ವಚನಕಾರ್ತಿಯರ ವಚನಗಳಲ್ಲಿ ಭಕ್ತಿ ರೂಪಕದ ಪರಿಕಲ್ಪನೆ
Main Article Content
Abstract
ವಚನಕಾರ್ತಿಯರ ಸಾಹಿತ್ಯದಲ್ಲಿ ‘ಭಕ್ತಿ’ಯ ಕಲ್ಪನೆಯು ಸಾಂಪ್ರದಾಯಿಕ ಮತ್ತು ಆಚರಣಾತ್ಮಕ ನೆಲೆಗಳನ್ನು ಮೀರಿ ವಿಶಿಷ್ಟ ರೂಪಕವಾಗಿ ಬೆಳೆದಿದೆ. ಉಪನಿಷತ್ತು ಹಾಗೂ ಪುರಾಣಗಳ ಕಾಲದ ಕರ್ಮಠ ಭಕ್ತಿಯ ವ್ಯಾಖ್ಯಾನಗಳನ್ನು ಬದಿಗೊತ್ತಿ, ಶರಣೆಯರು ಕಾಯಕ, ದೇಹ ಮತ್ತು ಅನುಭಾವಗಳ ಮೂಲಕ ಭಕ್ತಿಗೆ ಹೊಸ ಭಾಷ್ಯ ಬರೆದರು. ಅಕ್ಕಮಹಾದೇವಿ, ಮೋಳಿಗೆ ಮಹಾದೇವಿ, ಅಮ್ಮುಗೆ ರಾಯಮ್ಮ ಮುಂತಾದವರು ಗುಡಿ-ಗೋಪುರಗಳ ಸ್ಥಾವರ ಭಕ್ತಿಯನ್ನು ತಿರಸ್ಕರಿಸಿ, ‘ದೇಹವೇ ದೇಗುಲ’ ಎಂಬ ತತ್ವವನ್ನು ಪ್ರತಿಪಾದಿಸಿದ್ದಾರೆ. ಪ್ರಾಪಂಚಿಕ ಡಂಬಾಚಾರಗಳು ಹಾಗೂ ವ್ರತ-ನೇಮಗಳನ್ನು ಅಲ್ಲಗಳೆದು, ದೈನಂದಿನ ಬದುಕು, ವೃತ್ತಿ ನಿಷ್ಠೆ ಮತ್ತು ಕಾಯಕಗಳಲ್ಲೇ ದೇವರನ್ನು ಕಾಣುವ ಅವರ ನಿಲುವುಗಳು ಅನನ್ಯವಾಗಿವೆ. ಭಕ್ತಿಯನ್ನು ಕೇವಲ ಪೂಜಾವಿಧಾನವಾಗಿ ನೋಡದೆ, ಅದನ್ನು ಬದುಕಿನ ಅವಿಭಾಜ್ಯ ಅಂಗವಾಗಿ ಹಾಗೂ ಲಿಂಗಭೇದವಿಲ್ಲದ ಸಮಾನತೆಯ ಸಾಧನವಾಗಿ ಕಟ್ಟಿಕೊಟ್ಟ ಸ್ತ್ರೀ ಸಂವೇದನೆಯ ತಾತ್ವಿಕ ನೆಲೆಗಳನ್ನು ಇಲ್ಲಿ ವಿಸ್ತೃತವಾಗಿ ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಲಬುರ್ಗಿ ಎಂ. ಎಂ. (ಪ್ರ.ಸಂ.), (1993), ಸಮಗ್ರ ವಚನ ಸಂಪುಟ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕರ್ನಾಟಕ ಸರ್ಕಾರ.
ಮೈಸೂರು ವಿಶ್ವವಿದ್ಯಾನಿಲಯ (ಸಂ.), (1966), ಶ್ವೇತಾಶ್ವತರ ಉಪನಿಷತ್ತು, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.
ನಾರಾಯಣಾಚಾರ್ಯ ಕೆ. ಎಸ್., (2021), ಭಗವದ್ಗೀತೆ, ಹುಬ್ಬಳ್ಳಿ: ಸಾಹಿತ್ಯ ಪ್ರಕಾಶನ.
ಭೂಸನೂರುಮಠ ಎಸ್. ಎಸ್., (1969), ಶೂನ್ಯಸಂಪಾದನೆಯ ಪರಾಮರ್ಶನ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.
ನಾರಾಯಣ ಕೆ. ವಿ., (1996), ಸೊಸ್ಸೂರ್ ಕನ್‌ಸ್ಟ್ರಕ್ಷನ್ ಥಿಯರಿ: ತೊಂಡು ಮೇವು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.