ವಚನ ಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕತೆ

Main Article Content

ಅರುಂಧತಿ ಎಫ್. ಬದಾಮಿ

Abstract

ಪ್ರಸ್ತುತ ವಚನ ಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕತೆ ಎಂಬ ಲೇಖನದಲ್ಲಿ ಪರಂಪರೆ ಮತ್ತು ಆಧುನಿಕತೆ ಎಂದರೇನು? ವಚನಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕತೆಗಳು ಹೇಗೆ ಮುಖಾಮುಖಿಯಾಗುತ್ತವೆ? ಎಂಬುದನ್ನು ಚರ್ಚೆಗೊಳಪಡಿಸಲಾಗಿದೆ. ಶರಣರು ಸಂಪ್ರದಾಯ ಹೇಳಿದ ಪ್ರತಿ ವಿಚಾರಗಳನ್ನು ಮಾನವೀಯತೆ, ವೈಜ್ಞಾನಿಕ ತಳಹದಿಯ ಮೇಲೆ ಗಮನಿಸುತ್ತಾರೆ. ಹನ್ನೆರಡನೆಯ ಶತಮಾನಕ್ಕಿಂತ ಪೂರ್ವದಲ್ಲಿದ್ದ ಸಾಹಿತ್ಯ, ಮತ್ತು ಸಾಂಸ್ಕೃತಿಕ ಅಂಶಗಳು ಹನ್ನೆರಡನೇ ಶತಮಾನದಲ್ಲಿ ಏನೆಲ್ಲ ಬದಲಾವಣೆಗಳನ್ನು ಪಡೆದುಕೊಂಡವು, ಮತ್ತು ಅದಕ್ಕೆ ಕಾರಣಗಳನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. ಪ್ರಸ್ತುತ ಲೇಖನವನ್ನು ಎರಡು ದೃಷ್ಟಿಕೋನದಿಂದ ಅಧ್ಯಯನಕ್ಕೊಳಪಡಿಸಲಾಗಿದೆ. ಒಂದು ವಚನ ಸಾಹಿತ್ಯದ ಬಾಹ್ಯ ಸ್ವರೂಪ, ಇನ್ನೊಂದು ಅದರ ಆಂತರಿಕ ಸ್ವರೂಪ.
ವಚನವೆಂಬ ಪ್ರಕಾರವೇ ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ಮಾದರಿಯಾಗಿದೆ. ಇಲ್ಲಿ ಪರಂಪರಾಗತವಾಗಿ ಜನರೂಢಿಯಲ್ಲಿದ್ದ ಒಡಪು, ಒಗಟುಗಳು, ಗಾದೆ ಮಾತುಗಳನ್ನು ತಮ್ಮ ವಚನದಲ್ಲಿ ಸಹಜವೆಂಬಂತೆ ಬಳಕೆ ಮಾಡಿರುವುದನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಅಂಕಿತನಾಮದ ಬಳಕೆ ವಚನ ಸಾಹಿತ್ಯದ ನೂತನ ಪರಿಕಲ್ಪನೆಯಾಗಿರುವುದನ್ನು ಇಲ್ಲಿ ಗಮನಿಸಲಾಗಿದೆ. ಪರಂಪರಾಗತವಾಗಿ ಕೆಲವರಿಗಷ್ಟೇ ಮೀಸಲಾಗಿದ್ದ ಸಾಹಿತ್ಯ ರಚನೆ ವಚನ ಸಾಹಿತ್ಯದ ಸಂದರ್ಭದಲ್ಲಿ ಆ ಪರಂಪರೆಯನ್ನು ಮುರಿದು ಎಲ್ಲ ಜಾತಿ ವರ್ಗದ ಜನರೂ ಸಾಹಿತ್ಯ ರಚನೆಗೆ ತೊಡಗಿಕೊಂಡರು. ಶರಣರ ದೃಷ್ಟಿಯಲ್ಲಿ ಸ್ವರ್ಗ-ನರಕ, ಪುಣ್ಯ-ಪಾಪ-ಮೋಕ್ಷಗಳ ಪರಿಕಲ್ಪನೆಯೇ ಬೇರೆಯಾಗಿದೆ. ಕಾಯಕ ಮತ್ತು ದಾಸೋಹಗಳು ಶರಣರ ಬಹು ದೊಡ್ಡ ಹೊಸ ಪರಿಕಲ್ಪನೆಗಳು. ಕಾಯಕ ತತ್ವದ ಮೂಲಕ ಅಂದಿನ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿರುವುದನ್ನು ಗಮನಿಸಬಹುದು. ಸ್ತ್ರೀಯರಿಗಂತೂ ವಚನಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಿದರು. ಆಧ್ಯಾತ್ಮಿಕತೆಯ ಸಾಧನೆಗೆ ಸ್ತ್ರೀಯರೇ ದೊಡ್ಡ ತೊಡಕು ಎಂದು ಪರಂಪರಾಗತವಾಗಿ ಬಂದ ಮಾತುಗಳನ್ನು ಶರಣರು ಅಲ್ಲಗಳೆಯುತ್ತಾರೆ. ಮತ್ತು ಎಲ್ಲದರಲ್ಲಿಯೂ ಸ್ತ್ರೀಯರಿಗೆ ಸಮಾನ ಸ್ಥಾನವನ್ನು, ಗೌರವವನ್ನೂ ನೀಡುತ್ತಾರೆ. ಹಾಗೆಯೇ ರಾಜಕೀಯ ಚಿಂತನೆಯಿಂದ ಗಮನಿಸಿದಾಗ ಸಾಮಾಜಿಕ ಸುಧಾರಣೆ ಶರಣಾಂಧೋಲನದ ಮುಖ್ಯ ಗುರಿಯಾದ್ದರಿಂದ ಸ್ವತಃ ಅರಸನೇ ಅಡ್ಡಿ ಬಂದರೂ ಅವರು ಅಳುಕದೆ ಅರಸೊತ್ತಿಗೆಯನ್ನು ಹೇಗೆ ಎದುರಿಸಿದರು ಎಂಬುದನ್ನು ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ.

