ಇತ್ತೀಚಿನ ಮಹಿಳಾ ಕಾವ್ಯ: ಸ್ತ್ರೀ ಸಂವೇದನೆಯ ನೆಲೆಗಳು
Main Article Content
Abstract
ಆಧುನಿಕ ಕನ್ನಡ ಮಹಿಳಾ ಕಾವ್ಯವು ಕೇವಲ ಮುಕ್ತ ಅಭಿವ್ಯಕ್ತಿಯಾಗಿರದೆ, ಪುರುಷ ಪ್ರಧಾನ ಸಮಾಜದ ಚೌಕಟ್ಟುಗಳನ್ನು ಮುರಿಯುವ ಮತ್ತು ಹೆಣ್ಣಿನ ಅಸ್ಮಿತೆಯನ್ನು ಕಟ್ಟಿಕೊಡುವ ಪ್ರಬಲ ಮಾಧ್ಯಮವಾಗಿ ಬೆಳೆದಿದೆ. ಸ್ವಾತಂತ್ರ್ಯ ಚಳುವಳಿ, ದಲಿತ-ಬಂಡಾಯ ಸಾಹಿತ್ಯ ಹಾಗೂ ಸಾಂಸ್ಥಿಕ ಪ್ರಯತ್ನಗಳ ಹಿನ್ನೆಲೆಯಲ್ಲಿ ರೂಪುಗೊಂಡ ಈ ಕಾವ್ಯಪರಂಪರೆಯು ಅಕ್ಕಮಹಾದೇವಿಯ ವಿಚಾರಧಾರೆಗಳನ್ನು ಹೊಸ ಕಾಲಘಟ್ಟದಲ್ಲಿ ಮರುಪರಿಶೀಲಿಸುತ್ತಿದೆ. ವಿವಿಧ ಕವಯಿತ್ರಿಯರ ಕವನಗಳು ಸಾಮುದಾಯಿಕ ಪ್ರಜ್ಞೆ, ಪುರಾಣ ಪಾತ್ರಗಳ ವಾಸ್ತವಿಕ ಮರುಸೃಷ್ಟಿ, ದೈನಂದಿನ ಬದುಕಿನ ತಲ್ಲಣಗಳು ಮತ್ತು ಲಿಂಗ ಸಮಾನತೆಯ ಹಂಬಲವನ್ನು ದಿಟ್ಟವಾಗಿ ಅಭಿವ್ಯಕ್ತಿಸಿವೆ. ಸಂಪ್ರದಾಯ ಮತ್ತು ಆಧುನಿಕತೆಯ ಮುಖಾಮುಖಿಯಲ್ಲಿ ಸ್ತ್ರೀ ಸಂವೇದನೆಯ ವಿವಿಧ ನೆಲೆಗಳನ್ನು ಶೋಧಿಸುತ್ತಾ, ಸಾಮಾಜಿಕ ಸುಧಾರಣೆ ಹಾಗೂ ಸಮಕಾಲೀನ ಸವಾಲುಗಳಿಗೆ ಮಹಿಳಾ ಕಾವ್ಯವು ಹೇಗೆ ಪ್ರಬಲವಾಗಿ ಸ್ಪಂದಿಸುತ್ತಿದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಪುಷ್ಪ ಎಚ್. ಎಲ್., (1992), ಅಮೃತಮತಿಯ ಸ್ವಾಗತ, ಬೆಂಗಳೂರು: ಅನ್ವೇಷಣೆ ಪ್ರಕಾಶನ.
ಷರೀಫಾ ಕೆ., (1997), ನೂರೇನಳ ಅಂತರಂಗ, ಬೆಂಗಳೂರು: ನಿಹರ್ಷ ಪ್ರಕಾಶನ.
ಲಲಿತಾನಾಯಕ್ ಬಿ. ಟಿ., (1997), ಬಿದಿರುಮೆಳೆ ಕಂಟಿಯಲಿ, ಬೆಂಗಳೂರು: ಅಂಕಿತ ಪ್ರಕಾಶನ.
ಲಲಿತಾ ಸಿದ್ದಬಸವಯ್ಯ, (2001), ಮೊದಲ ಸಿರಿ, ಬೆಂಗಳೂರು: ಚಿನ್ಮಯಿ ಪ್ರಕಾಶನ.
ಶ್ಯಾಮಸುಂದರರಾವ್ ಡಿ. ಕೆ. (ಸಂ), (2011), ಬೆಳಗೆರೆ ಜಾನಕಮ್ಮ ಕಲ್ಯಾಣ, ಬೆಂಗಳೂರು: ಕಾಮಧೇನು ಪುಸ್ತಕ ಭವನ.
ಮಂಜುಳಾ ಹುಲಿಕುಂಟೆ, (2024), ಹಿಪ್ಪೆ ಹೂವಿನ ಘಮಲು, ಬೆಂಗಳೂರು: ಕೌದಿ ಪ್ರಕಾಶನ.