ಸಾಹಿತ್ಯ ಮತ್ತು ಆಧುನಿಕ ಮಾಧ್ಯಮಗಳು: ಒಂದು ಅವಲೋಕನ

Main Article Content

ಬಸವರಾಜ ಎಂ. ಜನಗೌಡ

Abstract

ಸಾಹಿತ್ಯವು ಮಾನವನ ಭಾವನೆ, ಅನುಭವ, ಕಲ್ಪನೆ ಹಾಗೂ ಚಿಂತನೆಗಳ ಕಲಾತ್ಮಕ ಪ್ರತಿಬಿಂಬವಾಗಿದ್ದು, ಮಾಧ್ಯಮಗಳು ಆ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಶಕ್ತಿಶಾಲಿ ಸಾಧನಗಳಾಗಿವೆ. ಪುರಾತನ ಕಾಲದಿಂದ ಇಂದಿನ ಡಿಜಿಟಲ್ ಯುಗದವರೆಗೆ ಸಾಹಿತ್ಯ ಮತ್ತು ಮಾಧ್ಯಮಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ.
ಪತ್ರಿಕೆ, ಮ್ಯಾಗಜೀನು, ರೇಡಿಯೋ, ದೂರದರ್ಶನ, ಚಲನಚಿತ್ರ ಹಾಗೂ ಇಂಟರ್ನೆಟ್‌ಗಳು ಸಾಹಿತ್ಯದ ಪ್ರಚಾರಕ್ಕೆ ಹೊಸ ಆಯಾಮ ನೀಡುತ್ತಿವೆ. ಇದರಿಂದ ಸಾಹಿತ್ಯವು ಹೆಚ್ಚಿನ ಜನರಿಗೆ ತಲುಪಿ ಸಮಾಜಮುಖಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿದೆ. ಆದರೆ ವಾಣಿಜ್ಯೀಕರಣ, ಅಗ್ಗದ ಮನರಂಜನೆ ಮತ್ತು ಓದಿನ ಸಂಸ್ಕೃತಿಯ ಕುಗ್ಗುವಿಕೆಗಳು ನಮ್ಮನ್ನು ಮೃಗೀಯ ಭಾವನೆಯತ್ತ ಸಾಗಿಸುತ್ತಿವೆ. ಮಾನವ ಸುಸಂಸ್ಕೃತವಾಗಿ ಬೆಳೆಯಲು ಸಾಹಿತ್ಯ ಮತ್ತು ಮಾಧ್ಯಮಗಳ ಅರಿವು ಬೇಕು. ಸಾಹಿತ್ಯ ಮತ್ತು ಮಾಧ್ಯಮಗಳು ಸಮನ್ವಯದಲ್ಲಿ ಸಾಗಿದಾಗಲೇ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪರಿಣಾಮಕಾರಿಯಾಗುತ್ತವೆ ಎಂಬುದು ಈ ಲೇಖನದ ತಾತ್ಪರ್ಯ. ಈ ಸಂದರ್ಭದಲ್ಲಿ ಸಾಹಿತ್ಯ ಮತ್ತು ಆಧುನಿಕ ಮಾಧ್ಯಮಗಳು: ಒಂದು ಅವಲೋಕನ ಎಂಬ ವಿಷಯವನ್ನು ಚರ್ಚಿಸಲಾಗಿದೆ.

Article Details

Section

Research Articles

Author Biography

ಬಸವರಾಜ ಎಂ. ಜನಗೌಡ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕೆ.ಎಲ್.ಇ. ಸಂಸ್ಥೆಯ, ಜಿ.ಆಯ್.ಬಾಗೇವಾಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನಿಪ್ಪಾಣಿ, ಬೆಳಗಾವಿ.

How to Cite

ಬಸವರಾಜ ಎಂ. ಜನಗೌಡ. (2025). ಸಾಹಿತ್ಯ ಮತ್ತು ಆಧುನಿಕ ಮಾಧ್ಯಮಗಳು: ಒಂದು ಅವಲೋಕನ. ಅಕ್ಷರಸೂರ್ಯ (AKSHARASURYA), 8(01), 79 to 87. https://aksharasurya.com/index.php/latest/article/view/1362

References

ಪೂರ್ಣಿಮಾ ಟಿ.ಸಿ., (2006), ಆಧುನಿಕ ಸಂವಹನ ಮಾಧ್ಯಮಗಳು ಮತ್ತು ಕನ್ನಡದ ಅಭಿವೃದ್ಧಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಶಿವರಾಮ ಅಸುಂಡಿ, (2009), ಎಲೆಕ್ಟ್ರಾನಿಕ್ ಮಾಧ್ಯಮ, ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಕಲಬುರಗಿ.

ಶಿವರಾಮ ಅಸುಂಡಿ, (2013), ಮಾಧ್ಯಮ ಮೌಢ್ಯ, ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ, ಕಲಬುರಗಿ.

ಸತೀಶ್ ಕುಮಾರ್ ಅಂಡಿಗೆ, (2021), ಸಮೂಹ ಮಾಧ್ಯಮ ಸಂಶೋಧನೆ, ಸ್ನೇಹಾ ಎಂಟರ್ ಪ್ರೈಸೆಸ್, ಬೆಂಗಳೂರು.

ಶಿವರಾಮ ಅಸುಂಡಿ, (2010), ಹೈದರಾಬಾದ ಕರ್ನಾಟಕ ಸಮೂಹ ಮಾಧ್ಯಮ, ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಕಲಬುರಗಿ.

ಆದಿನಾರಾಯಣಪ್ಪ ಎನ್.ಎ. & ವೀಣಾರಾಣಿ ಪಿ., (2023), ಸಮೂಹ ಮಾಧ್ಯಮ ಮತ್ತು ಸಂವಹನ ಸಮಾಜಶಾಸ್ತ್ರ, ಸಪ್ನ ಬುಕ್ ಹೌಸ್, ಬೆಂಗಳೂರು.

Most read articles by the same author(s)