Article Details

Section

Research Articles

Author Biography

ಅರುಂಧತಿ ಎಫ್. ಬದಾಮಿ

ಸಹಾಯಕ ಪ್ರಾಧ್ಯಾಪಕರು, ಕೆ.ಎಲ್.ಇ. ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯ, ಸವದತ್ತಿ.

How to Cite

ಅರುಂಧತಿ ಎಫ್. ಬದಾಮಿ. (2025). ವಚನ ಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕತೆ. ಅಕ್ಷರಸೂರ್ಯ (AKSHARASURYA), 7(03), 23 to 33. https://aksharasurya.com/index.php/latest/article/view/1187

References

ಬಸವರಾಜು ಎಲ್., (2017), ಅಲ್ಲಮನ ವಚನಗಳು, ಸಪ್ನ ಬುಕ್ ಹೌಸ್, ಬೆಂಗಳೂರು.

ವೀರಣ್ಣ ರಾಜೂರ (ಸಂ), (1993), ಶಿವಶರಣೆಯರ ವಚನ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು.

ಶಿವಾನಂದ ವಿ., (2003), ವಚನ ಸಾಹಿತ್ಯದಲ್ಲಿ ಸಮಾಜೋ-ಭಾಷಿಕ ಚಿಂತನೆಗಳು, ಶ್ರೀಬಸವೇಶ್ವರ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಶಿವಕುಮಾರ ಶೀವಾಚಾರ್ಯ ಮಹಾಸ್ವಾಮಿಗಳು, (2004), ಉಪನಿಷತ್ತು ಮತ್ತು ವಚನಗಳು ತೌಲನಿಕ ಅಧ್ಯಯನ, ಲಿಂಗಾಯತ ಅಧ್ಯಯನ ಅಕಾಡೆಮಿ, ಶ್ರೀ ನಾಗನೂರ ರುದ್ರಾಕ್ಷಿಮಠ, ಬೆಳಗಾವಿ.

Most read articles by the same author(s)