಠರು ಸಾಂಖ್ಯ ದರ್ಶನದ ಮೂಲಕ ಕೈಮರ ತೋರಿಸಿದ್ದಾರೆ. ಅವರ ‘ಸಾಂಖ್ಯದರ್ಶನ’ವು ದರ್ಶನ ಪರಂಪರೆಗಳ ಪ್ರಸ್ತಾಪ ಮತ್ತು ವೈದಿಕ ಸಾಂಸ್ಕೃತಿಕ ಆಧಿಪತ್ಯದಿಂದ ಆದ ಪ್ರತಿಕೂಲತೆಯ ಬಗ್ಗೆ ಒಂದು ಪ್ರವೇಶಿಕೆಯನ್ನು ತೆರೆದಿರಿಸಿದೆ ಎನ್ನಬಹುದು. ಶಾಸ್ತ್ರೀಯ ಹಾಗೂ ಜಾನಪದೀಯ ನೆಲೆಗಳಲ್ಲಿ ಒಡಮೂಡಿ ಬಂದಿರುವ ‘ಕಾಳಾಮುಖ ದರ್ಶನ’ವನ್ನು ಕುರಿತಾದ ಹಿರೇಮಠರ ಶೋಧನೆಯನ್ನು ಪರಿಶೀಲಿಸುತ್ತಾ ಮೇರುವಿದ್ವಾಂಸರಾದ ಎಂ.ಎಂ.ಕಲ್ಬುರ್ಗಿ ಅವರು, “ದೊಡ್ಡ ಅಭ್ಯಾಸ, ದೊಡ್ಡ ಶ್ರಮಗಳನ್ನು ಪ್ರತಿನಿಧಿಸುವ ಈ ಕೃತಿಗಾಗಿ ನಿಮ್ಮನ್ನು ಪ್ರೀತಿಯಿಂದ ಅಭಿನಂದಿಸುತ್ತೇನೆ. ಇಲ್ಲಿಯ ಕೆಲವು ಅಭಿಪ್ರಾಯಗಳನ್ನು ಒಪ್ಪದಿದ್ದರೂ. ಈ ಬರವಣಿಗೆ ನನಗೆ ಕೆಲವು ಹೊಸ ಹಾದಿಗಳನ್ನು ತೋರಿಸಿದೆ. ನಿಮ್ಮಿಂದ ಪರಾಜಿತನಾಗುವುದು ನನಗೆ ಸಂತೋಷದ ವಿಷಯವೆಂದು ಬೇರೆ ಹೇಳಬೇಕಿಲ್ಲ” ಎಂದಿರುವುದು ಕನ್ನಡ ಸಂಶೋಧನ ಜಗತ್ತಿನ ‘ಹಳೆಬೇರು ಹೊಸಚಿಗುರು’ತನಕ್ಕೆ ಹಿಡಿದ ಕನ್ನಡಿಯಂತಿದೆ. 
ಭಾರತೀಯ ಶೈವ ಪ್ರಪಂಚದ ಕೆಲ ಗ್ರಹಿತ ನಂಬಿಕೆಗಳನ್ನು ಸಾಧಾರವಾಗಿ ನಿರಾಕರಿಸುತ್ತಾ ಮಹತ್ವಪೂರ್ಣ ದರ್ಶನವಾದ ‘ಪಾಶುಪತ ದರ್ಶನ’ವನ್ನು ಕುರಿತು ಹಿರೇಮಠರು ಕೈಗೊಂಡ ಶೋಧನೆಯು ಕಡಲನ್ನು ಹಿಡಿಯೊಳಡಗಿಸಿದಂತಿದೆ. ಕೇವಲ ನೂರೆಂಟು ಪುಟಗಳಲ್ಲಿ ಅವರು ಒದಗಿಸುವ ಶಾಸ್ತ್ರ, ಶಾಸನ ಮತ್ತು ಇನ್ನಿತರ ಆಕರಗಳ ಮಾಹಿತಿ ದಿಗ್ಧಮೆಗೊಳಿಸುವಂಥದ್ದು. ಇಲ್ಲಿ ವಿಸ್ತರಿತವಾದ ‘ಪಾಶುಪತ ದರ್ಶನ’ವು ಪ್ರಾಚೀನದಿಂದ ಆಧುನಿಕ ಕಾಲದ ವರೆಗಿನ ಚರ್ಚಾ-ಹರವನ್ನು ಪಡೆದುಕೊಂಡಿದೆ. ಪ್ರಕೃತಿ ಪ್ರಧಾನ ಸಾಂಖ್ಯತತ್ವ ಹಾಗೂ ಪುರುಷ ಪ್ರಧಾನ ಪಾಶುಪತ ತತ್ವಗಳೆರಡೂ ಅವೈದಿಕ ಎಂದರೆ ದ್ರಾವಿಡ ದರ್ಶನಗಳೆಂಬುದರತ್ತ ನಮ್ಮ ಗಮನ ಸೆಳೆಯುತ್ತಾರೆ. ರುದ್ರನನ್ನು ಪಾಶುಪತದ ಹೊರಗಿಟ್ಟು ನೋಡುವ ಪ್ರಯತ್ನ ಕುತೂಹಲಕಾರಿಯಾಗಿದೆ. ಪಾಶುಪತ ದರ್ಶನದ ಪ್ರಾಚೀನತೆಯನ್ನು ಸಿಂಧು ನಾಗರೀಕತೆಯ ಉಪಲಬ್ಧ ಕುರುಹುಗಳಿಂದ, ಪ್ರಾಚೀನ ತಮಿಳು ಹಾಗೂ ಸಂಸ್ಕೃತ ಕೃತಿಗಳ ಆಧಾರದಿಂದ ಗುರುತಿಸಿದ್ದಾರೆ. ಭೌತ ನಿರೀಶ್ವರ ತಳಹದಿಯಲ್ಲಿ ರೂಪುಗೊಂಡು ವೈದಿಕರ, ಭಾವನಾವಾದಿಗಳ ಸೊತ್ತಾಗಿ ಮಾರ್ಪಾಟುಗೊಂಡ ದರ್ಶನಗಳನ್ನು ಬಣವೆಯಲ್ಲಿನ ಸೂಜಿಯನ್ನು ಹುಡುಕುವಷ್ಟು ತಾಳ್ಮೆಯಿಂದ ಮುಖ್ಯವಾಗಿ ಎಡಪಂಥೀಯ ವಿಚಾರವಾದದ ಮೂಲಕ ಲೇಖಕರು ವಿಶ್ಲೇಷಿಸಿರುವ ಬಗೆಯು ಅಪೂರ್ವವಾದುದು.
ಭಾರತದೇಶವ್ಯಾಪಿಯಾಗಿ ಹರಡಿದ್ದ ಪ್ರಾಚೀನತಮ ಸಿದ್ಧಾಂತವಾಗಿದ್ದ ‘ಲೋಕಾಯತ ದರ್ಶನ’ವು ಕರ್ನಾಟಕದಲ್ಲಿ ಹೇಗೆ ಬಾಳಿ ಬದುಕಿತ್ತೆಂಬ ನೆಲೆಯಲ್ಲಿ ಚರ್ಚೆ ಮಾಡುವಾಗ ಹಿರೇಮಠರು ಬೌದ್ಧ, ಜೈನ, ವೈದಿಕ ಆಕರಗಳನ್ನು ಬಳಸಿಕೊಂಡಿದ್ದಾರೆ. ದೇವಿಪ್ರಸಾದ ಚಟೋಪಾಧ್ಯಾಯರಂಥ ಪ್ರಕಾಂಡ ವಿದ್ವಾಂಸರು ತೋರಿರುವ ಮಾರ್ಗದಲ್ಲಿ ಪರಿಶ್ರಮ ಪಟ್ಟು ನಿರಂತರವಾಗಿ ಪ್ರಯಾಣಿಸುತ್ತಲೆ (ಲೋಕಾಯತ) ಅದರ ಆಚೆ ಇನ್ನೂ ಬಗಿಯುವುದಿದೆ ಎಂಬ ಪ್ರಯತ್ನ ಇಲ್ಲಿಯದು. ಈ ಸಂದರ್ಭದಲ್ಲಿ ದೇವಿಪ್ರಸಾದರ ಗಮನಕ್ಕೆ ಬರದೇ ಇದ್ದಿರಬಹುದಾದ ಸಂಗತಿಗಳತ್ತಲೂ ಕಣ್ಣಿಡಬೇಕಾಗುತ್ತದೆ ಎಂದು ಕನ್ನಡದ ದೇಶಿ ನೆಲೆಯಲ್ಲಿ ಲೋಕಾಯತ ಮಾಡಿರಬಹುದಾದ ಪ್ರಭಾವಗಳನ್ನು ಗುರುತಿಸಿದ್ದಾರೆ. ಅವರೇ ಹೇಳಿದಂತೆ, ಇಂಥ ಯಾವ ಪ್ರಯತ್ನವೂ ಪೂರ್ಣವಲ್ಲವಾದರೂ ಅಧ್ಯಯನ, ಸಂಶೋಧನೆ, ನಿರಂತರ ಪ್ರಕ್ರಿಯೆ ನಡೆಯಬೇಕಾಗಿರುವ ದಾರಿಯು ದೀರ್ಘವಾದುದು. ಈ ದಾರಿಯಲ್ಲಿ ಹೋಗುತ್ತ, ಹೋಗುತ್ತ ಬೇರೆ, ಬೇರೆ ದಿಕ್ಕುಗಳ ಕವಲುಗೊಳ್ಳುವ ದಾರಿಗಳು, ಕಾಣುವ ಬೇರೆ, ಬೇರೆ ಲೋಕಗಳು ನಮ್ಮನ್ನು ಚಕಿತಗೊಳಿಸುತ್ತವೆ, ಸಂತುಷ್ಟರನ್ನಾಗಿ ಮಾಡುತ್ತವೆ ಎಂದಿರುವುದು ಗಮನಾರ್ಹ. ವಸ್ತುನಿಷ್ಠ ದೃಷ್ಟಿಯಿಂದ ದರ್ಶನಗಳನ್ನು ವಿಮರ್ಶಿಸಿ, ಸತ್ಯವನ್ನು ಸಾರುವ ಹಿರೇಮಠರ ನಿರ್ಭೀತ ನಿಲುವು ಮೆಚ್ಚುವಂಥದ್ದಾಗಿದೆ. ಹೀಗೆ, ಕರ್ನಾಟಕದ ಚರಿತ್ರೆ ಮತ್ತು ಸಂಸ್ಕೃತಿ ಪರಂಪೆಯ ಸಮಗ್ರ ತಿಳುವಳಿಕೆಗೆ ಅಗತ್ಯವಿದ್ದ ದರ್ಶನಗಳ ಅಧ್ಯಯನದ ಗಂಭೀರ ಕೊರತೆಯನ್ನು ಈ ದರ್ಶನ ಮಾಲಿಕೆ ತುಂಬಿಕೊಟ್ಟಿದೆ ಎಂಬುದನ್ನು ಮರೆಯಲಾಗದು.
ಭಾರತೀಯ ಬಹುಸಂಸ್ಕೃತಿಯ ವಿರಾಟ್ ದರ್ಶನ ಮಾಡಿಸುವ ಸಂಶೋಧಕರೂ ಪ್ರಗತಿಪರ ಚಿಂತಕರೂ ಆಗಬಲ್ಲ ವಿದ್ವಾಂಸರ ಸಂಖ್ಯೆ ಬೆರಳೆಣಿಕೆಯಷ್ಟು. ಅಲ್ಲಿಯೂ ಹೊಸ ವಾದಗಳನ್ನು ಮಂಡಿಸುವವರು ಇನ್ನೂ ವಿರಳ. ಇಂಥ ವಿರಳ ಸಂಖ್ಯೆಯ ವಿದ್ವಾಂಸರಲ್ಲಿ ಪ್ರೊ.ಎಸ್.ಎಸ್.ಹಿರೇಮಠರು ಪ್ರಮುಖರಾಗಿದ್ದಾರೆ. ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆ ಅವರ ಅಭಿಮತದಂತೆ, ಇಂದಿನ ಅತ್ಯುತ್ತಮ ಸಂಶೋಧಕನೊಬ್ಬ ಎಲ್ಲರನ್ನು ತೃಪ್ತಿಗೊಳಿಸಬಲ್ಲ ಹಾದಿಗಳಿಗಾಗಿ ಹುಡುಕಾಟ ನಡೆಸಲಾರ. ಬದಲು ಎಲ್ಲರನ್ನೂ ಚಿಂತನೆಗೆ ಹಚ್ಚುವ ಪ್ರಶ್ನೆಗಳನ್ನು ಎತ್ತುತ್ತಾನೆ. ಹಿರೇಮಠರು ಅಂಥ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂಬ ಕಾರಣಕ್ಕೆ ಮುಖ್ಯರಾಗುತ್ತಾರೆ. ಕರ್ನಾಟಕ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಯಾರೂ ಎಸ್.ಎಸ್.ಹಿರೇಮಠರ ಸಂಶೋಧನ ಕೃತಿಗಳನ್ನು ಗಮನಿಸದೆ ಮುಂದೆ ಹೋಗುವಂತಿಲ್ಲ ಎಂಬುದು ಅವರ ಶೋಧನೆಯ ಹೆಗ್ಗಳಿಕೆಯಾಗಿದೆ. ಹೀಗೆ, ಎಸ್.ಎಸ್.ಹಿರೇಮಠರ ಸಂಶೋಧನ ಕೃತಿಗಳು ಚಿಂತಕರಿಗೆ, ಸಂಶೋಧಕರಿಗೆ ಹಾಗೂ ಹೋರಾಟಗಾರರಿಗೆ ಅಮೂಲ್ಯವಾದ ಆಕರ ಗ್ರಂಥಗಳಾಗಿವೆ. 
ಪ್ರಸ್ತುತ ಆಯ್ದುಕೊಳ್ಳಲಾಗಿರುವ ಸಂಶೋಧನ ಲೇಖನವು ಪ್ರೊ.ಎಸ್.ಎಸ್.ಹಿರೇಮಠ ಅವರ ‘ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ: ಭಾಗ-2 ಜಾತ್ರೆಗಳು’ ಕೃತಿಯೊಳಗಿನ (ಪುಟ 253ರಿಂದ 295) ಒಂದು ಭಾಗವಾಗಿದೆ. ಕರ್ನಾಟಕದ ಜಾತ್ರೆಗಳನ್ನು ಆಧರಿಸಿ ನಡೆಸಲಾಗಿರುವ ಸಂಶೋಧನೆಯಲ್ಲಿ ದಲಿತ ಸಾಂಸ್ಕೃತಿಕ ಪರಂಪರೆಯ ಅನನ್ಯ ಸಂಗತಿಗಳನ್ನು ಹಿರೇಮಠರು ದಾಖಲಿಸಿದ್ದಾರೆ. ನೆಲಮೂಲ ದಲಿತ ಸಂಸ್ಕೃತಿಯ ವೈಶಾಲ್ಯತೆ, ಮಾತೃಸಂಸ್ಕೃತಿ ಮತ್ತು ದಲಿತತ್ವದ ಅಂತರ್ಯ, ಕೃಷಿ ಸಂಸ್ಕೃತಿ ಮತ್ತು ಜಾತ್ರೆಗಳ ವೈವಿಧ್ಯತೆ, ಕರ್ನಾಟಕದ ದಲಿತರಾಗಿ ಹೊಲೆಯರು ಮತ್ತು ಮಾದಿಗರು, ಹೊಲೆಮಾದಿಗರಲ್ಲಿ ಮೂಡಿಬಂದ ಎಡಗೈ-ಬಲಗೈ ಭೇದದ ಪೂರ್ವೋತ್ತರಗಳ ವಿವೇಚನೆ, ದಲಿತತ್ವದ ಆದಿಮತೆ ಮತ್ತು ಆಧುನಿಕತೆಗಳನ್ನು ಸಮೃದ್ಧವಾದ ಆಕರ-ಆಧಾರಗಳಿಂದ ವಿಶ್ಲೇಷಣೆ ಮಾಡಲಾಗಿದೆ. ದಲಿತ ಸಂಸ್ಕೃತಿಯ ಇತಿಹಾಸ ಮತ್ತು ವರ್ತಮಾನ ಕುರಿತಾದ ಗುರುತರವೂ ಮಾರ್ಗದರ್ಶಿಯೂ ಆದ ಸಂಶೋಧನೆಗೆ ಸಾಕ್ಷಿಯಾಗಿ ‘ಕರ್ನಾಟಕದಲ್ಲಿ ದಲಿತರು’ ಲೇಖನವು ಅಧ್ಯಯನಯೋಗ್ಯವಾಗಿದೆ.ನೆಲಮೂಲ ಸಂಸ್ಕೃತಿಯ ಮಹಾಶೋಧಕರಾಗಿ ಪ್ರೊ.ಎಸ್.ಎಸ್.ಹಿರೇಮಠರ ಕಾಯಕ

