ಮುಳಬಾಗಿಲು ತಾಲೂಕಿನ ಸ್ಥಳನಾಮಗಳು
Main Article Content
Abstract
ಸಮಾಜ ಜೀವಿಯಾದ ಮಾನವ ಪ್ರತಿನಿತ್ಯ ಅನೇಕ ವ್ಯಕ್ತಿ, ವಸ್ತು, ಸ್ಥಳಗಳ ಜೊತೆಗೆ ವ್ಯವಹರಿಸುವುದುಂಟು. ಅಂಥ ಸಂದರ್ಭದಲ್ಲಿ ವ್ಯಕ್ತಿ, ವಸ್ತು, ಸ್ಥಳಗಳನ್ನು ಗುರುತಿಸಲು, ಒಂದರಿಂದ ಮತ್ತೊಂದನ್ನು ಪ್ರತ್ಯೇಕಿಸಲು ‘ಹೆಸರು’ ಅತ್ಯಗತ್ಯ ಮತ್ತು ಅನಿವಾರ್ಯ. ಹಾಗಾಗಿ ಮನುಷ್ಯ ಭಾಷೆ ಕಲಿತ ಮೇಲೆ ಪ್ರತಿಯೊಂದು ವಸ್ತು, ಸ್ಥಳ, ವ್ಯಕ್ತಿಗೆ ಹೆಸರು ಇಡತೊಡಗಿದ.
ಹೆಸರುಗಳನ್ನು ವ್ಯಾಕರಣ ಪರಿಭಾಷೆಯಲ್ಲಿ ‘ನಾಮ’ವೆಂದು ಕರೆಯಲಾಗುತ್ತದೆ. ನಾಮಗಳ ವೈಜ್ಞಾನಿಕವಾದ ಅಧ್ಯಯನ ನಾಮ ವಿಜ್ಞಾನವಾಗಿದೆ. ಇಂಗ್ಲೀಷ್‌ನಲ್ಲಿ ಇದನ್ನು ‘Onomastics’ ಎಂದು ಕರೆಯುತ್ತಾರೆ. ಕೇಶಿರಾಜನು ಶಬ್ದಮಣಿದರ್ಪಣದಲ್ಲಿ ನಾಮಲಿಂಗವನ್ನು ಹೇಳುವಾಗ ರೂಢನಾಮ, ಅಂಕಿತನಾಮ, ಅನ್ವರ್ಥನಾಮವೆಂದು ಹೇಳಿದ್ದಾನೆ. ನಾಮಶಾಸ್ತ್ರದಲ್ಲಿ ‘ವ್ಯಕ್ತಿನಾಮ’ ಮತ್ತು ‘ಸ್ಥಳನಾಮ’ ಎಂದು ಎರಡು ವಿಧಗಳನ್ನು ಹೇಳಲಾಗಿದೆ. ವ್ಯಕ್ತಿನಾಮಗಳು ವೈಯಕ್ತಿಕವಾದವು. ಸ್ಥಳನಾಮಗಳು, ಸಾರ್ವಜನಿಕವಾದವು, ಸರ್ವಕಾಲಿಕವೂ ಹೌದು. ವ್ಯಕ್ತಿಗಳನಾಮಗಳಿಗೆ ಸಂಬಂಧಿಸಿದಂತೆ ನಡೆಯುವ ಅಧ್ಯಯನವು ವ್ಯಕ್ತಿನಾಮ ವಿಜ್ಞಾನವಾದರೆ, ಸ್ಥಳನಾಮಗಳಿಗೆ ಸಂಬಂಧಿಸಿದಂತೆ ನಡೆಯುವ ಅಧ್ಯಯನವು ಸ್ಥಳನಾಮ ವಿಜ್ಞಾನವಾಗಿದೆ.
ಸ್ಥಳಗಳಿಗೆ ಇಟ್ಟ ಹೆಸರುಗಳೇ ‘ಸ್ಥಳನಾಮಗಳು’ (Toponymy). ಅವುಗಳ ಅಧ್ಯಯನವೇ ಸ್ಥಳನಾಮ ವಿಜ್ಞಾನ (Toponomastics). ಸ್ಥಳನಾಮಗಳನ್ನು ವಸತಿಯ ಸ್ಥಳಗಳು, ನಿರ್ವಸತಿಯ ಸ್ಥಳಗಳು ಎಂದು ಗುರುತಿಸಲಾಗಿದೆ. ವಸತಿಯ ಸ್ಥಳಗಳೆಂದರೆ ಹಳ್ಳಿ, ಗ್ರಾಮ, ಪಟ್ಟಣಗಳಾಗಿವೆ. ನಿರ್ವಸತಿಯ ಸ್ಥಳಗಳೆಂದರೆ ಬೆಟ್ಟ, ಗುಡ್ಡ, ನದಿ, ಕೆರೆ, ಕಟ್ಟೆ, ನಾಲೆಗಳ ಹೆಸರು (Hydronymy) ಮತ್ತು ಕೆರೆ, ದಾರಿ, ರಸ್ತೆಗಳ ಹೆಸರುಗಳು (Mycrotoponymy) ಆಗಿವೆ.
