ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ

Main Article Content

ಭಾರತಿ ಎಸ್. ಗದ್ದಿ

Abstract

ಪರಿಸರದ ಕುರಿತಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಪರಿಸರದ ಬಗೆಗಿನ ಕುತೂಹಲ, ವಿಸ್ಮಯ, ತಮ್ಮ ಅನುಭವಗಳನ್ನು ಕಥೆ, ಕಾದಂಬರಿಗಳಲ್ಲಿ ನಿರೂಪಿಸಿದ್ದಾರೆ. ತಮ್ಮ ಬಾಲ್ಯದಿಂದ ಕೃಷಿ ಆರಂಭಿಸಿದ ದಿನಗಳವರೆಗೆ ಪರಿಸರದೊಂದಿಗಿನ ತಮ್ಮ ಸಂಬಂಧವನ್ನು ಹಂಚಿಕೊಂಡಿದ್ದಾರೆ. ಅವರ ಪರಿಸರ ಕಥೆ, ಕಾದಂಬರಿಗಳಲ್ಲಿ ಪಾತ್ರಗಳು ಓದುಗರಿಗೆ ಹತ್ತಿರವಾಗುತ್ತವೆ. ಈ ಕೃತಿಯು ‘ಪ್ರಕೃತಿಯು ನಮ್ಮ ಬದುಕಿನ ಭಾಗ ಮಾತ್ರವಲ್ಲ, ನಾವು ಪ್ರಕೃತಿಯ ಒಂದು ಭಾಗʼ ಎಂಬುದು ಒತ್ತಿ ಹೇಳಿದೆ.
ಮಲೆನಾಡಿನ ಐಸಿರಿಯನ್ನು ವರ್ಣಿಸಿದ ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಕತೆಗಾರ, ಕಾದಂಬರಿಕಾರ, ಅಂಕಣಕಾರ, ಕೃಷಿಕರು ಮತ್ತು ವಿಶಿಷ್ಟ ಚಿಂತಕರು. ತಮ್ಮ ಬದುಕು-ಬರಹಗಳಿಂದ ಜನಮನ ಗೆದ್ದವರು. ಪರಿಸರ ಇವರ ಉಸಿರು. ನಿಸರ್ಗ ಇವರು ಆರಾಧಿಸುವ ದೇವರು. “ಮಾನವನಿಗೆ ಪ್ರಕೃತಿಯ ಅಗತ್ಯವಿದೆ ಹೊರತು ಪ್ರಕೃತಿಗೆ ಮಾನವನ ಅಗತ್ಯವಿಲ್ಲ” ಎಂಬ ಮಹೋನ್ನತ ಸಂದೇಶವನ್ನು ಸಾರಿದ ಕನ್ನಡದ ಪರಿಸರ ಪ್ರೇಮಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಕನ್ನಡದ ಅಪರೂಪದ ಬರಹಗಾರರು.

Article Details

Section

Research Articles

Author Biography

ಭಾರತಿ ಎಸ್. ಗದ್ದಿ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕೆ.ಎಲ್.ಇ. ಸಂಸ್ಥೆಯ ಎಸ್.ಎಸ್.ಎಮ್.ಎಸ್., ಮಹಾವಿದ್ಯಾಲಯ, ಅಥಣಿ.

How to Cite

ಭಾರತಿ ಎಸ್. ಗದ್ದಿ. (2025). ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ. ಅಕ್ಷರಸೂರ್ಯ (AKSHARASURYA), 7(04), 29 to 36. https://aksharasurya.com/index.php/latest/article/view/1297

References

ಕರೀಗೌಡ ಬೀಚನಹಳ್ಳಿ, (2019), ಕೆ.ಪಿ. ಪೂರ್ಣಚಂದ್ರ ತೇಜಸ್ವಿ: ಬದುಕು-ಬರಹ, ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು.

ಮಹೇಶರಯ್ಯ ಎಚ್.ಎಂ., (2002), ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ನವ ಕರ್ನಾಟಕ ಪ್ರಕಾಶನ, ಬೆಂಗಳೂರು.

ಪೂರ್ಣಚಂದ್ರ ತೇಜಸ್ವಿ ಕೆ.ಪಿ., (2012), ಹುಲಿಯೂರಿನ ಸರಹದ್ದು, ಪುಸ್ತಕ ಪ್ರಕಾಶನ, ಮೈಸೂರು.

ಪೂರ್ಣಚಂದ್ರ ತೇಜಸ್ವಿ ಕೆ.ಪಿ., (2012), ಲಿಂಗಬಂದ ಕಥೆ, ಪುಸ್ತಕ ಪ್ರಕಾಶನ, ಮೈಸೂರು.

ಪೂರ್ಣಚಂದ್ರ ತೇಜಸ್ವಿ ಕೆ.ಪಿ., (1980), ಕರ್ವಾಲೋ, ಪುಸ್ತಕ ಪ್ರಕಾಶನ, ಮೈಸೂರು.

Most read articles by the same author(s)