ಎಂ.ಎಸ್.ಸುಂಕಾಪುರರ ಶತಕ ಸಾಹಿತ್ಯ ಸಂಪಾದನೆ: ಒಂದು ಅವಲೋಕನ
Main Article Content
Abstract
ಕನ್ನಡ ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ಡಾ. ಎಂ. ಎಸ್. ಸುಂಕಾಪುರ ಅವರ ಕೊಡುಗೆ ಅಪಾರ ಹಾಗೂ ಅನನ್ಯವಾದದ್ದು. ಅವರು ಕಾವ್ಯ, ವಚನ, ಜಾನಪದ ಹಾಗೂ ಶತಕ ಸಾಹಿತ್ಯಗಳನ್ನು ಅತ್ಯಂತ ವೈಜ್ಞಾನಿಕವಾಗಿ ಸಂಪಾದಿಸಿ ನಾಡಿಗೆ ನೀಡಿದ್ದಾರೆ. ನೂರು ಪದ್ಯಗಳನ್ನೊಳಗೊಂಡ, ಭಕ್ತಿ ಮತ್ತು ನೀತಿಬೋಧನಾ ಪ್ರಧಾನವಾದ ವಿಶಿಷ್ಟ ಕಾವ್ಯ ಪ್ರಕಾರ ‘ಶತಕ ಸಾಹಿತ್ಯ’ದ ಸಂಪಾದನೆಯಲ್ಲಿ ಸುಂಕಾಪುರರು ಅನುಸರಿಸಿದ ವೈಧಾನಿಕತೆ ಹಾಗೂ ಅವರ ಪಾಂಡಿತ್ಯವನ್ನು ಇಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ಪ್ರಮುಖವಾಗಿ ಹರಿಹರನ ‘ರಕ್ಷಾಶತಕ-ಪಂಪಾಶತಕ’, ‘ನಿಜಲಿಂಗ ಶತಕ’, ‘ಸೋಮೇಶ್ವರ ಶತಕ’ ಹಾಗೂ ‘ಗುಮ್ಮಟ ಶತಕ’ಗಳ ಸಂಪಾದನಾ ಕಾರ್ಯದಲ್ಲಿ ಅವರು ತೋರಿದ ಬದ್ಧತೆ ಎದ್ದುಕಾಣುತ್ತದೆ. ಹಸ್ತಪ್ರತಿಗಳ ಸಂಗ್ರಹ, ಪಾಠಾಂತರಗಳ ನಿಖರ ಪರಿಷ್ಕರಣೆ, ಕವಿಗಳ ಕಾಲಮಾನದ ಜಿಜ್ಞಾಸೆಗಳ ಇತ್ಯರ್ಥ, ಸುದೀರ್ಘ ಪ್ರಸ್ತಾವನೆ, ಭಾವಾನುವಾದ ಹಾಗೂ ಕಠಿಣ ಶಬ್ದಕೋಶಗಳ ರಚನೆಯ ಮೂಲಕ ಸುಂಕಾಪುರರು ಪ್ರಾಚೀನ ಶತಕ ಕೃತಿಗಳನ್ನು ಇಂದಿನ ಓದುಗರಿಗೆ ಸುಲಭವಾಗಿ ಹಾಗೂ ಶಾಸ್ತ್ರೀಯವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಲಬುರ್ಗಿ ಎಂ. ಎಂ., (1982), ಶಾಸನ ವ್ಯಾಸಂಗ ಭಾಗ-1, ಧಾರವಾಡ: ಕ.ವಿ.ವಿ.
ಹಿರೇಮಠ ಬಿ. ಆರ್., (1976), ಶಾಸನ ಸಂಗ್ರಹ-1, ಧಾರವಾಡ: ಕ.ವಿ.ವಿ.
ಕಲಬುರ್ಗಿ ಎಂ. ಎಂ. (ಸಂ), (1976), ಶಾಸನ ವ್ಯಾಸಂಗ-II, ಧಾರವಾಡ: ಕ.ವಿ.ವಿ.
ವೃಷಭೇಂದ್ರಸ್ವಾಮಿ ಕೆ., (2006), ಶಾಸನಗಳ ರಚನೆ (ಭಾಗ-1), ಮೈಸೂರು: ಪ್ರಸಾರಾಂಗ, ಮೈಸೂರು ವಿ.ವಿ.