ಪ್ರಸ್ತುತ ಆಯ್ದುಕೊಳ್ಳಲಾಗಿರುವ ಸಂಶೋಧನ ಲೇಖನವು ಪ್ರೊ.ಎಸ್.ಎಸ್.ಹಿರೇಮಠ ಅವರ ‘ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ: ಭಾಗ-2 ಜಾತ್ರೆಗಳು’ ಕೃತಿಯೊಳಗಿನ (ಪುಟ 253ರಿಂದ 295) ಒಂದು ಭಾಗವಾಗಿದೆ. ಕರ್ನಾಟಕದ ಜಾತ್ರೆಗಳನ್ನು ಆಧರಿಸಿ ನಡೆಸಲಾಗಿರುವ ಸಂಶೋಧನೆಯಲ್ಲಿ ದಲಿತ ಸಾಂಸ್ಕೃತಿಕ ಪರಂಪರೆಯ ಅನನ್ಯ ಸಂಗತಿಗಳನ್ನು ಹಿರೇಮಠರು ದಾಖಲಿಸಿದ್ದಾರೆ. ನೆಲಮೂಲ ದಲಿತ ಸಂಸ್ಕೃತಿಯ ವೈಶಾಲ್ಯತೆ, ಮಾತೃಸಂಸ್ಕೃತಿ ಮತ್ತು ದಲಿತತ್ವದ ಅಂತರ್ಯ, ಕೃಷಿ ಸಂಸ್ಕೃತಿ ಮತ್ತು ಜಾತ್ರೆಗಳ ವೈವಿಧ್ಯತೆ, ಕರ್ನಾಟಕದ ದಲಿತರಾಗಿ ಹೊಲೆಯರು ಮತ್ತು ಮಾದಿಗರು, ಹೊಲೆಮಾದಿಗರಲ್ಲಿ ಮೂಡಿಬಂದ ಎಡಗೈ-ಬಲಗೈ ಭೇದದ ಪೂರ್ವೋತ್ತರಗಳ ವಿವೇಚನೆ, ದಲಿತತ್ವದ ಆದಿಮತೆ ಮತ್ತು ಆಧುನಿಕತೆಗಳನ್ನು ಸಮೃದ್ಧವಾದ ಆಕರ-ಆಧಾರಗಳಿಂದ ವಿಶ್ಲೇಷಣೆ ಮಾಡಲಾಗಿದೆ. ದಲಿತ ಸಂಸ್ಕೃತಿಯ ಇತಿಹಾಸ ಮತ್ತು ವರ್ತಮಾನ ಕುರಿತಾದ ಗುರುತರವೂ ಮಾರ್ಗದರ್ಶಿಯೂ ಆದ ಸಂಶೋಧನೆಗೆ ಸಾಕ್ಷಿಯಾಗಿ ‘ಕರ್ನಾಟಕದಲ್ಲಿ ದಲಿತರು’ ಲೇಖನವು ಅಧ್ಯಯನಯೋಗ್ಯವಾಗಿದೆ.

