ಪಂಪನ ಕಥಾಸತ್ಯ ಮತ್ತು ಕಾವ್ಯ ನಿಷ್ಠೆ ಹಾಗೂ ಕಾಮವಾಸನೆ: ಆದಿ ಪುರಾಣವನ್ನು ಅನುಲಕ್ಷಿಸಿ.

Main Article Content

ಆಯ್. ಬಿ. ಸಾತಿಹಾಳ

Abstract

'ಜನ್ಮಾಂತರಗಳಲ್ಲಿ ನಂಬಿಕೆಯಿಟ್ಟು ಸ್ಮರತತ್ವವನ್ನು ಸಂಪೂರ್ಣವಾಗಿ ವಿರೋಧಿಸುತ್ತ, ದಕ್ಕಿದ ಭೋಗ-ವೈಭವಗಳನ್ನೆಲ್ಲ ಬದಿಗಿಟ್ಟು, ತಲೆಗೂದಲನ್ನು ಕಿತ್ತು ದೀಕ್ಷೆ ಕೈಕೊಂಡು, ಗತಪ್ರಾಣನಾಗುವುದರಿಂದ ಜೀವನಿಗೆ ಪುನತ್ವನ್ಮದಲ್ಲಿ ಅತ್ಯಾನಂತವಾದ ಪದವಿ-ಫಲಗಳು ಸಹಸ್ರಸಾಗರೋಪಮಾನ ಕಾಲದವರೆಗೆ ಸಿಕ್ಕುತ್ತವೆ' ಎನ್ನುವುದು ಜೈನ ಪುರಾಣಗಳ ಪ್ರಬಲವಾದ ನಿಲುವು. ಇದನ್ನು ತನ್ನ ಆದಿಪುರಾಣ ಕಾವ್ಯದಲ್ಲಿ ನಿರೂಪಿಸಲು ಹೊರಟಿರುವ ಪಂಪನಿಗೆ ಇದು ಸುಲಭವಾದ ಕೆಲಸವಾಗಿರಲಿಲ್ಲ. ಬಹುಪ್ರಾಚೀನ ಕಾಲದಿಂದಲೂ ಬೆಳೆದು ಬಂದಿರುವ ಧಾರ್ಮಿಕ ಕಲ್ಪನೆ ಕನ್ನಡ ನಾಡಿನಲ್ಲಿ ಪಂಪನ ಕಾಲಕ್ಕಾಗಲೇ ಪರ-ವಿರೋಧಗಳನ್ನು ಸ್ವೀಕರಿಸುತ್ತ, ಎದುರಿಸುತ್ತ, ಕುಂಟುತ್ತ ಸಾಗಿತ್ತು. ಅಂಥ ಸಂದರ್ಭದಲ್ಲಿ ಪಂಪನು ಧಾರ್ಮಿಕ ಕಲ್ಪನೆಯನ್ನು ಕಾವ್ಯಸತ್ಯವನ್ನಾಗಿಸುವುದರ ಮೂಲಕ ಜೈನಧರ್ಮಕ್ಕೆ ಈ ನಾಡಿನಲ್ಲಿ ವಿಶೇಷವಾದ ರಾಜ್ಯಮನ್ನಣೆಯನ್ನೊ ದಕ್ಕಿಸಿಕೊಟ್ಟು ಜೈನಧರ್ಮಕ್ಕೆ ನವ ಚೈತನ್ಯವನ್ನು ತುಂಬುತ್ತಾನೆ. ಜನಸಾಮಾನ್ಯರಲ್ಲಿ ಜನ್ಮಾಂತರಗಳ ವಿಷಯದಲ್ಲಿ ಇರುವ ನಂಭಿಕೆ-ನಿರ್ಲಕ್ಷ್ಯಗಳನ್ನು ಕಾವ್ಯದ ಸಂದರ್ಭದಲ್ಲಿ ಚರ್ಚಿಸುತ್ತಾನೆ. 'ಜೈನಧರ್ಮಮೆ ಧರ್ಮಮಮಂ' ಎಂದು ಪ್ರತಿಷ್ಠಾಪಿಸಲು ಸಾಕಷ್ಟು ಸ್ಪಷ್ಟಿಕರಣವನ್ನು ನೀಡುತ್ತಾನೆ; ಆ ಮೂಲಕ ತನ್ನ ಕಾವ್ಯ ಸತ್ಯದ ಸತ್ವವನ್ನು ಅನಾವರಣಗೊಳಿಸುತ್ತಾನೆ.

Article Details

Section

Book Review

Author Biography

ಆಯ್. ಬಿ. ಸಾತಿಹಾಳ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನವಲಗುಂದ.

How to Cite

ಆಯ್. ಬಿ. ಸಾತಿಹಾಳ. (2024). ಪಂಪನ ಕಥಾಸತ್ಯ ಮತ್ತು ಕಾವ್ಯ ನಿಷ್ಠೆ ಹಾಗೂ ಕಾಮವಾಸನೆ: ಆದಿ ಪುರಾಣವನ್ನು ಅನುಲಕ್ಷಿಸಿ. ಅಕ್ಷರಸೂರ್ಯ (AKSHARASURYA), 3(06), 97 to 109. https://aksharasurya.com/index.php/latest/article/view/787

References

ನರಸಿಂಹಶಾಸ್ತ್ರಿ ಕೆ. ಎಲ್. (1999) ಆದಿಪುರಾಣ (ಗದ್ಯಾನುವಾದ). ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

Most read articles by the same author(s)