ಗಾಣದ ಕನ್ನಪ್ಪ: ಒಂದು ಚಾರಿತ್ರಿಕ ಚಿಂತನೆ
Main Article Content
Abstract
ಗಾಣದ ಕನ್ನಪ್ಪ ಕುಟುಂಬದಿಂದ ಗಾಣಿಗನಾಗಿದ್ದನೆಂಬುದು ಸ್ಪಷ್ಟವಾಗಿದ್ದರೂ, ವೃತ್ತಿಯಿಂದ ಗಾಳಹಾಕಿ ಮೀನು ಹಿಡಿಯುವ ಮೀನುಗಾರನೆಂಬುದು ಲೇಖನದಲ್ಲಿ ಕಾಣಸಿಗುತ್ತದೆ. ತನ್ನ ಕಾಯಕದಿಂದ ಪವಾಡಪುರುಷನಾಗಿ ಶಿವನ ಪರಮಭಕ್ತನಾಗಿ ವಚನಗಳ ಮೂಲಕ ಜನರಲ್ಲಿರುವ ಅಹಂಕಾರ, ಮೌಢ್ಯಗಳನ್ನು ದೂರೀಕರಿಸಿದ ಶರಣ. ಕೆಲವೇ ವಚನಗಳನ್ನು ಬರೆದಿದ್ದರೂ ಸಹ ಬಹುಸಂಖ್ಯಾತರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಿದ ಮಹಾನ್ ಶರಣ. ಜಂಭದಿಂದ ಮೆರೆಯುತ್ತಿರುವ ಕೆಲವು ಜಂಗಮರಿಗೆ ತನ್ನ ಶಿವಭಕ್ತಿಯಿಂದಲೇ ಅರಿವನ್ನು ಮೂಡಿಸಿ ಅಹಂಕಾರವನ್ನು ದೂರಮಾಡಿದ ಮಹಾಮಹಿಮ ಎಂದೇ ಚರಿತ್ರೆಯಲ್ಲಿ ಸ್ಥಾನ ಪಡೆದುಕೊಂಡವ ಗಾಣದ ಕನ್ನಪ್ಪ. ಆದರೆ ಈತನ ಕುಟುಂಬದ ಕುರಿತಾಗಿ ಇನ್ನೂ ಅನೇಕ ಅಧ್ಯಯನಗಳಾದಾಗ ಮಾತ್ರ ಈತನು ಗಾಣದ ಕನ್ನಪ್ಪನೋ? ಗಾಳದ ಕನ್ನಪ್ಪನೋ ಎಂಬುದು ನಿರ್ಧರಿಸಲು ಸಾಧ್ಯ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಟಿ. ಎನ್. ಮಲ್ಲಪ್ಪ ಸಂ: ಬಸವೇಶ್ವರ ಸಮಕಾಲೀನರು ಪ್ರ: ಬಸವ ಸಮಿತಿ, ಬೆಂಗಳೂರು, 1967, (ಅದರಲ್ಲಿ ಕೆ.ಪಿ.ಶಿವಲಿಂಗಯ್ಯ : ಗಾಣದ ಕನ್ನಪ್ಪ ಲೇಖನ)
ಎಸ್. ವಿದ್ಯಾಶಂಕರ : ಸಮಗ್ರ ವಚನ ಸಂಪುಟ-7 ಪ್ರ: ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2022
ಫ.ಗು.ಹಳಕಟ್ಟಿ : ಶಿವಶರಣರ ಚರಿತ್ರೆಗಳು ಭಾಗ 3 ಶಿವಾನುಭವ ಗ್ರಂಥಮಾಲೆ, ವಿಜಾಪುರ, 1954
ಆರ್. ನರಸಿಂಹಾಚಾರ್ಯರು : ಕವಿಚರಿತೆ ಸಂಪುಟ 2 ಪ್ರ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 1995
ಎಸ್. ವಿದ್ಯಾಶಂಕರ : ಸಮಗ್ರ ವೀರಶೈವ ಸಾಹಿತ್ಯ ಚರಿತ್ರೆ ಸಂ.1 ಪ್ರ: ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, 2014