Read More »

ಮತ-ಮತಿಗಳ ಸಾಮರಸ್ಯದ ತಾಣವಾಗಿ ‘ಮುತ್ತತ್ತಿ’

ಹೇಮಲತ ಪಿ. ಎನ್.

45 to 52

ಪ್ರಾಚೀನ ಕಾಲದಿಂದಲೂ ಕನ್ನಡ ನಾಡಿನಲ್ಲಿ ಸಾಮರಸ್ಯವನ್ನು ಪ್ರತಿಬಿಂಬಿಸುವ ಅನೇಕ ಘಟನೆಗಳು ನಡೆಯುತ್ತಾ ಬಂದಿವೆ; ಅನೇಕ ಸ್ಥಳಗಳು ರೂಪುಗೊಂಡಿವೆ. ಸಂತ ಸಮುದಾಯವು ಸಾಮಾಜಿಕ ಸಾಮರಸ್ಯಕ್ಕಾಗಿ ಬೋಧಿಸುತ್ತಾ ನಡೆದು ಕನ್ನಡ ಸಂಸ್ಕೃತಿಯಲ್ಲಿ ಬಹುದೊಡ್ಡ ಕ್ರಾಂತಿಯನ್ನುಂಟುಮಾಡಿರುವುದು ಚಾರಿತ್ರಿಕ ಸಂಗತಿಯಾಗಿದೆ. ದಕ್ಷಿಣ ಕರ್ನಾಟಕದ ಮೇರುಸಂತರೂ ಧರೆಗೆ ದೊಡ್ಡವರೂ ಆದ ಶ್ರೀಮಂಟೇಸ್ವಾಮಿ ಅವರ ಪ್ರಭಾವದಿಂದಾಗಿ ಸಾಮಾಜಿಕ ಸ್ವಾಸ್ಥ್ಯವೂ ಸಾಮರಸ್ಯವೂ ಸಾಧಿತಗೊಂಡು ಇಂದಿಗೂ ಜನಸಮುದಾಯಗಳು ಒಕ್ಕಲಾಗಿ ನಡೆದುಕೊಳ್ಳುತ್ತಿದ್ದಾರೆ. ಮಂಟೇಸ್ವಾಮಿ ಪರಂಪರೆಯು ಮೂಲತಃ ಶೈವಮೂಲದ್ದಾದರೂ ವೈಷ್ಣವಮೂಲದ ಮುತ್ತತ್ತಿರಾಯನೊಂದಿಗೆ ಏರ್ಪಟ್ಟ ಸಾಮರಸ್ಯವು ಮಹೋನ್ನತವಾದುದು. ಇದರೊಂದಿಗೆ ಪ್ರಾಕೃತಿಕವಾದ ಶ್ರೀಮಂತ ಸೊಬಗನ್ನು ಹೊಂದಿರುವ ಮುತ್ತತ್ತಿ ತಾಣವು ಮತ-ಮತಿಗಳ ಸಾಮರಸ್ಯದ ನೆಲೆಯಾಗಿ ಇಂದಿಗೂ ಬಹುಜನರನ್ನು ನಿರಂತರವಾಗಿ ಆಕರ್ಷಿಸುತ್ತಿರುವುದು ಕನ್ನಡ ನೆಲದ ಹೆಮ್ಮೆಯಾಗಿದೆ.

