ಆಧುನಿಕ ರಂಗಭೂಮಿಯಲ್ಲಿ ನಿರ್ದೇಶಕರ ಪಾತ್ರ

Main Article Content

ಬಿ. ಅರುಣಕುಮಾರ್
ಕೆ. ರಾಮಕೃಷ್ಣಯ್ಯ

Abstract

"ನಿರ್ದೇಶನ' ಎಂಬ ಕಲ್ಪನೆಯು ಖಚಿತವಾಗಿ ರೂಪಗೊಂಡಿದ್ದು 19ನೇ ಶತಮಾನದ ದ್ವಿತೀಯಾರ್ಧದಲ್ಲಿ ಯುರೋಪಿನಲ್ಲಿ ಆಕಾಲದ ಯೂರೋಪಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಜರಗುತ್ತಿದ್ದ ವೈಜ್ಞಾನಿಕ ಸಂಘಟನೆಗಳಿಗೆ ಸಮಾನಾಂತರವಾಗಿ ಜರ್ಮನಿಯ ಸಾಕ್ಷ್ಯನಿಂಜೆನ್ನಾಂತ್ಯದ ಡ್ಯೂಕ್ಕಾಗಿದ್ದ ಎರಡನೇ ಜಾರ್ಜ್(1829 -1914) ಎಂಬಾತ ರಂಗ ನಿರ್ಮಿತಿಯ ಕೆಲಸವನ್ನು ಒಂದು ಶಾಸ್ತ್ರವಾಗಿ ರೂಪಿಸಿದ ಅದಕ್ಕಾಗಿಯೇ ಆತನಿಗೆ ಪಶ್ಚಿಮದ ರಂಗ ಇತಿಹಾಸದಲ್ಲಿ ಮೊದಲ ನಿರ್ದೇಶಕ ಎಂಬ ಬಿರುದು ಲಭಿಸಿದೆ. ನಟನಿಗಿಂತ ನಾಟಕ ಕೃತಿಯೇ ಮುಖ್ಯವೆಂಬ ಕಲ್ಪನೆ ಮೂಡಿ ಬಂದ ಮೇಲೆ, ನಾಟಕಕ್ಕೆ ಯಾವ ರೀತಿ ರಂಗವನ್ನು ಸಜ್ಜುಗೊಳಿಸಬೇಕು, ನಾಟಕದ ಪಾತ್ರಗಳಿಗೆ ನಟ ರನ್ನು ಆಯ್ಕೆ ಮಾಡಿ ಅವರಿಗೆ ಯಾವ ರೀತಿ ಸೂಚನೆಗಳನ್ನು ಕೊಡಬೇಕು ಎಂಬ ಸಮಸ್ಯೆಗಳು ಕರ್ನಾಟಕದ ಕಲಾಪೋಷಕ ವಿಳಾಸಗಳಲ್ಲಿ ಉದ್ಭವಿಸಿದವು. ರಂಗಭೂಮಿಯ ಚಟುವಟಿಕೆಗಳಲ್ಲಿ ಸಂಘದ ವ್ಯವಸ್ಥಾಪಕ ಹಾಗೂ ನಟರು ಮಾತ್ರವಲ್ಲದೆ ನಾಟಕಗಳನ್ನು ನಿರ್ದೇಶಿಸಿ ರಂಗದ ಮೇಲೆ ಪ್ರಯೋಗಿಸಲು ನಿರ್ದೇಶಕನ ಪಾತ್ರವು ಮುಖ್ಯವಾಯಿತು. 20ನೇಯ ಶತಮಾನದ ಅಸಂಖ್ಯಾ ನಿರ್ದೇಶಕರು ರಂಗಭೂಮಿಯನ್ನು ಬೇರೆ ಬೇರೆ ದಿಕ್ಕಿಗೆ ಬೆಳೆಸಿದ್ದಾರೆ. ಪರಿಷ್ಕರಿಸಿ ಉತ್ತಮಪಡಿಸಿದ್ದಾರೆ. ರಷಿಯಾದ ಕೌನ್ಸಾಆಂಟಿಸ್ಪ್ಯಾನಿಸ್ಲಾವಸ್ಕಿ ಮತ್ತು ಮೇಯರ್ಹೋಲ್ಡ್. ಆಸ್ಟ್ರಿಯಾನ್ಮಾಕ್ರೈಸ್ಟಾರ್ಟ್, ಜರ್ಮನಿಯ ಎರ್ವಿನ್ಸಿಸ್ಕೆಟರ್ ಮತ್ತು ಬರ್ಟೋಲ್ ಬ್ರೇಕ್ಟ್, ಫ್ರಾನ್ಸಿನ ಕಾಕ್ಕೊ ಮತ್ತು ಅಂತೋನಿ ಆರ್ಥೋ, ಪೋಲೆಂಡಿನ ಜೆರ್ರಿಟ್ರೊಟೋವಸ್ಕಿ. ಇಂಗ್ಲೆಂಡಿನ ಪೀಟರ್ಬ್ರೂಕ್ ಇತ್ಯಾದಿ ಇತ್ಯಾದಿ ಹಲವು ಖ್ಯಾತನಾಮರು ಈ ಪಟ್ಟಿ ಒಳಗೆ ಬರುತ್ತಾರೆ. ಇವರೆಲ್ಲರ ಪ್ರಯೋಗಗಳು ಜೊತೆ ಜೊತೆಗೆ ಯುರೋಪಿನಲ್ಲಿ 'ನಿರ್ದೇಶಕ'ನ ಪ್ರತಿಷ್ಠೆ ಏರುತ್ತಾ ಹೋಯಿತು. ನಿರ್ದೇಶಕನೆಂಬಾತ ನಾಟಕವನ್ನು ಬರೀ ದೃಶೀಕರಣಗೊಳಿಸುವ ತಂತ್ರಜ್ಞನಲ್ಲ. ಆತನೇ ರಂಗ ಕೃತಿಯ ಸೃಷ್ಟಿಕರ್ತ. ಆದ್ದರಿಂದ ಅವನೇ ರಂಗ ಮಾಧ್ಯಮದ ಸಾರ್ವಭೌಮ ಕಲಾಕಾರ ಎಂಬ ಇತ್ಯಾದಿವಾದಗಳು ಹುಟ್ಟಿಕೊಂಡವು. ಈ ವಾದದ ಬಗ್ಗೆ ಹಲವು ನೆಲೆಗಳಿಂದ ವಿರೋಧ ವ್ಯಕ್ತವಾಗಿದೆಯಾದರು ಇವತ್ತಿನವರೆಗೂ ಪಶ್ಚಿಮದ ರಂಗಭೂಮಿಯಲ್ಲಿ ನಿರ್ದೇಶಕನ ಪ್ರತಿಷ್ಠೆಯೇನೂ ಕಡಿಮೆಯಾಗಿಲ್ಲ. ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಹವ್ಯಾಸಿ ರಂಗ ಭೂಮಿಯ ಅಬ್ಬರದೊಂದಿಗೆ.

