ಬಂಜಾರ ಭಾಷೆಯಲ್ಲಿ ಕ್ರಿಯಾಪದಗಳು
Main Article Content
Abstract
ಮಾನವ ಸಮುದಾಯ ಮತ್ತು ಸಂಸ್ಕೃತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಭಾಷಾಧ್ಯಯನ ಅತ್ಯಗತ್ಯ. ಯಾವುದೇ ಭಾಷೆಯ ಮೂಲ ಬೇರುಗಳು ಅದರ ಕ್ರಿಯಾಪದಗಳಲ್ಲಿ ಅಡಗಿರುತ್ತವೆ. ಲಿಪಿ ರಹಿತವಾದ ಬಂಜಾರ ಭಾಷೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟನ್ನು ಶೋಧಿಸಲು ಅದರ ಕ್ರಿಯಾಪದಗಳ ವಿಶ್ಲೇಷಣೆ ಬಹುಮುಖ್ಯ. ಬಂಜಾರ ಭಾಷೆಯಲ್ಲಿ ಬಳಕೆಯಲ್ಲಿರುವ ಏಕಾಕ್ಷರ (ಉದಾ: ಪಿ, ಸೋ, ಜೋ) ಹಾಗೂ ಬಹು-ಅಕ್ಷರಗಳ ಮೂಲಧಾತುಗಳನ್ನು ಗುರುತಿಸಿ, ಅವುಗಳಿಗೆ ಕಾಲ, ಲಿಂಗ ಮತ್ತು ಪುರುಷವಾಚಕ ಪ್ರತ್ಯಯಗಳು ಸೇರಿದಾಗ ಆಗುವ ರೂಪಾಂತರಗಳನ್ನು ಇಲ್ಲಿ ಸೈದ್ಧಾಂತಿಕವಾಗಿ ಚರ್ಚಿಸಲಾಗಿದೆ. ವರ್ತಮಾನ, ಅಪೂರ್ಣ-ಪೂರ್ಣ ಭೂತಕಾಲ ಮತ್ತು ಭವಿಷ್ಯತ್ ಕಾಲಗಳಲ್ಲಿ ಕ್ರಿಯಾಪದಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಉದಾಹರಣೆಗಳ ಮೂಲಕ ವಿಶ್ಲೇಷಿಸಲಾಗಿದೆ. ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿ ಬಂಜಾರ ಭಾಷೆಯ ವ್ಯಾಕರಣದ ಚೌಕಟ್ಟನ್ನು ಅರ್ಥಮಾಡಿಕೊಳ್ಳುವ ಮತ್ತು ಮುಂದಿನ ಆಳವಾದ ಅಧ್ಯಯನಗಳಿಗೆ ಬುನಾದಿ ಹಾಕುವ ಪ್ರಾಥಮಿಕ ಶೋಧನೆ ಇದಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಚಿದಾನಂದಮೂರ್ತಿ ಎಂ., (1986), ಭಾಷಾ ವಿಜ್ಞಾನದ ಮೂಲ ತತ್ವಗಳು, ಮೈಸೂರು: ಡಿ.ವಿ.ಕೆ. ಮೂರ್ತಿ ಪ್ರಕಾಶನ.
ನಾಯಕ್ ಡಿ.ಬಿ., (1994), ಲಂಬಾಣಿ ಸಂಸ್ಕೃತಿ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ನಾರಾಯಣ್ ಕೆ. ವಿ., (2000), ಭಾಷೆ ಕನ್ನಡ ವಿಶ್ವವಿದ್ಯಾಲಯ ವಿಶ್ವಕೋಶ, ಹಂಪಿ: ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ.
ಮಹದೇವಯ್ಯ ಪಿ., (2000), ಕನ್ನಡ ಬಳಕೆ ಸಾಮಾಜಿಕ ವಿನ್ಯಾಸ, ಮೈಸೂರು: ವಿಜಯಲಕ್ಷ್ಮಿ ಪ್ರಕಾಶನ.
ಸೋಮಕ್ಕ ಎಂ., (2009), ಲಂಬಾಣಿ ಮಕ್ಕಳ ಕನ್ನಡ ಕಲಿಕೆ ಸಮಸ್ಯೆಗಳು (ಪಿಎಚ್.ಡಿ. ಮಹಾಪ್ರಬಂಧ), ಹಂಪಿ: ಕನ್ನಡ ವಿಶ್ವವಿದ್ಯಾಲಯ.
ಸಣ್ಣ ರಾಮ, (1982), ಲಂಬಾಣಿ ಗಾದೆಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.