Read More »

ಶ್ರೀ ದೇವೀ ಮಹಾತ್ಮೆ ಮತ್ತು ಭಕ್ತಿ ಪರಂಪರೆ

ಶ್ರೀದೇವಿ, ಧನಂಜಯ ಕುಂಬ್ಳೆ

53 to 62

ನಮ್ಮ ಸಂಸ್ಕೃತಿಯಲ್ಲಿ ಹಲವು ರೂಪಗಳೊಂದಿಗೆ, ಹಲವು ಮಾರ್ಪಾಡುಗಳೊಂದಿಗೆ ಭಕ್ತಿ ಪರಂಪರೆಯು ನಾಡಿನಾದ್ಯಂತ ಹಬ್ಬಿಕೊಂಡು ಬಂದಿದೆ. ಸಾಹಿತ್ಯಕವಾಗಿಯೂ, ಸಾಂಸ್ಕೃತಿಕವಾಗಿಯೂ ಭಕ್ತಿ ಪರಂಪರೆಯು ಹಲವು ಆಯಾಮಗಳಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಇದರಿಂದಾಗಿ ಜನಸಾಮಾನ್ಯರಲ್ಲಿರುವ ಭಕ್ತಿಯ ಭಾವ ಹಲವಾರು ವಿಧಾನಗಳ ಮೂಲಕ ಪ್ರಕಟಗೊಳ್ಳುತ್ತದೆ. ದೇವರನ್ನು ಪ್ರೀತಿಯಿಂದ, ಶ್ರದ್ಧಾ-ಭಕ್ತಿಯಿಂದ, ಆತ ನಮ್ಮವನೇ ಎಂಬ ಸಲಿಗೆಯಿಂದ, ಸಮರ್ಪಣಾ ಭಾವದಿಂದ ಹಲವರು ಹಲವು ರೀತಿಯಲ್ಲಿ ಒಲಿಸಿಕೊಳ್ಳುವ, ಸಾಕ್ಷಾತ್ಕರಿಸಿಕೊಳ್ಳುವ ಪ್ರಯತ್ನ ಭಕ್ತಿ ಪರಂಪರೆಯ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ಹೇಳುತ್ತದೆ. ದೇವರ ಅನುಗ್ರಹಕ್ಕಾಗಿ ಜನರು ಇಂತಹ ವಿವಿಧ ಭಕ್ತಿ ಮಾರ್ಗದ ಮೂಲಕ ಪ್ರಯತ್ನಿಸುವುದೇ ಭಕ್ತಿ ಪರಂಪರೆಯ ವೈಶಿಷ್ಟ್ಯತೆ.
ಭಕ್ತಿ ಪರಂಪರೆ ಎಂದಾಕ್ಷಣ ನೆನಪಿಗೆ ಬರುವುದು ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಪರಂಪರೆ. ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಪರಂಪರೆಗಳೆರಡೂ ಕೂಡಾ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಭಕ್ತಿ ಪರಂಪರೆ ಎನ್ನುವುದು ಇವಿಷ್ಟಕ್ಕೆ ಮಾತ್ರ ಸೀಮಿತವಾಗದೆ ಜನರ ನಂಬಿಕೆ, ಆಚರಣೆಗಳನ್ನೂ ಕೂಡಾ ಒಳಗೊಂಡಿರುವುದನ್ನು ಗಮನಿಸಲೇ ಬೇಕು. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಕೂಡಾ ನಂಬಿಕೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ಹಿನ್ನೆಲೆಯಿಂದ ಶ್ರೀದೇವೀ ಮಹಾತ್ಮೆ ಕಥನ ಪರಂಪರೆಯನ್ನು ಭಾರತೀಯ ಭಕ್ತಿ ಪರಂಪರೆಯ ಜೊತೆಗಿಟ್ಟು ಅಧ್ಯಯನ ನಡೆಸುವುದು ಈ ಲೇಖನದ ಉದ್ದೇಶ. ಶಾಕ್ತ್ಯ ಪರಂಪರೆ, ಪುರಾಣ, ಆರಾಧನೆ, ಸಾಹಿತ್ಯ ಮತ್ತು ಯಕ್ಷಗಾನ ಮೊದಲಾದ ಪ್ರಕಾರಗಳಲ್ಲಿ ದೇವೀ ಮಹಾತ್ಮೆಯ ಕಥೆ ಬೆಳೆದುಬಂದ ಬಗೆಯನ್ನು ಈ ಲೇಖನ ವಿಶ್ಲೇಷಿಸಿದೆ.

Read More »

ಗ್ರಂಥಸಂಪಾದನಾ ಕ್ಷೇತ್ರಕ್ಕೆ ವೈ . ಸಿ. ಭಾನುಮತಿಯವರ ಜನಪದೀಯ ಕೊಡುಗೆ

ಮಾನಸ ಎಂ.

63 to 67

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸೃಜನಶೀಲ ಸಾಹಿತ್ಯಕ್ಕೆ ಹೆಚ್ಚು ಒತ್ತುಕೊಡುವ ಕಾಲದಲ್ಲಿ ಗ್ರಂಥಸಂಪಾದನ ಕ್ಷೇತ್ರದ ಆಲಸ್ಯ ಕಾಣಬಹುದು. ಇಂತಹ ಆಲಸ್ಯತನಕ್ಕೆ ಈಡಾಗಬಹುದಾದಂತಹ ಗ್ರಂಥಸಂಪಾದನಾ ಕ್ಷೇತ್ರದಲ್ಲಿ ಸೃಜನಶೀಲ ಸಾಹಿತ್ಯಕ್ಕಿಂತ ಗ್ರಂಥಸಂಪಾದನಾ ಕ್ಷೇತ್ರ ಮುಖ್ಯವೆಂದು ಭಾವಿಸಿ ಹಲವಾರು ಪ್ರಾಚೀನ ಹಳಗನ್ನಡ ಕೃತಿಗಳನ್ನು ಸಂಗ್ರಹಿಸಿ, ಸಂಪಾದಿಸಿ, ಪರಿಷ್ಕರಿಸಿ, ಪ್ರಕಟಣೆ ಮಾಡಿದಂತಹ ಹಲವಾರು ವಿದ್ವಾಂಸರ ಪಟ್ಟಿ ಇದೆ. ಇಂತಹ ವಿದ್ವಾಂಸರಲ್ಲಿ ಅದರಲ್ಲೂ ಮಹಿಳಾ ಗ್ರಂಥಸಂಪಾದಕರ ಸಾಲಿನಲ್ಲಿ ವೈ.ಸಿ. ಭಾನುಮತಿ ಅವರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಭಾನುಮತಿಯವರು ಹಳಗನ್ನಡ ಗ್ರಂಥಸಂಪಾದನೆಗೆ ಸಂಬಂಧಿಸಿದಂತೆ ಹಾಗೂ ಸಂಶೋಧನೆಗೆ ಸಂಬಂಧಿಸಿದಂತೆ ಒಟ್ಟು 50ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಭಾನುಮತಿಯವರ ಆಸಕ್ತಿ ಜನಪದ ಕ್ಷೇತ್ರ. ಇವರು ಜನಪದ ಕ್ಷೇತ್ರದಲ್ಲಿ ನಡೆಸಿದ ಸಂಪಾದನೆಯನ್ನು ಇವರ ಕೃತಿಗಳಲ್ಲಿ ವ್ಯಕ್ತವಾಗಿರುವ ಸಾಂಸ್ಕೃತಿಕ ಚಹರೆಯನ್ನು ಕ್ಷೇತ್ರಕಾರ್ಯದ ಮೂಲಕ, ವಕ್ತೃಗಳ ಮೂಲಕ ವಿಷಯ ಸಂಪಾದನೆಮಾಡಿ ದಾಖಲಿಸಿ, ಪ್ರಕಟಿಸಿರುವುದನ್ನು ಗುರುತಿಸಬಹುದಾಗಿದೆ. ಇದರಿಂದ ಓದುಗರಿಗೆ ಜನಪದ ಕ್ಷೇತ್ರ, ಸಂಪಾದನಾ ಕ್ಷೇತ್ರದ ಮಹತ್ವ ತಿಳಿಯುತ್ತದೆ. 

