ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಕಾದಂಬರಿ

Main Article Content

ಡಾ. ಶಿವಕುಮಾರ ಸಿ.

Abstract

ಬೆಳಗಾವಿ ಜಿಲ್ಲೆಯ ‘ಶಿವಪುರ’ ಎಂಬ ಹಳ್ಳಿಯಲ್ಲಿ ನಡೆಯುವ ಸ್ವಾತಂತ್ರ್ಯ ಪೂರ್ವ ಕಾಲದ ಕಥನವೇ ‘ಕರಿಮಾಯಿ’ ಕಾದಂಬರಿ. ‘ಶಿವಪುರ’ ಚಂದ್ರಶೇಖರ ಕಂಬಾರರ ಸಾಹಿತ್ಯದ ಕೇಂದ್ರ. ಪುರಾಣ, ಇತಿಹಾಸ, ಜನಪದ ಎಲ್ಲವನ್ನೂ ಮೇಳೈಸಿಕೊಂಡಿರುವ ‘ಶಿವಪುರ’ಕ್ಕೆ ಆಧುನಿಕತೆಯ ಪ್ರವೇಶದಿಂದ ಉಂಟಾಗುವ ಬದಲಾವಣೆ ಹಾಗೂ ಪರಿಣಾಮಗಳ ಚಿತ್ರಣ ‘ಕರಿಮಾಯಿ’ ಕಾದಂಬರಿಯ ವಸ್ತು.
‘ಶಿವಪುರ’ ಕೇವಲ ಗತಕಾಲದ ನಂಟಿನೊಂದಿಗೆ ಉಳಿದುಹೋದ ಊರಲ್ಲ. ಕಾಲದಿಂದ ಕಾಲಕ್ಕೆ ಬದಲಾಗುವ ಚಲನಶೀಲತೆಯನ್ನು ಹೊಂದಿರುವ ಗ್ರಾಮ. ಶಿವಪುರದ ಬದುಕು ಸಂಘಟಿತವಾದದ್ದು. ಈ ಸಂಘಟನೆಗೆ ಮೂಲ ಕಾರಣ ಶಿವಪುರದ ದೈವ ಕರಿಮಾಯಿ. ಈ ಕರಿಮಾಯಿಯೇ ಆ ಊರಿನ ಶಕ್ತಿ ಹಾಗೂ ದೌರ್ಬಲ್ಯ. ಊರಿನ ಪರಗೌಡ, ದತ್ತಪ್ಪ, ಲಗುಮವ್ವ, ದೇವರೇಸಿ, ನಿಂಗೂ, ನಾಯೆಲ್ಯಾ ಮುಂತಾದವರಿಗೆ ಕರಿಮಾಯಿಯ ಬಗ್ಗೆ ಅವರದೇಯಾದ ಭಯ, ಭಕ್ತಿ ಇವೆ. ಇಡೀ ಊರಿನ ಶಕ್ತಿಯಾಗಿ, ಭಕ್ತಿಯಾಗಿ, ಪರಂಪರಾಗತವಾಗಿ ಸಾಗಿ ಬಂದಿರುವ ನಂಬಿಕೆಗಳ ಸಾಕ್ಷಿಪ್ರಜ್ಞೆಯಾಗಿ ಕರಿಮಾಯಿ ದೈವವಿದೆ.
ಚಂದ್ರಶೇಖರ ಕಂಬಾರರು ‘ಶಿವಪುರ’ದ ಪುರಾಣ, ಚರಿತ್ರೆ, ಜನಪದವನ್ನು ಕಟ್ಟುತ್ತಲೇ ಆಧುನಿಕ ಶಿಕ್ಷಣದಿಂದಾಗಿ ಆ ಊರಿನಲ್ಲಾದ ಬದಲಾವಣೆಗಳನ್ನು ಚಿತ್ರಿಸಿದ್ದಾರೆ. ಗುಡಸೀಕರ, ಬಸವರಾಜನಂತಹ ಶಿಕ್ಷಿತ ಪಾತ್ರಗಳಿಂದಲೇ ಸಮುದಾಯದ ಬದುಕು ಅನಾಹುತಗಳಿಗೊಳಗಾಗುವ ಬಗೆಯನ್ನು ನಿರೂಪಿಸಿದ್ದಾರೆ. ಕಂಬಾರರು ಗುಡಸೀಕರನ ಬದುಕಿನ ವಿಫಲತೆಯನ್ನು ಸಮಷ್ಟಿಯೊಳಗೆ ತಂದು ಅಲ್ಲಿ ಅವನ ವ್ಯಕ್ತಿತ್ವಕ್ಕೆ ಸೋಲಾಗುವುದನ್ನು ಕಟ್ಟಿಕೊಟ್ಟಿದ್ದಾರೆ.

Article Details

Section

Research Articles

Author Biography

ಡಾ. ಶಿವಕುಮಾರ ಸಿ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕ್ಯಾತನಹಳ್ಳಿ, ಮಂಡ್ಯ.

How to Cite

ಶಿವಕುಮಾರ ಸಿ. (2026). ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಕಾದಂಬರಿ. ಅಕ್ಷರಸೂರ್ಯ (AKSHARASURYA), 16(01), 61 to 68. https://aksharasurya.com/index.php/latest/article/view/2119

References

ಚಂದ್ರಶೇಖರ ಕಂಬಾರ, (2011), ಕರಿಮಾಯಿ, ಬೆಂಗಳೂರು: ಅಂಕಿತ ಪ್ರಕಾಶನ.

ಅನಂತಮೂರ್ತಿ ಯು.ಆರ್., (2008), ಭಾರತೀಪುರ, ಹೆಗ್ಗೋಡು: ಅಕ್ಷರ ಪ್ರಕಾಶನ.

ಮಾಸ್ತಿ ವೆಂಕಟೇಶ ಅಯ್ಯಂಗಾರ್, (2003), ಭಾರತೀಯ ವಿದ್ಯಾಭ್ಯಾಸ ಗುರಿ ಮತ್ತು ಅನುಷ್ಠಾನ, ಬೆಂಗಳೂರು: ಜೀವನ ಕಾರ್ಯಾಲಯ ಟ್ರಸ್ಟ್.