“ಪ್ರಾಚೀನವಾದ ಸ್ಥಳನಾಮಗಳು ಅರ್ಥಗರ್ಭಿತವಾಗಿವೆ. ಒಂದು ಪ್ರದೇಶದಲ್ಲಿರುವ ನದಿ, ಬೆಟ್ಟ, ಕಲ್ಲು, ಮರ, ಮಣ್ಣು, ದೇವಾಲಯ, ಕೋಟೆ, ಮೊದಲಾದವುಗಳು ಆ ಸ್ಥಳದ ಚರಿತ್ರೆಯನ್ನು ತಿಳಿಸಲು ನೆರವಾಗುವಂತೆ ಸ್ಥಳನಾಮಗಳು ಕೂಡ ಆಯಾ ಸ್ಥಳಗಳ ಚರಿತ್ರೆಗೆ ಪೂರಕವಾಗುವ ಅನೇಕ ಮಾಹಿತಿಯನ್ನು ನೀಡುತ್ತವೆ. ಆದ್ದರಿಂದ ಸ್ಥಳನಾಮಗಳನ್ನು ಜೀವಂತ ಪಳೆಯುಳಿಕೆಗಳು ಎಂದು ಕರೆಯುತ್ತಾರೆ.”
ನೀರಿಗೆ ಅಭಾವವಿರುವ ಜಿಲ್ಲೆಯ ಒಟ್ಟು ಸ್ಥಳನಾಮಗಳ ಪೈಕಿ ಸುಮಾರು 400 ಗ್ರಾಮಗಳು 30ಕ್ಕೂ ಹೆಚ್ಚು ಜಲಸಂಬಂಧಿ ಹೆಸರುಗಳಿಂದ ಕೂಡಿವೆ. ಅಂಬುಧಿ, ಸಂದ್ರ (ಸಮುದ್ರ), ಸಾಗರ, ಏರಿ, ಸಿಟ್ಟು, ಕಡವು, ಕುಂಟೆ, ಕೊಳ, ಕೋಡಿ, ಚೆರುವು, ದೊಣೆ, ಮಡುವು ಮುಂತಾದವು. ಇವುಗಳಲ್ಲಿ ಸುಮಾರು 100 ಸ್ಥಳಗಳು ಸಂದ್ರ (ಸಮುದ್ರ)ದಿಂದ ಅಂತ್ಯಗೊಂಡಿರುವುದು ಕುತೂಹಲಕರವಾಗಿದೆ.
ಸಾಮಾಜಿಕ ಅಂಶಗಳಲ್ಲಿ ವ್ಯಕ್ತಿನಾಮ, ಜಾತಿ, ಬುಡಕಟ್ಟು, ಮತ, ವಾಸ್ತು, ಘಟನೆ, ಬಿರುದು, ದೇವತೆ, ವೃತ್ತಿ ಸಾದೃಶ್ಯಗಳನ್ನು ಸ್ಥಳನಾಮಗಳಲ್ಲಿ ಗುರುತಿಸಬಹುದು. ವರ್ಣನಾತ್ಮಕದಲ್ಲಿ ಸ್ಥಳ, ದಿಕ್ಕು, ಗ್ರಾಮನಾಮ, ವರ್ಣ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಪಾಂಡವಪುರ ತಾಲೂಕು, ಸ್ಥಳನಾಮಗಳು (ಅ.ಪ್ರ), ಮಹಾಪ್ರಬಂಧ, 2005, ಪು.ಸಂ. 02
ಚಿತ್ತರಂಜನ್.ಹೆಚ್, ಕೋಲಾರ ಜಿಲ್ಲಾ ಗ್ಯಾಸೆಟಿಯರ್ 2005, ಪುಟ 694
ಆವಣಿಕಾಶಿ, (2014) ಸಂಘರ್ಷ ಸಾರಥಿ, ಮುಳಬಾಗಿಲು: ಸೌಹಾರ್ದ ಪ್ರಕಾಶನ.
ಕೃಷ್ಣಪ್ಪ, (2007), ಕೋಗಿಲಹಳ್ಳಿ ಕೋಲಾರ ವೈಭವ (ಕವನ ಸಂಕಲನ), ಕೆ.ಜಿ.ಎಫ್: ಕಿರಣ ಕಿಶೋರ ಪ್ರಕಾಶನ.
ಗೋಪಾಲಕೃಷ್ಣ ವಿ., (2012), ಕೋಲಾರ ಜಿಲ್ಲೆ ಸ್ಥಳನಾಮಗಳು, ಬೆಂಗಳೂರು: ಅಖಿಲ ಭಾರತ ಮುಂಡಾಲ ಸಮಾಜ ಚಾರಿಟಬಲ್ ಟ್ರಸ್ಟ್.
ಚಂದ್ರೇಗೌಡ ಎನ್., (2011), ಚನ್ನರಾಯಪಟ್ಟಣ ತಾಲೂಕಿನ ಸ್ಥಳನಾಮಗಳ ಅಧ್ಯಯನ, ಮೈಸೂರು: ಅರ್ಪಿತಾ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್.
ನರಸಿಂಹನ್ ಕೆ.ಆರ್., (2010), ಕುವಳಾಲ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೋಲಾರ ಜಿಲ್ಲೆ.
ನರಸಿಂಹನ್, ಕುರುಡುಮಲೆ ಕೆ.ಆರ್., (2012), ಡಿ.ವಿ.ಜಿ ಪ್ರತಿಷ್ಠಾನ ಕೋಲಾರ ಪತ್ರಿಕೆ, ಕೋಲಾರ.
ನರಸಿಂಹನ್ ಕೆ.ಆರ್., (2012), ಮುಳಬಾಗಿಲು ಇತಿಹಾಸ, ಬೆಂಗಳೂರು: ದರ್ಶನ ಪ್ರಿಂಟರ್ಸ್.
ನರಸಿಂಹೇಗೌಡ ನಾರಾಣಪುರ, (2005), ಕೋಲಾರ ಜಿಲ್ಲೆಯ ಆಚರಣೆಗಳು ಮತ್ತು ಸಂಪ್ರದಾಯಗಳು.