ಭಾರತೀಯ ಜ್ಞಾನಪರಂಪರೆ ಮತ್ತು ಆಧುನಿಕ ಪಠ್ಯಕ್ರಮ: ಒಂದು ಸಮನ್ವಯ ಅಧ್ಯಯನ

Main Article Content

ಬಸವರಾಜ ಎಂ. ಜನಗೌಡ

Abstract

ಭಾರತೀಯ ಜ್ಞಾನಪರಂಪರೆ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು ವೇದಗಳು, ಉಪನಿಷತ್ತುಗಳು, ಶಾಸ್ತ್ರಗಳು, ವಚನ ಸಾಹಿತ್ಯ, ಬೌದ್ಧ–ಜೈನ ತತ್ತ್ವಗಳು ಹಾಗೂ ಜನಪದ ಜ್ಞಾನ ರೂಪಗಳಲ್ಲಿ ವಿಸ್ತಾರಗೊಂಡಿದೆ. ಹಾಗಾಗಿ ಭಾರತೀಯ ಶಿಕ್ಷಣ ಮತ್ತು ಜ್ಞಾನಶಿಸ್ತಿಗೆ ಸರ್ವಶ್ರೇಷ್ಠವಾದ ಮೌಲ್ಯಗಳಿವೆ. ಈ ಜ್ಞಾನಪರಂಪರೆ ಕೇವಲ ಧಾರ್ಮಿಕ ಅಥವಾ ತತ್ತ್ವಚಿಂತನೆಯ ಮಟ್ಟಕ್ಕೆ ಸೀಮಿತವಾಗದೆ ವಿಜ್ಞಾನ, ಗಣಿತ, ವೈದ್ಯಕೀಯ, ಪರಿಸರ, ನೈತಿಕತೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಒಳಗೊಂಡ ಸಮಗ್ರ ಜ್ಞಾನ ವ್ಯವಸ್ಥೆಯಾಗಿದೆ. ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮಗಳು ಪಾಶ್ಚಾತ್ಯ ಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಜ್ಞಾನಪರಂಪರೆಯ ಅಳವಡಿಕೆ ಅತ್ಯಂತ ಅಗತ್ಯವಾಗಿದೆ. ಈ ಲೇಖನವು ಭಾರತೀಯ ಜ್ಞಾನಪರಂಪರೆಯ ಸ್ವರೂಪ, ಅದರ ಶೈಕ್ಷಣಿಕ ಮೌಲ್ಯ ಮತ್ತು ಆಧುನಿಕ ಪಠ್ಯಕ್ರಮದಲ್ಲಿ ಅದರ ಸಮನ್ವಯದ ಸಾಧ್ಯತೆಗಳನ್ನು ವಿಶ್ಲೇಷಿಸುತ್ತದೆ. ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿ–2020ರ ಬೆಳಕಿನಲ್ಲಿ ಭಾರತೀಯ ಜ್ಞಾನಪರಂಪರೆಯ ಪ್ರಸ್ತುತತೆಯನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುತ್ತದೆ.

Article Details

Section

Research Articles

Author Biography

ಬಸವರಾಜ ಎಂ. ಜನಗೌಡ

ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಕನ್ನಡ ವಿಭಾಗ, ಕೆ.ಎಲ್.ಇ. ಸಂಸ್ಥೆಯ ಜಿ.ಐ. ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ನಿಪ್ಪಾಣಿ, ಬೆಳಗಾವಿ.

References

ರಾಷ್ಟ್ರೀಯ ಶಿಕ್ಷಣ ನೀತಿ 2020, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ಭಾರತ ಸರ್ಕಾರ.

ರಾಷ್ಟ್ರೀಯ ಶಿಕ್ಷಣ ನೀತಿ 2020 ಒಂದು ನೋಟ, ಡಾ. ಬರಗೂರು ರಾಮಚಂದ್ರಪ್ಪ, ನವ ಕರ್ನಾಟಕ ಪ್ರಕಾಶನ, ಬೆಂಗಳೂರು- 2022.

ಭಾಷಾ ಅಧ್ಯಯನ: ಸಿದ್ಧಾಂತ ಮತ್ತು ಅನ್ವಯ, ಮಲ್ಲಿಕಾರ್ಜುನ ಬಿ., ಪ್ರಜಾವಾಣಿ ಪ್ರಕಾಶನ, ಬೆಂಗಳೂರು-2022.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-2022, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು-2023.

ಎನ್.ಸಿ.ಇ.ಆರ್.ಟಿ., ಇನ್‌ಫರ್ಮೇಶನ್ ಟೆಕ್ನಾಲಜಿ ಪಠ್ಯಪುಸ್ತಕ (IX-XII), NCERT, ನವದೆಹಲಿ.

ತಂತ್ರಜ್ಞಾನ ಕುರಿತ ಲೇಖನಗಳು, ಇಂಡಿಯನ್ ಎಕ್ಸ್‌ಪ್ರೆಸ್, ಪ್ರಜಾವಾಣಿ, ಉದಯವಾಣಿ ಪತ್ರಿಕೆಗಳ ಆಯ್ದ ಸಂಪಾದಕೀಯಗಳು.

UNESCO Report (2021) – The Role of Mother Tongue in Education.

https://www.prajavani.net/education-career/education/digital-media-education-social-network-880240.html

https://www.encyclopedia.com/science/encyclopedias-almanacs-transcripts-and-maps/science-technology-and-literature

https://sikkimexpress.com/news-details/literature-in-the-age-of-social-media

https://online.maryville.edu/blog/what-is-digital-media/