Read More »

ಕನ್ನಡ ಸಾಹಿತ್ಯದಲ್ಲಿ ಮಹಿಳೆಯ ಸ್ಥಾನಮಾನ

ವನಜಾಕ್ಷಿ ಆರ್ ಹಳ್ಳಿಯವರ; ಪ್ರವೀಣ್ ಕುಮಾರ್ ಜೆ (Translator)

68 to 75

ಕನ್ನಡ ಸಾಹಿತ್ಯಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅನನ್ಯವಾದುದು. ಚರಿತ್ರೆಯ ಎಲ್ಲಾ ಕಾಲಘಟ್ಟಗಳಲ್ಲೂ‌ ಸಾಹಿತ್ಯದ ಮೂಲಕ ವರ್ತಮಾನದ ತಲ್ಲಣಗಳನ್ನು ವಿಶೇಷವಾಗಿ ಮಹಿಳೆಯ ದುಃಖ ದುಮ್ಮಾನಗಳಿಗೆ ಒತ್ತು ಕೊಟ್ಟು ನೋವುಗಳನ್ನು ಮಹಿಳಾ ಸಾಹಿತಿಗಳು ಹೇಗೆ ಚಿತ್ರಿಸಿದ್ದಾರೆ ಎಂಬುದನ್ನು ಉದಾಹರಣೆಗಳ ಮೂಲಕ ಇಲ್ಲಿ ಚರ್ಚಿಸಲಾಗಿದೆ. ವಚನ ಸಾಹಿತ್ಯದಿಂದ ಹಿಡಿದು ಆಧುನಿಕ ಕನ್ನಡ‌ ಸಾಹಿತ್ಯದ ಉಪಲಬ್ಧವಿರುವ ಮಹಿಳಾ ಸಾಹಿತಿಗಳನ್ನು ಗುರುತಿಸಿ ಪ್ರಾತಿನಿಧಿಕವಾಗಿ ಒಂದು ವಚನವನ್ನು ಮತ್ತು ಆಯ್ದ ಸಾಲುಗಳನ್ನು ಈ ಲೇಖನದಲ್ಲಿ ವಿಮರ್ಶಿಸಲಾಗಿದೆ. ಆ ಮೂಲಕ ಕನ್ನಡ ಸಾಹಿತ್ಯದಿಂದ ಮಹಿಳೆ ಸ್ಥಾನಮಾನವನ್ನು ಅರಿಯುವ ಪ್ರಯತ್ನ ಮಾಡಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆ ಸಾಹಿತ್ಯಿಕವಾಗಿ ಎದುರಿಸುತ್ತಿರುವ ಸವಾಲನ್ನು ಕೂಡ ತುಣುಕಾಗಿ ಅರ್ಥೈಸಲಾಗಿದೆ. ಸಾಹಿತ್ಯಿಕ ಸನ್ನಿವೇಶಗಳ ವಾಸ್ತವಕ್ಕಿಂತ ಹೇಗೆ ಭಿನ್ನವಾಗಿದೆ ಮತ್ತು ಭಿನ್ನವಾಗಿಲ್ಲ ಎಂಬುದನ್ನು ನಮೂದಿಸಲಾಗಿದೆ. ಒಟ್ಟಾರೆಯಾಗಿ, ಮಹಿಳಾ ಸಾಹಿತ್ಯ ಬೆಳೆದು ಬಂದ ದಾರಿ, ಸ್ತ್ರೀವಾದ ಮತ್ತು ಮಹಿಳಾ ಸಬಲೀಕರಣದಲ್ಲಿ ಸಾಹಿತ್ಯ ಪ್ರಮುಖ ಪಾತ್ರವನ್ನು ವಹಿಸಿದೆ ಎಂಬುದನ್ನು ಗುರುತಿಸಲಾಗಿದೆ.

Read More »

ಸಾಮಾಜಿಕ ಸುಧಾರಣೆಯಲ್ಲಿ ಕುವೆಂಪುರವರ ಕವಿತೆಗಳ ಪಾತ್ರ

ಜೆ. ರಾಜ ಗುಂಡಾಪುರ

76 to 83

ಹೊಸಗನ್ನಡ ಸಾಹಿತ್ಯದ ಮಹತ್ವದ ಕವಿ, ರಾಷ್ಟ್ರಕವಿ, ವಿಶ್ವಮಾನವ ಪ್ರಜ್ಞೆ ಬೆಳೆಸಿಕೊಂಡು ನಾಡಿಗೆಲ್ಲಾ ಹಬ್ಬಿದ ಕವಿ ಕುವೆಂಪು. 20ನೆಯ ಶತಮಾನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಬೆಳಗಿದ ಮಹಾಕವಿ. ಹೊಸ ಸಾಂಸ್ಕೃತಿಕ ಸ್ಥಿತ್ಯಂತರದಲ್ಲಿ ವಸಾಹತು ಅನುಭವದೊಟ್ಟಿಗೆ ಬೆಳೆಯುತ್ತಲೇ ಕನ್ನಡ ನಾಡು-ನುಡಿಯ ಪುನಶ್ಚೇತನಕ್ಕೆ ಕಾರಣರಾದ ಮಹಾಚೇತನ ಕುವೆಂಪು.
ಕುವೆಂಪು ಕುಪ್ಪಳ್ಳಿಯಲ್ಲಿ ಹುಟ್ಟಿ ವಿಶ್ವಮಾನವರಾದ ಚರಿತೆ ಬಹಳ ದೊಡ್ಡದು. ಮಲೆನಾಡಿನ ದಟ್ಟ ಕಾಡಿನ ಮಧ್ಯದ ಊರಿನಿಂದ ಕುವೆಂಪುರವರ ಚಿಂತನೆಯು ಜಿಗಿದು ಅನಿಕೇತನವಾಗುವ, ನಿರಂಕುಶ ಮತಿಯಾಗುವ ಹಾದಿ ಸಾಧನೆಯ ಹಾದಿಯದು. 
ಕುವೆಂಪುರವರು ನಮ್ಮ ಸಂಸ್ಕೃತಿ, ಆಚಾರ ವಿಚಾರ, ಪುರಾಣ, ವೇದ ಉಪನಿಷತ್ತುಗಳ ಆಳಕ್ಕೆ ಬೇರಿಳಿಸಿ ಸೋಸಿ ಇವತ್ತಿಗೂ ಅವಶ್ಯವಿರುವ ಮಾನವರ ಚಿಂತನೆಗಳನ್ನು ಹೀರಿ, ಪಾಶ್ಚತ್ಯ ಜ್ಞಾನ, ವಿಜ್ಞಾನ, ಸಾಹಿತ್ಯ, ತತ್ವಜ್ಞಾನದ ತಿಳುವಳಿಯನ್ನು ಮೈತುಂಬಿಕೊಂಡು ವೈಚಾರಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವವರು. ಪ್ರಾದೇಶಿಕತೆಯ ವಿಶಿಷ್ಟತೆಯೊಂದಿಗೆ ಜಾಗತಿಕವಾಗಬಲ್ಲ ಕೃತಿಗಳನ್ನು ರಚಿಸಿದರು. ಅವರು ರೂಪಿಸಿಕೊಟ್ಟ ಸರ್ವೋದಯ, ಸಮನ್ವಯ, ಮನಜಮತ ವಿಶ್ವಪಥ, ಪೂರ್ಣ ದೃಷ್ಟಿ ಎಂಬ ತಾತ್ವಿಕ ಚಿಂತನೆಗಳು ಕಲಾತೀತ ಮೌಲ್ಯಗಳಾಗಿವೆ. ಆತ್ಮಶ್ರೀಗಾಗಿ ನಿರಂಕುಶ ಮಿತಿಗಾಗಿ ಎಂದು ಯುವಕರಿಗೆ ಕರೆ ನೀಡುತ್ತಾ ಕುವೆಂಪುರವರು ನೀಡಿದ ವಿಚಾರ ಕ್ರಾಂತಿಗೆ ಆಹ್ವಾನ ಎಂಬುದು ಅಂದಿಗೆ ಸಾಂಸ್ಕೃತಿಕ ಕ್ರಾಂತಿಯೇ ಆಯಿತು. ಜೀವ ಜಗದೊಡನೆ ಮಾನವ ಜನಾಂಗವನ್ನು ಒಳಗೊಳ್ಳುವ ಕುವೆಂಪುರವರ ಚಿಂತನೆಗಳು ವೈಚಾರಿಕತೆಯಿಂದ ಪ್ರಗತಿಪರವಾಗಿವೆ. 

