ವಚನ ಸಾಹಿತ್ಯದಲ್ಲಿ ವಿವಾಹ ಪರಿಕಲ್ಪನೆ
Main Article Content
Abstract
ಈ ಲೇಖನವು ಪ್ರಾಚೀನ ಭಾರತೀಯ ಸಮಾಜದಲ್ಲಿ ರೂಪುಗೊಂಡ ವಿವಾಹ ವ್ಯವಸ್ಥೆಯ ಸ್ವರೂಪ, ಉದ್ದೇಶ ಹಾಗೂ ಸಾಮಾಜಿಕ ಹಿನ್ನೆಲೆಯನ್ನು ಪರಿಶೀಲಿಸುತ್ತಾ, ವಚನಕಾರರು ವಿವಾಹ ಪರಿಕಲ್ಪನೆಗೆ ನೀಡಿದ ಹೊಸ ಮಾನವೀಯ ಆಯಾಮಗಳನ್ನು ವಿಶ್ಲೇಷಿಸುತ್ತದೆ. ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ ಹಾಗೂ ಕಲಕೇತಯ್ಯ ಮೊದಲಾದ ವಚನಕಾರರ ಚಿಂತನೆಗಳಲ್ಲಿ ವಿವಾಹವು ಕೇವಲ ಧಾರ್ಮಿಕ ಸಂಸ್ಕಾರ ಅಥವಾ ಸಂತಾನೋತ್ಪತ್ತಿಯ ಸಾಧನವಲ್ಲ; ಅದು ಪರಸ್ಪರ ಪ್ರೀತಿ, ಸಮಾನತೆ, ಸಹಜೀವನ, ನೈತಿಕತೆ, ಹೊಂದಾಣಿಕೆ ಮತ್ತು ಮಾನವೀಯ ಸಂಬಂಧಗಳ ಆಧಾರದ ಮೇಲೆ ರೂಪುಗೊಳ್ಳಬೇಕಾದ ಸಾಮಾಜಿಕ ಸಂಸ್ಥೆಯಾಗಿದೆ. ಅಕ್ಕಮಹಾದೇವಿ ಮತ್ತು ಕಲಕೇತಯ್ಯನವರ ವಚನಗಳ ಮೂಲಕ ರಕ್ತಸಂಬಂಧದ ವಿವಾಹ ಪದ್ಧತಿ, ಸ್ತ್ರೀ-ಪುರುಷ ಅಸಮಾನತೆ ಹಾಗೂ ಸಾಮಾಜಿಕ ಕಟ್ಟುಪಾಡುಗಳನ್ನು ಪ್ರಶ್ನಿಸಿರುವುದನ್ನು ಶರಣರ ವಿವಾಹ ಪರಿಕಲ್ಪನೆಯು ಜಾತ್ಯತೀತ, ವರ್ಗಾತೀತ, ವರ್ಣಾತೀತ ಮತ್ತು ಲಿಂಗಾತೀತ ಮಾನವೀಯ ನೆಲೆಯಲ್ಲಿ ರೂಪುಗೊಂಡಿದ್ದು, ಸಮಾನತೆ, ಸ್ವಾತಂತ್ರ್ಯ, ಪ್ರೀತಿ ಮತ್ತು ಹೊಂದಾಣಿಕೆಯನ್ನು ಆಧರಿಸಿದ ವಿವಾಹ ವ್ಯವಸ್ಥೆಯ ಅಗತ್ಯವನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಧರ್ಮ, ರಕ್ತಸಂಬಂಧ ಹಾಗೂ ಬಾಹ್ಯ ರೂಪದಂತಹ ನಿರ್ಬಂಧಗಳನ್ನು ಪ್ರಶ್ನಿಸಿ, ಸಂಗಾತಿಯ ಆಯ್ಕೆಯಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಗೆ ಮಹತ್ವ ನೀಡುತ್ತಾರೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಲಬುರ್ಗಿ ಎಂ.ಎಂ. (ಪ್ರ.ಸಂ), (2016), ಬಸವಯುಗದ ವಚನ ಮಹಾಸಂಪುಟ-1 (ಸಿದ್ಧರಾಮೇಶ್ವರ, ಚೆನ್ನಬಸವಣ್ಣ ಮತ್ತು ಬಸವಣ್ಣನವರ ವಚನಸಂಪುಟಗಳು), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಕಲಬುರ್ಗಿ ಎಂ.ಎಂ. (ಪ್ರ.ಸಂ), (2016), ಬಸವೋತ್ತರ ಯುಗದ ವಚನ ಮಹಾಸಂಪುಟ-2 (ಸಂಕೀರ್ಣ ವಚನಸಂಪುಟ ಏಳು), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಕೃಷ್ಣ. ಬಿ.ಆರ್, (1997), ಭಾರತೀಯ ಸಮಾಜದ ಸಮಾಜಶಾಸ್ತ್ರ, ಮೈಸೂರು: ಚೇತನ ಬುಕ್‌ಹೌಸ್.
ಕೃಷ್ಣ. ಬಿ.ಆರ್, (1984), ಭಾರತೀಯ ಸಾಮಾಜಿಕ ಅಧ್ಯಯನ, ಗದಗ: ವಿದ್ಯಾನಿಧಿ ಪ್ರಕಾಶನ.
ಶಿವಾರೆಡ್ಡಿ ಕೆ.ಸಿ, (2004), ಕುವೆಂಪು ಸಮಗ್ರ ಗದ್ಯ ಸಂಪುಟ-2, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಶ್ರೀಕಂಠಕುಮಾರಸ್ವಾಮಿ ಆರ್.ಕೆ., (2012), ಸರಳ ವಿವಾಹ ಮತ್ತು ಶಾಸ್ತ್ರಗಳು, ಮೈಸೂರು: ತನುಮನು ಪ್ರಕಾಶನ.
ಸಂಗಮೇಶ ಸವದತ್ತಿಮಠ (ಸಂ), (2015), ವಿಷಯ ವಚನ ಸಂಪುಟಗಳು ಸಂಪುಟ-8, ಬೀದರ್: ಶ್ರೀ ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠ.
ಶೈಲಜಾ ಉಡಚಣ, (1993), ವಚನಗಳಲ್ಲಿ ಸತಿಪತಿ ಭಾವ, ಗುಲಬರ್ಗಾ: ಗ್ರಿನೋಬಲ್ಸ್ ಪ್ರಕಾಶನ.