ಪಿ.ಬಿ. ದುತ್ತರಗಿ ಅವರ ತಾಯಿಯ ಕರುಳು ನಾಟಕದಲ್ಲಿ: ಸ್ತ್ರೀ ಸಂವೇದನೆ
Main Article Content
Abstract
ವೃತ್ತಿರಂಗಭೂಮಿಯ ದಿಗ್ಗಜ ಪಿ.ಬಿ. ದುತ್ತರಗಿ ಅವರ ‘ತಾಯಿಯ ಕರುಳು’ ನಾಟಕವು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಮೇಲಿರುವ ಸಾಮಾಜಿಕ ದೃಷ್ಟಿಕೋನಗಳನ್ನು ಹಾಗೂ ಸ್ತ್ರೀ ಸಂವೇದನೆಯನ್ನು ಅತ್ಯಂತ ಸೂಕ್ಷ್ಮವಾಗಿ ಅನಾವರಣಗೊಳಿಸುತ್ತದೆ. ಸಮಾಜವು ಹೆಣ್ಣನ್ನು ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುವ ತ್ಯಾಗಮಯಿ ‘ತಾಯಿ’ ಎಂದು ಆದರ್ಶೀಕರಿಸುತ್ತದೆ, ಇಲ್ಲವೇ ತನ್ನ ಹಕ್ಕುಗಳಿಗಾಗಿ, ಅಧಿಕಾರಕ್ಕಾಗಿ ಧ್ವನಿಯೆತ್ತುವಾಗ ಆಕೆಗೆ ‘ಗಯ್ಯಾಳಿ’ ಎಂದು ಹಣೆಪಟ್ಟಿ ಕಟ್ಟುತ್ತದೆ. ಈ ಎರಡೂ ಪರಸ್ಪರ ವಿರೋಧಿ ನೆಲೆಗಳ ಮೂಲಕ, ಪುರುಷಕೇಂದ್ರಿತ ಸಮಾಜವು ಮಹಿಳೆಯನ್ನು ಹೇಗೆ ತನ್ನ ಅನುಕೂಲಕ್ಕೆ ತಕ್ಕಂತೆ ನಿಯಂತ್ರಿಸುತ್ತದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಅತ್ತೆ-ಸೊಸೆಯ ಸಂಘರ್ಷದ ಹಿನ್ನೆಲೆಯಲ್ಲಿ, ಮನೆಯೊಳಗಿನ ಅಧಿಕಾರ ಹಂಚಿಕೆಯ ಕೊರತೆ ಮತ್ತು ಸಾಮಾಜಿಕ ಒತ್ತಡಗಳನ್ನು ನಾಟಕಕಾರರು ಎತ್ತಿತೋರಿಸಿದ್ದಾರೆ. ಅಂತಿಮವಾಗಿ, ಮಹಿಳೆಯನ್ನು ಕೇವಲ ಸಹನಶೀಲೆ ಅಥವಾ ಗಯ್ಯಾಳಿ ಎಂಬ ಸೀಮಿತ ವರ್ಗೀಕರಣದ ಚೌಕಟ್ಟಿಗೆ ಒಳಪಡಿಸದೆ, ಆಕೆಗೂ ತನ್ನದೇ ಆದ ಸ್ವತಂತ್ರ ಅಸ್ತಿತ್ವ ಮತ್ತು ಮಾನವೀಯ ಭಾವನೆಗಳಿರುವುದನ್ನು ತೆರೆದಿಡುವ ಮಹತ್ವದ ಆಶಯವನ್ನು ಮಂಡಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ರಂಗನಾಥ್ ಎಚ್. ಕೆ., (1982), ಕನ್ನಡ ರಂಗಭೂಮಿ: ಒಂದು ಅಧ್ಯಯನ, ಮೈಸೂರು: ಸುರುಚಿ ಪ್ರಕಾಶನ.
ವಿಜಯಾ ದಬ್ಬೆ, (1999), ಮಹಿಳಾ ಸಂವೇದನೆ ಮತ್ತು ಸಾಹಿತ್ಯ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಕೀರ್ತಿನಾಥ ಕುರ್ತಕೋಟಿ, (1994), ಕನ್ನಡ ನಾಟಕ ಪರಂಪರೆ, ಧಾರವಾಡ: ಮನೋಹರ ಗ್ರಂಥಮಾಲಾ.
ಸುಮಿತ್ರಾಬಾಯಿ ಬಿ. ಎನ್., (2010), ಸ್ತ್ರೀವಾದಿ ವಿಮರ್ಶೆ, ಬೆಂಗಳೂರು: ನವಕರ್ನಾಟಕ ಪ್ರಕಾಶನ.
ವಿಜಯಾ, (2004), ವೃತ್ತಿ ರಂಗಭೂಮಿ ಮತ್ತು ಮಹಿಳೆ, ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ.