ದಲಿತ ಚಳುವಳಿಯ ಭಾಷೆ ಮತ್ತು ಸಾಹಿತ್ಯ
Main Article Content
Abstract
ದಲಿತ ಸಾಹಿತ್ಯದಲ್ಲಿನ ಬಡತನ, ಶೋಷಣೆ, ಹಸಿವು, ಆಕ್ರೋಶ, ಸಿಟ್ಟು, ಸಂಸ್ಕೃತಿ ಇತ್ಯಾದಿ ವಿಷಯಗಳನ್ನು ಕುರಿತು ಹಲವಾರು ಸಾಹಿತಿಗಳು, ವಿಮರ್ಶಕರು ವಿಶ್ಲೇಷಿಸಿದ್ದಾರೆ. ಈ ವಿಷಯಗಳನ್ನು ಮುಖಾಮುಖಿಯಾಗಲು ದಲಿತ ಸಾಹಿತಿಗಳು ಬಳಸಿದ ವಿಭಿನ್ನ ರೀತಿಯ ಭಾಷೆಯನ್ನು ಕುರಿತು ಕೆಲವೇ ಜನರು ಮಾತ್ರ ತಮ್ಮ ಗಮನಹರಿಸಿದ್ದು ವಿಶೇಷ. ಅದರಲ್ಲೂ ಸಿದ್ದಲಿಂಗಯ್ಯನವರ ಹೊಲೆ-ಮಾದಿಗರ ಹಾಡು, ದೇವನೂರರ ಕುಸುಮಬಾಲೆ ಇತ್ಯಾದಿ ಕೆಲವೇ ಕೃತಿಗಳ ಭಾಷೆಯ ಕುರಿತು ಮಾತನಾಡುತ್ತಾರೆ ಹೊರತು ಅದರಿಂದಾಚೆಗೆ ಒಟ್ಟು ದಲಿತ ಸಾಹಿತ್ಯದ ಭಾಷೆಯ ಭಿನ್ನತೆ, ನಿರೂಪಣೆ ಕುರಿತು ಮಾತನಾಡುವುದು ಕಡಿಮೆ ಎಂದೇ ಹೇಳಬಹುದು. ಸಾಹಿತ್ಯವಾಗಲಿ, ವಿಮರ್ಶೆಯಾಗಲಿ ಭಾಷೆಯ ಅಭಿವ್ಯಕ್ತಿ ಮುಖ್ಯವಾದದ್ದು. ಆ ನಿಟ್ಟಿನಲ್ಲಿ ದಲಿತ ಸಾಹಿತ್ಯದ ಭಾಷೆಯು ಕಟ್ಟಿಕೊಡುವ ವಿಭಿನ್ನ ನೋಟ ವಿಶಿಷ್ಟವಾದದ್ದು. ಈ ರೀತಿಯ ಭಾಷೆಯ ಬಳಕೆಗೆ ತಮ್ಮ ಬದುಕನ್ನು ಮತ್ತು ಸಂಸ್ಕೃತಿಯನ್ನು ಏಕಕಾಲದಲ್ಲಿ ಜನರೆದುರು ತೆರೆದಿಡುವ ಅಗತ್ಯತೆಯನ್ನು ದಲಿತ ಸಾಹಿತಿಗಳು ಕಂಡುಕೊಂಡದ್ದು ಮುಖ್ಯವಾದದ್ದು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕೆ. ಬಿ. ಸಿದ್ಧಯ್ಯನವರ ಖಂಡಕಾವ್ಯಗಳು, ಕೆ. ಬಿ. ಸಿದ್ದಯ್ಯ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಪು.ಸಂ. VIII.
ಹುಚ್ಚು ಮನಸ್ಸಿನ ಹತ್ತು ಮುಖಗಳು (2017), ಕೆ. ಶಿವರಾಮಕಾರಂತ, ಸಪ್ನ, ಬೆಂಗಳೂರು, ಪು.ಸಂ. 265.
ಚೋಮನದುಡಿ (2017), ಕೆ. ಶಿವರಾಮಕಾರಂತ, ಸಪ್ನ, ಬೆಂಗಳೂರು, ಪು.ಸಂ. 108.
ಶಿಷ್ಟ-ಪರಿಶಿಷ್ಟ (ವಿಮರ್ಶಾ ಲೇಖನಗಳು, 1992), ಡಾ. ಪುರುಷೋತ್ತಮ ಬಿಳಿಮಲೆ, ಮದಿಪು ಪ್ರಕಾಶನ, ಮಂಗಳೂರು, ಪು.ಸಂ. 124.
ಪ್ರೊ.ಬಿ ಕೃಷ್ಣಪ್ಪ (2010), ಡಾ. ಎಸ್. ಆರ್. ಕೇಶವ, ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ಪು.ಸಂ. 23.
ಹೊಸಗನ್ನಡ ಸಾಹಿತ್ಯ ಚರಿತ್ರೆ (2017), ಎಲ್.ಎಸ್ ಶೇಷಗಿರಿ ರಾವ್, ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು, ಪು.ಸಂ. 252.