ಕನ್ನಡ ನಾಟಕಗಳಲ್ಲಿ ಭಾಷಾ ಬಳಕೆ
Main Article Content
Abstract
ಸಾಹಿತ್ಯ ಪ್ರಕಾರಗಳಲ್ಲಿ ನಾಟಕ ಒಂದು ಅದ್ಭುತವಾದ ಕಲಾ ಮಾಧ್ಯಮ ಮತ್ತು ಸಮಾಜದಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದು ಆತ್ಮವಿಶ್ವಾಸ, ಸಂವಹನ ಮತ್ತು ಸೃಜನಾತ್ಮಕ ಕೌಶಲ್ಯಗಳನ್ನು ಚರ್ಚಿಸಲು ಮತ್ತು ಅರ್ಥಮಾಡಿಕೊಳ್ಳುವ ವೇದಿಕೆಯಾಗಿದೆ. ನಾಟಕವು ಕೇವಲ ಮನರಂಜನೆಯಲ್ಲ, ಬದಲಿಗೆ ಸಮಾಜದ ಪ್ರತಿಬಿಂಬ. ಪ್ರೇಕ್ಷಕರಿಗೆ ಭಾವನಾತ್ಮಕವಾಗಿ, ಸರಳ ಸಂಭಾಷಣೆಗಳ ಮೂಲಕ ಹಾಗೂ ಆಡುಮಾತಿನ ಸರಳ ಭಾಷೆಯಿಂದ ಜನರ ಮನಸ್ಸನ್ನು ಸೆಳೆಯುತ್ತದೆ. ನಾಟಕವು ಸಮಾಜವನ್ನು ಸರಿಯಾದ ದಾರಿಯಲ್ಲಿ ನಡೆಸುವ ಕೈದೀವಿಗೆಯಾಗಿದೆ.
ನಾಟಕಗಳು ಒಂದು ಕಾಲದ ಜನಜೀವನ ಹಾಗೂ ಕಲಾಭಿರುಚಿಯನ್ನು ಮುಂದಿನ ಜನಾಂಗಕ್ಕೆ ಪರಿಚಯ ಮಾಡಿಕೊಡುವ ಸಾಧನವಾಗಿವೆ. ಧಾರ್ಮಿಕ ಪ್ರವೃತ್ತಿಯವರಿಗೆ ಧರ್ಮಮಾರ್ಗವನ್ನೂ, ವಿಲಾಸಿಗಳಿಗೆ ದಿವ್ಯಪ್ರೇಮದ ಮಹತಿಯನ್ನೂ, ಅಜ್ಞಾನಿಗಳಿಗೆ ಸುಜ್ಞಾನವನ್ನೂ, ಪಂಡಿತರಿಗೆ ವಿಮರ್ಶಾ ವಿಧಾನವನ್ನೂ, ನೊಂದವರಿಗೆ ಸಾಂತ್ವನವನ್ನೂ ನೀಡುತ್ತವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶಾಮರಾಯ ತ.ಸು., (2007), ಕನ್ನಡ ನಾಟಕ, ಪ್ರತಿಭಾ ಪ್ರಕಾಶನ, ಮೈಸೂರು.
ರಾಮನಾಥ ಎಚ್.ಕೆ., (2014), ಕರ್ನಾಟಕ ರಂಗಭೂಮಿ, ಹೇಮಂತ ಸಾಹಿತ್ಯ, ಬೆಂಗಳೂರು.
ಸ್ವಾಮಿ ಬಿ.ಎಸ್., (2011), ಕನ್ನಡ ಜಾನಪದ ಸಾಹಿತ್ಯ, ಚೇತನ ಬುಕ್ ಹೌಸ್, ಮೈಸೂರು.
ಮರುಳಸಿದ್ದಪ್ಪ ಕೆ., (2018) ಆಧುನಿಕ ಕನ್ನಡ ನಾಟಕ, ಅಂಕಿತ ಪುಸ್ತಕ, ಬೆಂಗಳೂರು.