Read More »

ವಚನಗಳಲ್ಲಿ ಖಗೋಳ ವಿಜ್ಞಾನ

ಸುಪ್ರಿಯಾ ಮಲಶೆಟ್ಟಿ

84 to 91

ವಿಜ್ಞಾನ ಮತ್ತು ಆಧ್ಯಾತ್ಮಿಕತೆಯು ಒಂದೇ ಸತ್ಯವನ್ನು ಎರಡು ರೀತಿಯಲ್ಲಿ ಕಾಣುವುದು. ಬ್ರಹ್ಮಾಂಡ ಮತ್ತು ಪಿಂಡಾಂಡ, ಬಾಹ್ಯ ಜಗತ್ತು ಮತ್ತು ಆಂತರಿಕ ಜಗತ್ತು ಎಂಬ ಎರಡು ಜಗತ್ತುಗಳಿವೆ. ಅನುಭವದಿಂದ ಈ ಎರಡು ಕ್ಷೇತ್ರಗಳಿಂದಲೂ ನಮಗೆ ಸತ್ಯ ದೊರಕುವುದು. ಆಂತರಿಕ ಅನುಭವದಿಂದ ಸಂಗ್ರಹಿಸಿರುವುದೇ ಮನಶಾಸ್ತ್ರ , ತತ್ವಶಾಸ್ತ್ರ ಮತ್ತು ಧರ್ಮ. ಬಾಹ್ಯ ಜಗತ್ತಿನಿಂದ ನಮಗೆ ಭೌತವಿಜ್ಞಾನಗಳು ದೊರಕುವವು. ಪೂರ್ಣವಾದ ಸತ್ಯವು ಎರಡು ಕ್ಷೇತ್ರಗಳಿಂದ ಬರುವ ಅನುಭವಗಳಿಗೆ ವಿರೋಧವಿಲ್ಲದೆ ಇರಬೇಕು. ಪಿಂಡಾಂಡವು ಬ್ರಹ್ಮಾಂಡಕ್ಕೆ ಪ್ರಮಾಣವಾಗಿರಬೇಕು. ಸತ್ಯವು ಯಾವ ಕ್ಷೇತ್ರಕ್ಕೆ ಸೇರಿದ್ದರು ಪರಸ್ಪರ ವಿರೋಧಗಳಿರುವುದಿಲ್ಲ ಆಂತರಿಕ ಸತ್ಯಕ್ಕೂ ಬಾಹ್ಯ ಸತ್ಯಕ್ಕೂ ಪರಸ್ಪರ ವಿರೋಧವಿಲ್ಲ. 

Read More »

Govina Haadu: a Unique Folklore Song

Ashirwad R Mathapati

92 to 106

Karnataka has many folklore songs but when listened to Govina Haadu stands out as a unique and popular. When we dive deep into the song and its musical analysis we discover the richness of its uniqueness and the reason for its popularity. First and foremost this folksong is an end to end song as it has a definite end in the sequence unlike other folksongs. The song depicts the situational morale of Punyakoti as well as the predator, the tiger. Secondly, the rhythm used for Govina Haadu is 7/8 which is unique from western rhythms. This requires the meticulous coordination of musicians and singers, as well as those involved in the dance or performance. 7/8 rhythm applies three and a half notes in a bar, and the beats are 123, 1234. The Pallavi(Chorus) is composed in ‘Natabhairavi Raga’ while Charana (stanza) is in ‘Chaarukeshi Raaga’. In the western music it is written in ‘F Major’ scale. The Govina Haadu folk song has influenced the aborigines of the land to accept, tolerate, and make ways for others to live happily. The ethics of the song is proven in the lives of people of Karnataka.

Read More »

Representation of multiculturalism and thriving unity in Kashmir through two regional newspapers: Daily excelsior and Greater Kashmir.

Honey Sharma

107 to 117

The pious land of Kashmir was created from a sacrosanct river by revered sage Kashyap. The ethereal province of Kashmir withholding its Hindu roots has witnessed the torrential rains of violence proselytization, cooperation, displacement and now invigorating breeze of Chinar leaves with unity and multiculturalism. Regional newspapers hold an important value to disseminate news carrying proximity value. Thus, making it a notable carrier for representation of local people’s precious culture. Regional newspapers create a powerful impact on readers portraying the importance of their identity and thus fostering the cultural discourse among people. The resplendent snowy land of Jammu & Kashmir and its hospitable inhabitants carry rich cultural tapestry that is vast just like its high piqued picturesque vanilla draped mountains. In this study the coverage by two prominent regional newspapers, Daily Excelsior and Greater Kashmir of significant aspects of culture, unity in faith, identical traditional delicacies along with rearrival of Hindu festivals in form of news, articles, editorials and features will be examined. 

Read More »

Venkatappa Nayak: King of Keladi (1586–1629)

Jayanna B. R.

118 to 122

Nayakas of Keladi were a dynasty based out of Keladi which is locating in present day Shivamogga district of Karnataka. The dynasty was formed in 1499 CE by Chaudappa Nayaka. The Nayakas started off as feudatories to the mighty and glorious Vijayanagara Empire. Hiriya Venkatappa Nayaka (1586–1629) is considering by scholars as ablest monarch of the clan. He completelywith  freed himself from the overlordship of the relocated Vijayanagar rulers of Penugonda. Italian traveller Pietro Della Valle, who visited his kingdom in 1623, called him an able soldier and administrator. Venkatappa was the most successful Nayaka who extended his kingdom on all sides and drove back the Bijapur forces. He defeated Bhairadevi of Gerusoppa and restricted the Portuguese expansion. To mark the victory against Bhairadevi, he erected a pillar at Hangal. The Keladi state became a power to be reckoning with and the rice and pepper trade of the west passed into the hands of the Nayaks from the Portuguese. Venkatappa is crediting with the construction of a number of forts, temples and the founding of many agraharas (villages granted to learn Brahmanas.

