ಕನ್ನಡ ಕಾದಂಬರಿಗಳಲ್ಲಿನ ಸಾಮಾಜಿಕ ಸ್ಥಿತ್ಯಂತರಗಳು: ಒಂದು ವಿಶ್ಲೇಷಣೆ

Main Article Content

ಮಹಾಲಿಂಗ ಪ್ರಭು

Abstract

ಜಾತಿಯ ಮೂಲ ಮತ್ತು ಅರ್ಥ: ‘ಜಾತಿ’ ಎಂಬ ಪದವು ಪೋರ್ಚುಗೀಸ್ ಮೂಲದ ‘ಕಾಸ್ಟಾ’ (Casta) ಎಂಬ ಪದದಿಂದ ಬಂದಿದೆ, ಇದರರ್ಥ ‘ಸಂತತಿ’ ಅಥವಾ ‘ಅನುವಂಶೀಯ ಗುಣ’. ಸಮಾಜಶಾಸ್ತ್ರಜ್ಞರಾದ ಎಸ್.ವಿ. ಕೇತ್ಕರ್, ಮೆಕೈವರ್ ಮತ್ತು ಪೇಜ್ ಅವರ ಪ್ರಕಾರ, ಜಾತಿಯು ಹುಟ್ಟಿನಿಂದಲೇ ನಿರ್ಧಾರವಾಗುವ ಒಂದು ಶ್ರೇಣೀಕೃತ ವ್ಯವಸ್ಥೆಯಾಗಿದ್ದು, ಇದನ್ನು ಬದಲಾಯಿಸಲು ಸಾಧ್ಯವಿಲ್ಲದ ಸಾಮಾಜಿಕ ಚೌಕಟ್ಟಾಗಿದೆ. 
ವ್ಯಕ್ತಿಯ ಹುಟ್ಟಿನ ಆಧಾರದ ಮೇಲೆ ಅವನ ಸಾಮಾಜಿಕ ಸ್ಥಾನಮಾನ, ಆಹಾರ ಪದ್ಧತಿ, ವಿವಾಹ ಸಂಬಂಧಗಳು ಮತ್ತು ವೃತ್ತಿಯನ್ನು ಜಾತಿ ವ್ಯವಸ್ಥೆಯು ನಿರ್ಧರಿಸುತ್ತದೆ. ಮಾನವರೆಲ್ಲರೂ ಹುಟ್ಟಿನಿಂದ ಸಮಾನರಾಗಿದ್ದರೂ, ಸಾಮಾಜಿಕ ವ್ಯವಸ್ಥೆಯು ಮೇಲು-ಕೀಳು, ಬಡವ-ಬಲ್ಲಿದ ಎಂಬ ಭೇದಭಾವಗಳನ್ನು ಸೃಷ್ಟಿಸಿದೆ. ಆದರೆ, ಆಧುನಿಕ ಕಾಲದಲ್ಲಿ ವ್ಯಕ್ತಿಯ ಘನತೆ ಮತ್ತು ಗೌರವವು ಕೇವಲ ಅನುವಂಶೀಯತೆಯಿಂದಲ್ಲದೆ, ಆತನ ಸ್ವ-ಸಾಮರ್ಥ್ಯದಿಂದಲೂ ನಿರ್ಧರಿತವಾಗುತ್ತದೆ ಎಂಬುದು ಗಮನಾರ್ಹ. 

Article Details

Section

Research Articles

Author Biography

ಮಹಾಲಿಂಗ ಪ್ರಭು

ಸಹಾಯಕ ಪ್ರಾಧ್ಯಾಪಕರು, ದಯಾನಂದ ಸಾಗರ್ ಬಿಜಿನೆಸ್ ಅಕಾಡೆಮಿ, ಬೆಂಗಳೂರು.

How to Cite

ಮಹಾಲಿಂಗ ಪ್ರಭು. (2026). ಕನ್ನಡ ಕಾದಂಬರಿಗಳಲ್ಲಿನ ಸಾಮಾಜಿಕ ಸ್ಥಿತ್ಯಂತರಗಳು: ಒಂದು ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 17(05), 122 to 129. https://aksharasurya.com/index.php/latest/article/view/2375

References

ಸಾರಾ ಅಬೂಬಕ್ಕರ್, (1984), ಚಂದ್ರಗಿರಿ ತೀರದಲ್ಲಿ, ಬೆಂಗಳೂರು: ಚಂದ್ರಗಿರಿ ಪ್ರಕಾಶನ.

ಶಿವರುದ್ರ ಕೆ. ಕಲೋಲಿಕರ್, (1987), ಹೊಲೇಗೇರಿಯ ರಾಜಕುಮಾರ, ಧಾರವಾಡ: ಅಂಜನಾ ಪ್ರಕಾಶನ.

ಪೂರ್ಣಚಂದ್ರ ತೇಜಸ್ವಿ ಕೆ.ಪಿ., (1985), ಚಿದಂಬರ ರಹಸ್ಯ, ಮೈಸೂರು: ಪುಸ್ತಕ ಪ್ರಕಾಶನ.

ವೀರಭದ್ರಪ್ಪ ಕುಂ., (1982), ಹಸಿಮಾಂಸ ಮತ್ತು ಹದ್ದುಗಳು, ಹೊಸಪೇಟೆ: ಲೋಹಿಯಾ ಪ್ರಕಾಶನ.

ದೇವನೂರ ಮಹಾದೇವ, (1988), ಕುಸುಮಬಾಲೆ, ಹೊಸಪೇಟೆ: ಲೋಹಿಯಾ ಪ್ರಕಾಶನ.

ಜವರಯ್ಯ ಮ.ನ., (1971), ಮಾಗಿ, ಮೈಸೂರು: ಮಧು ಪ್ರಕಾಶನ.

ಅರವಿಂದ ಮಾಲಗತ್ತಿ, (1988), ಕಾರ್ಯ, ಸಾಗರ: ಸಾಗರ ಪ್ರಕಾಶನ.

ಲಂಕೇಶ್ ಪಿ., (1978), ಮುಸ್ಸಂಜೆ ಕಥಾಪ್ರಸಂಗ, ಬೆಂಗಳೂರು: ಲಂಕೇಶ್ ಪ್ರಕಾಶನ.

ವೀರಭದ್ರಪ್ಪ ಕುಂ., (1993), ಕಪ್ಪು, ಚನ್ನಗಿರಿ: ಪಲ್ಲವ ಪ್ರಕಾಶನ.

Most read articles by the same author(s)