Article Details

Section

Research Articles

Author Biographies

ಬಿ. ಅರುಣಕುಮಾರ್

ಸಂಶೋಧನಾ ವಿದ್ಯಾರ್ಥಿ, ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಕೆ. ರಾಮಕೃಷ್ಣಯ್ಯ

ಪ್ರಾಧ್ಯಾಪಕರು, ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

References

ಆದ್ಯರಂಗಾಚಾರ್ಯ. (1971). ರಂಗನಾಟಕ ಶಾಸ್ತ್ರ. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಅಕ್ಷರ ಕೆ. ವಿ. (2010). ರಂಗ ಪ್ರಪಂಚ. ಅಕ್ಷರ ಪ್ರಕಾಶನ, ಹೆಗ್ಗೋಡು.

ಮರುಳು ಸಿದ್ದಪ್ಪ ಕೆ. (2015). ಆಧುನಿಕ ಕನ್ನಡ ರಂಗಭೂಮಿ. ಅಕಿಂತ ಪ್ರಕಾಶನ. ಬೆಂಗಳೂರು.

ರಂಗನಾಥ ಎಚ್. ಕೆ. (1978), ಕರ್ನಾಟಕ ರಂಗಭೂಮಿ. ಹೇಮಂತ ಸಾಹಿತ್ಯ ಪ್ರಕಾಶನ. ಬೆಂಗಳೂರು.

ರಾಮನಾಥ. (2011). ಡ್ರಾಮಾ ಕ್ಲಬ್, ಕರ್ನಾಟಕ ನಾಟಕ ಅಕಾಡೆಮಿ. ಬೆಂಗಳೂರು.

ಅಕ್ಷರ ಕೆ. ವಿ. (1999). ರಂಗ ಪ್ರಯೋಗ. ಅಕ್ಷರ ಪ್ರಕಾಶನ ಹೆಗ್ಗೋಡು.