Read More »

ಎಸ್. ಶಾಂತನಾಯ್ಕ ಅವರ ಕಥೆಗಳಲ್ಲಿ ಸಾಮಾಜಿಕ ಪ್ರಜ್ಞೆ

ಉತ್ತಂಗಿ ವೀರೇಶ

123 to 130

ಎಸ್. ಶಾಂತನಾಯ್ಕ ಅವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲೀಷ್ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಕಥೆ, ಕವನ, ಕಾದಂಬರಿ ನಾಟಕ ಕ್ಷೇತ್ರಗಳಲ್ಲಿ ತಮ್ಮನ್ನು ದುಡಿಸಿಕೊಳ್ಳುತ್ತಿದ್ದಾರೆ. ಸಮಕಾಲೀನ ಸಂದರ್ಭದಲ್ಲಿ ಲಂಬಾಣಿ ಬುಡಕಟ್ಟು ಜನರ ಕುಂದುಕೊರತೆಗಳನ್ನು ತಮ್ಮ ಸಾಹಿತ್ಯದ ಮೂಲಕ ಅನಾವರಣಗೊಳಿಸುವ ಸಾಹಸ ಮಾಡುತ್ತಿದ್ದಾರೆ. “ಕಲ್ಲೇ ಕಲ್ಲೇ ಕಥೆ ಹೇಳು” ಕಥಾ ಸಂಕಲನವು ಅವಕಾಶ ವಂಚಿತ ಹಳ್ಳಿಗರ ಬದುಕು ಕುರಿತು ಚಿತ್ರಿಸುತ್ತದೆ.

Read More »

ಸಿನಿಮಾವಾಗಿ ವೈದೇಹಿಯವರ ‘ಗುಲಾಬಿ ಟಾಕೀಸು’ ಹಾಗೂ ‘ಅಮ್ಮಚ್ಚಿಯೆಂಬ ನೆನಪು’

ಮಮತ ಎಂ.

131 to 138

ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತ ಹೆಸರು ವೈದೇಹಿ. ನೇರ ದಿಟ್ಟ ಗಂಭೀರ ನಡೆನುಡಿಯಿಂದ ಕನ್ನಡ ಮಹಿಳಾ ಸಾಹಿತ್ಯದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದವರು. ವೈದೇಹಿಯವರ ಕೃತಿಗಳಲ್ಲಿ ಅನುಭವದ ಮಾಲಿಕೆ ಇದೆ. ಹೆಣ್ಣಿನ ಗಂಭೀರ ಸಮಸ್ಯೆಗಳ ಬಗ್ಗೆ ಕಾಳಜಿ ಇದೆ. ಹಾಗಾಗಿ ಅವರ ಕಥೆಗಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗದೆ ನಾಟಕವಾಗಿ ರಂಗದ ಮೇಲೆ, ಸಿನಿಮಾವಾಗಿ ಪರದೆಯ ಮೇಲೆ ಪ್ರದರ್ಶನಗೊಂಡಿದೆ. ಮಹಿಳಾಪರವಾಗಿ, ಹೆಣ್ಣಿಗೊಂದು ಗಟ್ಟಿ ಧ್ವನಿಯಾಗಿ, ಸಾಂತ್ವನದ ನುಡಿಗಳ ಮೂಲಕ ಓದುಗರನ್ನು ತಲುಪಿದೆ. ಹೆಣ್ಣಿನ ಅನುಭವದ ನೆಲೆಯಿಂದ ಬದುಕನ್ನು ಪರಿಶೀಲನಾತ್ಮಕವಾಗಿ ನೋಡುವ ಕಾಳಜಿಯೊಂದು ಆಕೆಯ ಕೃತಿಗಳಲ್ಲಿ ಕಾಣಿಸುತ್ತದೆ. ಕನ್ನಡದ ಸಿನಿ ಪರದೆಯಲ್ಲಿ ವೈದೇಹಿ ಅವರ ‘ಗುಲಾಬಿ ಟಾಕೀಸು’ ಅದೇ ಹೆಸರಿನಲ್ಲಿ ಕನ್ನಡದ ಕಲಾತ್ಮಕ ಚಿತ್ರವಾಗಿ ಮೂಡಿ ಬಂದಿದೆ. ‘ಅಮ್ಮಚ್ಚಿಯೆಂಬ ನೆನಪು’ ಚಿತ್ರವು ವೈದೇಹಿಯವರ ಮೂರು ಸಣ್ಣ ಕಥೆಗಳನ್ನು ಆಧರಿಸಿ ಪರದೆಯ ಮೇಲೆ ಮೂಡಿಬಂದಿದೆ. ಯಾವುದೇ ಒಂದು ಸಿನೆಮಾಗೆ ಅದರ ಕಥಾ ವಸ್ತುವಷ್ಟೇ ಅಲ್ಲ, ಕಥೆಯೂ ಗಟ್ಟಿಯಾಗಿದ್ದಾಗಲೇ ಅದು ಮನಸ್ಸಿಗೆ ನಾಟುತ್ತದೆ, ಸ್ಮೃತಿ ಪಟಲದಲ್ಲಿ ನೆಲೆಯೂರುತ್ತದೆ. ಉತ್ತಮವಾದ ಕಥೆ ಹಾಗೂ ಕಥಾ ವಸ್ತುವಿನ ಜೊತೆಗೆ, ಅನೇಕ ಸಂದೇಶಗಳನ್ನು ಈ ಚಿತ್ರ ಕೊಡುತ್ತದೆ.

Read More »

