ಸಿದ್ದಯ್ಯ ಪುರಾಣಿಕರ ಕಾವ್ಯಗಳಲ್ಲಿ ನಾಡು ನುಡಿಯ ಚಿಂತನೆ
Main Article Content
Abstract
ಆಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಸಿದ್ದಯ್ಯ ಪುರಾಣಿಕರು ನಾಡು-ನುಡಿಯ ಬಗ್ಗೆ ಅಪಾರ ಪ್ರೇಮವನ್ನು ಅಭಿವ್ಯಕ್ತಿಸಿದ ಪ್ರಮುಖ ಕವಿ. ಕನ್ನಡಿಗರಲ್ಲಿ ಬೇರೂರಿರುವ ಪರಭಾಷಾ ವ್ಯಾಮೋಹದಿಂದ ಕಣ್ಮರೆಯಾಗುತ್ತಿರುವ ತಾಯ್ನುಡಿಯ ರಕ್ಷಣೆಯ ಬಗ್ಗೆ ಇವರ ಕಾವ್ಯಗಳು ತೀವ್ರ ಕಳವಳವನ್ನು ವ್ಯಕ್ತಪಡಿಸುತ್ತವೆ. ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ’, ‘ಕರುನಾಡು ನಿನ್ನದು’ ಮುಂತಾದ ಕವಿತೆಗಳ ಮೂಲಕ ಪುರಾಣಿಕರು ಕನ್ನಡ ನಾಡಿನ ಪ್ರಾಕೃತಿಕ ಸೌಂದರ್ಯ, ಬಸವಣ್ಣ, ವಿದ್ಯಾರಣ್ಯರಂತಹ ಮಹನೀಯರ ಆದರ್ಶಗಳು ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಕನ್ನಡಿಗರ ಆಲಸ್ಯ, ಅಂತಃಕಲಹಗಳನ್ನು ಬಿಟ್ಟು, ಭಾಷೆಯನ್ನು ಉದ್ಯೋಗದ ಭಾಷೆಯನ್ನಾಗಿ ಬೆಳೆಸಬೇಕೆಂಬುದು ಅವರ ಆಶಯವಾಗಿದೆ. ಒಟ್ಟಾರೆಯಾಗಿ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಪುರಾಣಿಕರ ಕಾವ್ಯಗಳು, ಕನ್ನಡಿಗರಲ್ಲಿ ಒಗ್ಗಟ್ಟು ಹಾಗೂ ಸ್ವಾಭಿಮಾನವನ್ನು ಜಾಗೃತಗೊಳಿಸುವ ವಿಶಿಷ್ಟ ಬಗೆಯನ್ನು ಇಲ್ಲಿ ವಿವರವಾಗಿ ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಗವಿಸಿದ್ದಪ್ಪ ಪಾಟೀಲ, (2003), ಸಾಹಿತ್ಯ ಸಿರಿ, ಕಲಬುರಗಿ: ಅಮರ ಪ್ರಕಾಶನ.
ಸಿದ್ದಯ್ಯ ಪುರಾಣೀಕ, (2008), ಸಿದ್ದಯ್ಯ ಪುರಾಣೀಕರ ಸಮಗ್ರ ಕಾವ್ಯ, ಬೆಂಗಳೂರು: ಶ್ರೀಗಿರಿ ಪ್ರಕಾಶನ.
ಶೇಷಗಿರಿರಾವ್ ಎಲ್.ಎಸ್., (2017), ಹೊಸಗನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು: ಅಂಕಿತ ಪುಸ್ತಕ.