ಹೊಸ ತಲೆಮಾರಿನ ಕವಿಗಳನ್ನು ಕಾಡುತ್ತಿರುವ ಯುದ್ಧ ಮತ್ತು ಪ್ರಕೃತಿ ವಿನಾಶ

Main Article Content

ಅರುಂಧತಿ ಎಫ್. ಬದಾಮಿ

Abstract

ಯುದ್ಧ ಮತ್ತು ಪ್ರಕೃತಿ ವಿನಾಶ ಇವತ್ತು ಜಗತ್ತು ಎದುರಿಸುತ್ತಿರುವ ಬಹು ದೊಡ್ಡ ಜಾಗತಿಕ ಸಮಸ್ಯೆಗಳಾಗಿವೆ. ಯುದ್ಧ ಮತ್ತು ಪ್ರಕೃತಿಯಿಂದಾಗುವ ವಿನಾಶ ರಣಭಯಂಕರವಾಗಿರುತ್ತದೆ. ಮನುಷ್ಯನ ದುರಹಂಕಾರ, ಅತೀ ಆಸೆ, ಅವನ ಕುಬ್ಜ ಮನೋವ್ಯಾಕುಲತೆಗಳು ಇದಕ್ಕೆ ಕಾರಣವಾಗಿವೆ. ಹೊಸ ತಲೆಮಾರಿನ ಕಾವ್ಯದ ಬಾಹ್ಯ ಶರೀರ ಬದಲಾವಣೆಯಾದಂತೆ ಆಂತರಿಕವಾಗಿಯೂ ಆಗಿರುವ ಅನೇಕ ಬದಲಾವಣೆಗಳನ್ನು ಗುರುತಿಸಬಹುದು. ಮತ್ತು ಇದು ಅನಿವಾರ್ಯ ಕೂಡಾ. ಏಕೆಂದರೆ ಪ್ರತಿ ಕಾಲ ಸಂದರ್ಭದ ಪ್ರತಿನಿಧಿಯಾಗಿ ಕವಿ ಪ್ರತಿಸ್ಪಂದಿಸಬೇಕಾದುದು ಕವಿಗಳ ಬಹು ದೊಡ್ಡ ಜವಾಬ್ದಾರಿ. ಸಮಾಜದಲ್ಲಿ ಹೆಚ್ಚುತ್ತಿರುವ ಹಿಂಸಾರತಿಯ ಪ್ರಹಾರ, ಅವ್ಯಾಹತವಾಗಿ ನಡೆದಿರುವ ಅತ್ಯಾಚಾರ, ಶೋಷಣೆ, ಕೋಮುವಾದದ ವಿಕ್ಷಿಪ್ತತೆ, ಅರಾಜಕತೆ ಇತ್ಯಾದಿಗಳನ್ನು ಇಂದಿನ ಸಮಾಜ ಗರ್ಭೀಕರಿಸಿಕೊಂಡಿದೆ. ಇಂತಹ ಅನಾರೋಗ್ಯಕರ ಸಮಾಜಕ್ಕೆ ಔಷಧ ಖಡ್ಗಕ್ಕಿಂತಲೂ ಪ್ರಬಲ ಅಸ್ತ್ರವಾದ ಲೇಖನಿಯಿಂದ ಸಿಗಬೇಕಿದೆ. ಮತ್ತು ಈ ಹಿನ್ನಲೆಯಲ್ಲಿಯೇ ಇವತ್ತಿನ ಬಹುತೇಕ ಸಾಹಿತ್ಯಿಕ ಕೃಷಿಯೂ ಸೃಷ್ಟಿಯಾಗಿದೆ. ಇದು ಪ್ರಸ್ತುತ ತಲೆಮಾರು ಕಂಡು ಎದುರಿಸಿದ ಅತ್ಯಂತ ಭಯಾನಕವಾದ ಸತ್ಯ. ಅದುವೇ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಯುದ್ಧದ ತೀವ್ರತೆ, ಭಯಾನಕತೆ. ಈ ಬಗ್ಗೆ ಅನೇಕ ಕವಿಗಳು ತಮ್ಮ ಕವನಗಳ ಮೂಲಕ ಆ ಭೀಕರತೆಯ ಸಂಕಟವನ್ನು ವಿಷಾದತೆಯನ್ನು ಹೊರಚಲ್ಲಿದ್ದಾರೆ. ಕಾರ್ಗಿಲ್, ಇರಾಕ್-ಅಮೇರಿಕಾ, ಇರಾನ್-ಇರಾಕ್, ಕ್ಯೂಬಾ-ಅಮೇರಿಕಾ, ಪ್ಯಾಲೆಸ್ತೇನ್-ಇಸ್ರೆಲ್, ಉಕ್ರೇನ್- ರಷ್ಯಾ, ಗಾಜಾಪಟ್ಟಿ ಹೀಗೆ ಇಂದಿನ ತಲೆಮಾರು ಅನೇಕ ಯುದ್ಧಗಳನ್ನು ಮತ್ತು ಅದರ ಪರಿಣಾಮಗಳನ್ನು ತಮ್ಮ ಕವನಗಳಲ್ಲಿ ಕಂಡರಿಸಿದ್ದಾರೆ. ನೀರು, ಪ್ರಕೃತಿ ವಿನಾಶ, ರಕ್ಷಣೆ ಈ ಎಲ್ಲದರ ಕುರಿತು ತಮ್ಮ ಕವನಗಳ ಮೂಲಕ ಅಭಿವ್ಯಕ್ತಿಸಿದ್ದಾರೆ.

Article Details

Section

Research Articles

Author Biography

ಅರುಂಧತಿ ಎಫ್. ಬದಾಮಿ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕೆ.ಎಲ್.ಇ ಸಂಸ್ಥೆಯ ಎಸ್.ವಿ.ಎಸ್ ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸವದತ್ತಿ.

 

How to Cite

ಅರುಂಧತಿ ಎಫ್. ಬದಾಮಿ. (2025). ಹೊಸ ತಲೆಮಾರಿನ ಕವಿಗಳನ್ನು ಕಾಡುತ್ತಿರುವ ಯುದ್ಧ ಮತ್ತು ಪ್ರಕೃತಿ ವಿನಾಶ. ಅಕ್ಷರಸೂರ್ಯ (AKSHARASURYA), 8(02), 245 to 252. https://aksharasurya.com/index.php/latest/article/view/1412

References

ಗೊರವರ ಟಿ.ಎಸ್. (ಸಂ), (2021), ಅಕ್ಷರ ಸಂಗಾತ, ಸಂಪುಟ-01: ಸಂಚಿಕೆ-2, 2021.

ಗೊರವರ ಟಿ.ಎಸ್. (ಸಂ), (2024), ಅಕ್ಷರ ಸಂಗಾತ, ಸಂಪುಟ-01: ಸೆಪ್ಟೆಂಬರ್-ನವೆಂಬರ್-2024

ಸಿದ್ದನಗೌಡ ಪಾಟೀಲ (ಸಂ), (2024), ಹೊಸತು ಪತ್ರಿಕೆ, ಡಿಸೆಂಬರ್ 2024.

ಸವಿತಾ ನಾಗಭೂಷಣ, (2018), ದೇವರಿಗೆ ಹೋದೆವು, ರೂಪ ಪ್ರಕಾಶನ, ಶಿವಮೊಗ್ಗ.

Most read articles by the same author(s)