ಸಾಮಾಜಿಕ ಹರಿಕಾರ ಬಸವಣ್ಣ

ತ್ರಿವೇಣಿ

139 to 143

ಪ್ರಭುತ್ವದ ಮೇಲಾಟಕ್ಕೆ ಪರ್ಯಾಯವಾಗಿ ಜನಶಕ್ತಿ ರೂಪುಗೊಳ್ಳಬೇಕೆಂದು ಬಯಸುತ್ತಿದ್ದ ಬಸವಣ್ಣನವರು ಕಾಯಕ-ದಾಸೋಹಗಳ ಮುಖೇನ ಅದನ್ನು ಸಾಧಿಸುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಕಾಳಜಿಯುಳ್ಳ ಸಮಾನ ಮನಸ್ಕರ ಸಂಘಟನೆಯಿಂದ ಮಾತ್ರ ಇಂಥದ್ದನ್ನು ಸಾಧಿಸಲು ಸಾಧ್ಯವೆಂಬ ನಿಲುವಿನಲ್ಲಿ, ಜಾತಿ, ವರ್ಣ, ವರ್ಗಗಳೇ ಮೊದಲಾದ ಎಲ್ಲ ಬಂಧನಗಳನ್ನು ಮೀರಿದ ‘ಅನುಭವ ಮಂಟಪ’ ಎಂಬ ಒಂದು ಅದ್ಭುತ ವೇದಿಕೆಯನ್ನು ರೂಪಿಸಿದರು. ಅನುಭವಮಂಟಪದಲ್ಲಿ ಎಲ್ಲರೂ ಸಮಾನಭಾವದಲ್ಲಿ ಸಾಮಾಜಿಕ ಒಳಿತಿನ ಉದ್ದೇಶದಿಂದ ಸೇರಿ ಪರಸ್ಪರ ಚರ್ಚೆ ಮಾಡಿದರು. ಆ ಮೂಲಕ ಅಂದೇ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲನ್ನು ಹಾಕಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇನ್ನಿಲ್ಲದ ಮಹತ್ವ ನೀಡಿದ ಅನುಭವ ಮಂಟಪವು ಶರಣ ಶರಣೆಯರೆಲ್ಲ ಲಿಂಗ-ಜಾತಿಬೇಧಗಳಿಲ್ಲದಂತೆ ಒಗ್ಗೂಡಲು ಇಂಬು ನೀಡಿತು. ಇಂಥ ಹತ್ತು ಹಲವು ವಿಭಿನ್ನ ಪ್ರಯೋಗಗಳ ಅಸ್ಪೃಶ್ಯತೆಯ ಕೊಳಕಿನಿಂದ ಸಮಾಜವನ್ನು ಮುಕ್ತಗೊಳಿಸಿ, ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು’ ಎಂಬ ಅರಿವನ್ನು ಮೂಡಿಸಿದರು. ಮರ್ತ್ಯದೊಳಗೆ ಬದುಕಬೇಕಾದರೆ ಆ ಹೊತ್ತಿನಲ್ಲಿ ಬಾಳ್ವಿಕೆ ಶುದ್ಧತೆಯೇ ಮುಖ್ಯ ಎಂಬುದನ್ನು ಬಸವಣ್ಣನವರು ಇನ್ನಿಲ್ಲದಷ್ಟು ತೀವ್ರ ನೆಲೆಯಲ್ಲಿ ಪ್ರತಿಪಾದಿಸಿದರು. ಜ್ಞಾನ ಮತ್ತು ಕ್ರಿಯೆಗಳಿಂದ ಕೂಡಿದ ಜೀವಕೇಂದ್ರಿತ ಪ್ರಜ್ಞೆ ಎಲ್ಲರಲ್ಲಿ ರೂಪುಗೊಳ್ಳಬೇಕೆಂದು ಬಸವಣ್ಣನವರು ಸದಾ ಹಂಬಲಿಸಿದರು.

Read More »

ಮಡಿವಾಳ ಮಾಚಿ ದೇವರವರ ಜೀವನ ಹಾಗೂ ಸಾಧನೆ

ವಾಣಿ ಡಿ. ಎಸ್.

144 to 150

ಹನ್ನೆರಡನೇ ಶತಮಾನ ಭಾರತೀಯ ಹಾಗೂ ಕರ್ನಾಟಕದ ಇತಿಹಾಸದಲ್ಲಿ ಬಹುಮುಖ್ಯ ಕಾಲಘಟ್ಟ. ಆ ಕಾಲದ ಶಿವಶರಣರು ಜೀವನದ ಹೊಸ ಮೌಲ್ಯಗಳನ್ನು ಎತ್ತಿ ಹಿಡಿದು ವರ್ಣಾಶ್ರಮ, ಧರ್ಮಗಳ ಹಂಗನ್ನು ಕಿತ್ತು ಬಿಸುಟು ಸಮತಾ ತತ್ವದ ತಳಹದಿಯ ಮೇಲೆ ಸಮಾಜವನ್ನು ನಿರ್ಮಿಸಲು ಹೆಣಗಿದವರು. ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಮೇಲು-ಕೀಳು, ಲಕ್ಷಿತ-ಅಲಕ್ಷಿತ, ಸ್ತ್ರೀ-ಪುರುಷರೆಂಬ ಬೇಧ ಭಾವವಿಲ್ಲ ಎಂಬ ತತ್ವವನ್ನು ಬೋಧಿಸಿ ತಮ್ಮದೇ ಆದ ವಿಶಿಷ್ಟ ಧರ್ಮವನ್ನು ಬಸವಾದಿ ಪ್ರಮಥರು ಸಾಧಿಸಿದರು. ತಮ್ಮ ವೃತ್ತಿಯ ಹಿನ್ನೆಲೆಯಲ್ಲಿ ವರ್ಗ, ವರ್ಣ, ಜಾತಿಗಳಿಲ್ಲದ ಸರ್ವ ಸಮಾನತೆಯ ಹೊಸ ಸಮಾಜದ ನಿರ್ಮಾಣಕ್ಕೆ ಅವರು ಶ್ರಮಿಸಿದರು. ಅಂತಹ ವಚನಕಾರ ಮತ್ತು ಕ್ರಾಂತಿಕಾರರಲ್ಲಿ ಪ್ರಮುಖರಾದವರು ಮಡಿವಾಳ ಮಾಚಿದೇವ. ಇವರು ಬಸವಣ್ಣನಂತಹ ಮಹಾನುಭಾವರೊಂದಿಗೆ ಜೊತೆಗೂಡಿ ಸಮಾಜವನ್ನು ತಿದ್ದುವಂತಹ ಕೆಲಸಕ್ಕೆ ಹೋರಾಟದ ಮೂಲಕ ಕೈ ಜೋಡಿಸಿದರು.

Read More »

ಚಂಚಲ ಮನಸ್ಸು

ಭೀಮಣ್ಣ ಎಚ್.

151 to 156

ಮನಸ್ಸು ಹರಿಯುವ ನೀರು ಇದ್ದಹಾಗೆ ಸದಾ ಕಾಲ ಚಲಿಸುತ್ತದೆ. ಮನಸ್ಸನ್ನು ಕುರಿತು ಹಲವು ಜ್ಞಾನಿಗಳು, ಶರಣರು ತಮ್ಮದೇ ಆದ ದೃಷ್ಟಿಕೋನದಲ್ಲಿ ವಿವರಿಸಿದ್ದಾರೆ. ಯಾರು ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಾರೋ ಅವರು ಈ ಜಗದ ಯಾವ ಶಕ್ತಿಯನ್ನು ಗೆಲ್ಲಬಲ್ಲರು ಚಂಚಲವಾದ ಮನಸ್ಸು ಮನುಷ್ಯನ ಸುಖವನ್ನು ಹಾಳುಮಾಡುತ್ತದೆ. ಹುಡುಕಾಟದ ಹಾದಿಯಲ್ಲಿ ನೆಮ್ಮದಿಯೂ ಕೂಡ ಕಳೆದುಕೊಳ್ಳುತ್ತದೆ. ಯಾವುದು ಸತ್ಯ ಯಾವುದು ಸುಳ್ಳು ಎಂದು ಅರಿಯದೆ ಕೊನೆಗೆ ತನ್ನತನವನ್ನು ಕಳೆದುಕೊಂಡು ಹಾಳಾಗುತ್ತದೆ. ಹೀಗೆ ಬಲ್ಲವರು ಮನಸ್ಸನ್ನು ಕುರಿತು ಅಧ್ಯಯನ ಮಾಡಿ ಮನುಷ್ಯನ ಸುಖ ಶಾಂತಿ ಕಾಪಾಡುವಲ್ಲಿ ಮನಸ್ಸು ಹರಿ ಬಿಟ್ಟರೆ ಮನುಷ್ಯ ಜೀವನವೇ ಹಾಳಾಗುತ್ತದೆ ಎಂದು ಹೇಳುತ್ತಾರೆ. ಯಾರು ತಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುತ್ತಾರೋ ಅವರು ಮಹಾನ್ ವ್ಯಕ್ತಿಗಳಾಗುತ್ತಾರೆ ಎಂದು ಹಲವು ಮಹಾನ್ ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Read More »