ಪ್ರಾಚೀನ ಪರಂಪರೆಯಲ್ಲಿ ಕನ್ನಡ ನಾಡು
Main Article Content
Abstract
ಪ್ರಾಚೀನ ಪರಂಪರೆಯಲ್ಲಿ ಕನ್ನಡ ನಾಡು ತನ್ನದೇ ಆದ ವಿಶಿಷ್ಟ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಮಹತ್ವವನ್ನು ಹೊಂದಿದೆ. ದ್ರಾವಿಡ ಭಾಷಾ ವರ್ಗದ ಪ್ರಮುಖ ಭಾಷೆಯಾಗಿರುವ ಕನ್ನಡವು ಭಾರತದ ಸಂವಿಧಾನ ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಒಂದಾಗಿದೆ. ಕರ್ನಾಟಕದ ಪ್ರಾಚೀನತೆ, ಕನ್ನಡ ಭಾಷೆಯ ಉಗಮ ಮತ್ತು ಬೆಳವಣಿಗೆ ಹಾಗೂ ‘ಕರ್ನಾಟಕ’, ‘ಕರ್ಣಾಟಕ’, ‘ಕರುನಾಡು’ ಮುಂತಾದ ಪದಗಳ ನಿಷ್ಪತ್ತಿಯ ಕುರಿತು ಈ ಲೇಖನವು ಚರ್ಚಿಸುತ್ತದೆ. ರಾಮಾಯಣ ಮತ್ತು ಮಹಾಭಾರತಗಳೊಂದಿಗೆ ಕರ್ನಾಟಕದ ವಿವಿಧ ಸ್ಥಳಗಳನ್ನು ಬೆಸೆಯುವ ಐತಿಹ್ಯಗಳು, ಪೌರಾಣಿಕ ನಂಬಿಕೆಗಳು ಹಾಗೂ ಜನಪದ ಪರಂಪರೆಗಳು ಕನ್ನಡಿಗರ ಸಾಂಸ್ಕೃತಿಕ ಅಭಿಮಾನವನ್ನು ಪ್ರತಿಬಿಂಬಿಸುತ್ತವೆ. ಮಹಾಕಾವ್ಯಗಳು, ಪುರಾಣಗಳು, ಶಾಸನಗಳು ಮತ್ತು ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ದೊರೆಯುವ ಕರ್ನಾಟಕದ ಉಲ್ಲೇಖಗಳು ನಾಡಿನ ಪ್ರಾಚೀನ ಪರಂಪರೆಯ ಅಧ್ಯಯನಕ್ಕೆ ಮಹತ್ವದ ಆಧಾರಗಳಾಗಿವೆ. ಪಂಪ, ನಾಗವರ್ಮ, ಕೇಶಿರಾಜ, ಕುಮಾರವ್ಯಾಸ ಮೊದಲಾದ ಕವಿಗಳ ಕೃತಿಗಳಲ್ಲಿ ಕರ್ನಾಟಕದ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳು ಅಭಿವ್ಯಕ್ತಗೊಂಡಿವೆ. ಪ್ರಾಚೀನ ಗ್ರಂಥಗಳಲ್ಲಿನ ಉಲ್ಲೇಖಗಳು, ಶಾಸನಾಧಾರಗಳು ಮತ್ತು ಜನಪ್ರಚಲಿತ ಐತಿಹ್ಯಗಳನ್ನು ಪ್ರತ್ಯೇಕವಾಗಿ ಗುರುತಿಸುವ ಮೂಲಕ ಕನ್ನಡ ನಾಡಿನ ಪರಂಪರೆಯನ್ನು ಸಮಗ್ರವಾಗಿ ಅರ್ಥೈಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮುಗಳಿ ರಂ. ಶ್ರೀ., (1953), ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು: ಉಷಾ ಸಾಹಿತ್ಯ ಮಾಲೆ.
ಕೀರ್ತಿನಾಥ ಕುರ್ತುಕೋಟಿ, (2002), ಯುಗಧರ್ಮ ಹಾಗೂ ಸಾಹಿತ್ಯ, ಧಾರವಾಡ: ಮನೋಹರ ಗ್ರಂಥಮಾಲೆ.
ಶಿವರುದ್ರಪ್ಪ ಜಿ.ಎಸ್. (ಸಂ.), (1974), ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂಪುಟ-1, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.