ಕೆರೆಯ ನೀರು ಕೆಂಪಗೆ

Main Article Content

ಎನ್. ಕನ್ನಿಕರಾಜು
ಮುನಿರಾಜ ಎ.

Abstract

ಪ್ರಾಚೀನ ತಮಿಳು ಸಂಗಂ ಸಾಹಿತ್ಯ ಮತ್ತು ಕನ್ನಡ ಜಾನಪದ ಗೀತೆಗಳಲ್ಲಿನ ಪ್ರಣಯ, ವಿರಹ ಮತ್ತು ಸಾಂಸಾರಿಕ ಬದುಕಿನ ಚಿತ್ರಣಗಳಲ್ಲಿನ ಸಾಮ್ಯತೆಯನ್ನು ತೌಲನಿಕವಾಗಿ ಅಧ್ಯಯನ ಮಾಡಲಾಗಿದೆ. ಎರಡು ಸಾವಿರ ವರ್ಷಗಳ ಹಿಂದಿನ ತಮಿಳು ಕಾವ್ಯಗಳಲ್ಲಿ ಕಂಡುಬರುವ ಪ್ರೇಮಿಗಳ ಮನಸ್ಥಿತಿ, ಪತಿಯ ಅಗಲಿಕೆಯಿಂದ ಬಳಲುವ ಪತ್ನಿಯ ವೇದನೆ ಮತ್ತು ವೇಶ್ಯಾವಾಟಿಕೆಯ ಪ್ರಸ್ತಾಪಗಳು ಕನ್ನಡದ ಜನಪದರ ಬಾಯಲ್ಲಿನ ಹಾಡುಗಳ ಭಾವಕ್ಕೆ ಹತ್ತಿರವಾಗಿವೆ. ಭಾಷೆ ಬೇರೆಯಾದರೂ ದ್ರಾವಿಡ ಸಂಸ್ಕೃತಿಯ ಮೂಲ ಬೇರುಗಳು ಮತ್ತು ಮನುಷ್ಯನ ಸಹಜ ಭಾವನೆಗಳು ಒಂದೇ ಆಗಿವೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಲಾಗಿದೆ. ಕಾಲಘಟ್ಟಗಳು ಬದಲಾದರೂ ಸ್ತ್ರೀ-ಪುರುಷರ ಸಂಬಂಧಗಳು, ಪ್ರೀತಿ ಮತ್ತು ಕೌಟುಂಬಿಕ ಮೌಲ್ಯಗಳ ಅಭಿವ್ಯಕ್ತಿ ಎರಡೂ ಸಾಹಿತ್ಯಗಳಲ್ಲಿ ಏಕರೂಪವಾಗಿ ವ್ಯಕ್ತವಾಗಿವೆ.

Article Details

Section

Research Articles

Author Biographies

ಎನ್. ಕನ್ನಿಕರಾಜು

ಸಹಾಯಕ ಪ್ರಾಧ್ಯಾಪಕರು, ಮದ್ರಾಸ್ ಕ್ರಿಶ್ಚಿಯನ್ ಕಾಲೇಜು, ಚೆನ್ನೈ.

ಮುನಿರಾಜ ಎ.

ಸಹಾಯಕ ಪ್ರಾಧ್ಯಾಪಕರು, ಮದ್ರಾಸ್ ಕ್ರಿಶ್ಚಿಯನ್ ಕಾಲೇಜು, ಚೆನ್ನೈ.

References

ನಣೈ : ಅನು: ಪ್ರೊ. ಡಿ. ಕೃಷ್ಣಮೂರ್ತಿ, ಡಾ. ಕೆ. ಮಲರ್‌ವಿಳಿ, ಸೆಂಟ್ರಲ್ ಇನ್ಸ್‌ ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು, ಚೆನ್ನೈ, ಪ್ರಥಮ ಮುದ್ರಣ-2021

ಗೀತೆಗಳು (ಸಂಪುಟ-1) : ಸಂ. ಮತಿಘಟ್ಟ ಕೃಷ್ಣಮೂರ್ತಿ, ಗುರುಮೂರ್ತಿ ಪ್ರಕಾಶನ, ಬೆಂಗಳೂರು, ಮೊದಲ, 1975

ಕನ್ನಡ ಜಾನಪದ ಗೀತೆಗಳು : ಡಾ. ಬಿ.ಎಸ್. ಗದ್ದಿಗಿಮಠ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಮೂರನೇ ಮುದ್ರಣ-1986

ಜಾನಪದ ಮಾರ್ಗ : ಎಂ.ಎಂ. ಕಲಬುರ್ಗಿ, ಲಕ್ಷ್ಮೀ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್, ಮೈಸೂರು, ಮೊದಲ-1995

ಅಗನಾನೂರು : ಅನು: ಡಾ. ಕೆ. ವಿಜಯಾ ಕುಲಕರ್ಣಿ, ಪ್ರೊ. ಎನ್. ಕೃಷ್ಣಮೂರ್ತಿ, ಸೆಂಟ್ರಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು, ಚೆನ್ನೈ, ಪ್ರಥಮ ಮುದ್ರಣ-2021.