ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದ ದಲಿತೋದ್ಧಾರದ ಕಾರ್ಯಚಟುವಟಿಕೆಗಳು: ಕರ್ನಾಟಕವನ್ನು ಅನುಲಕ್ಷಿಸಿ

Main Article Content

ಸಣ್ಣ ರಾಘವೇಂದ್ರ
ಎಸ್.ವಾಯ್. ಮುಗಳಿ

Abstract

ಕರ್ನಾಟಕದ ಇತಿಹಾಸವು ಸಿ.ಜೆ. ಥಾಮ್ಸನ್‌ರು ವಿವರಿಸಿದ ಶಿಲಾಯುಗದ ಮೂರು ಯುಗಗಳನ್ನು ತನ್ನ ಮಡಿಲಲ್ಲಿರಿಸಿಕೊಂಡಿದೆ. ಮಧ್ಯಯುಗದ ಬಸವ ಚಳುವಳಿ ಮತ್ತು ದಾಸ ಪರಂಪರೆಯು ಜಾತೀಯತೆ, ಅಸ್ಪೃಶ್ಯತೆ, ಲಿಂಗ ತಾರತಮ್ಯ ಮುಂತಾದ ಸಾಮಾಜಿಕ ಪಿಡುಗುಗಳನ್ನು ವಿರೋಧಿಸಿತು. ಕರ್ನಾಟಕದಲ್ಲಿನ ದಲಿತರಾದ ಹೊಲೆಯರು, ಮಾದಿಗರು, ಜಾಡಮಾಲಿಗಳು, ಮಾಲರು, ಚೌಡಿಕೆ ಮಾದಿಗ, ಚಂಡಾಲರು ಮುಂತಾದ ಅಸ್ಪೃಶ್ಯ ಜಾತಿಗಳ ಸಮುದಾಯದವರು ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕವಾಗಿ ಶತಶತಮಾನಗಳಿಂದಲೂ ಬಹಿಷ್ಕೃತ ಜನಾಂಗವಾಗಿದ್ದಾರೆ.
ಆಧುನಿಕ ಕರ್ನಾಟಕವು, ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣ ಚಳುವಳಿಗಳನ್ನು ಸಮಾನಾಂತರವಾಗಿ ಕಂಡ ಐತಿಹಾಸಿಕ ಘಟನೆಗಳಾಗಿವೆ. ಇವುಗಳೆರಡರ ಮಧ್ಯ ಸ್ವಾತಂತ್ರ್ಯ ಹೋರಾಟದ ಭಾಗವಾಗಿಯೂ ಕೆಲವು ಸಾಮಾಜಿಕ ಕಾರ್ಯ ಚಟುವಟಿಕೆಗಳು ನಡೆದಿವೆ. ಈ ಲೇಖನವು ಮುಖ್ಯವಾಗಿ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿನ ದಲಿತೋದ್ಧಾರದ ಕಾರ್ಯಚಟುವಟಿಕೆಗಳನ್ನು ಕುರಿತು ಚರ್ಚಿಸುತ್ತದೆ. ಇದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ನಾಯಕರು ಹೊಂದಿದ್ದ ದಲಿತೋದ್ಧಾರದ ನೀತಿ ಹಾಗೂ ಧೋರಣೆಗಳನ್ನು ವಿವರಿಸುವುದರ ಜೊತೆಗೆ ಕರ್ನಾಟಕದಲ್ಲಿನ ಸ್ವಾತಂತ್ರ್ಯ ಚಳುವಳಿಯ ಸ್ವರೂಪ ವಿಶೇಷವಾಗಿ ದಲಿತರ ಹಿತಾಸಕ್ತಿಗಾಗಿ ಮಾಡಿದ ಕೆಲಸಗಳನ್ನು ಉಲ್ಲೇಖಿಸುವುದು. ಅಂತಿಮವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಪ್ರಮುಖ ದಲಿತರು ಮತ್ತು ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ದಲಿತೋದ್ಧಾರದ ಕಾರ್ಯಗಳನ್ನು ವಿವರಿಸುವುದು. ಈ ಲೇಖನಕ್ಕೆ ಸಂಬಂಧಪಟ್ಟಂತೆ ಸ್ವಾತಂತ್ರ್ಯ ಚಳುವಳಿಯಲ್ಲಿ ಕೈಗೊಂಡ ಪ್ರಮುಖ ದಲಿತೋದ್ಧಾರ ಕಾರ್ಯ ಚಟುವಟಿಕೆಗಳು ಮತ್ತು ನೀತಿಗಳನ್ನು ಒಳಗೊಂಡಂತೆ ಆಯ್ದ ವ್ಯಕ್ತಿಗಳಿಗೆ ಸೀಮಿತಗೊಳಿಸಲಾಗಿದೆ ಇನ್ನು ಲೇಖನದ ವ್ಯಾಪ್ತಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ದಲಿತೋದ್ಧಾರಕ್ಕಾಗಿ ನಡೆದ ಪ್ರಮುಖ ಸ್ಥಳಗಳಿಗೆ ಸೀಮಿತಗೊಳಿಸಲಾಗಿದೆ. ಇದನ್ನು ಐತಿಹಾಸಿಕ ವಿಧಾನವನ್ನು ಆಧರಿಸಿ ರಚಿಸಲಾಗಿದ್ದು ಕೆಲ ಭಾಗವು ವಿವರಣಾತ್ಮಕ ಮತ್ತು ವಿಶ್ಲೇಷಣಾತ್ಮಕ ವಿಧಾನಗಳಿಗೂ ಕೂಡಾ ಒತ್ತು ನೀಡಿ ರಚಿಸಲಾಗಿದೆ.

Article Details

Section

Research Articles

Author Biographies

ಸಣ್ಣ ರಾಘವೇಂದ್ರ

ಸಂಶೋಧನಾ ವಿದ್ಯಾರ್ಥಿ, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಅಧ್ಯಯನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಎಸ್.ವಾಯ್. ಮುಗಳಿ

ಹಿರಿಯ ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಅಧ್ಯಯನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

How to Cite

ಸಣ್ಣ ರಾಘವೇಂದ್ರ, & ಎಸ್.ವಾಯ್. ಮುಗಳಿ. (2025). ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದ ದಲಿತೋದ್ಧಾರದ ಕಾರ್ಯಚಟುವಟಿಕೆಗಳು: ಕರ್ನಾಟಕವನ್ನು ಅನುಲಕ್ಷಿಸಿ. ಅಕ್ಷರಸೂರ್ಯ (AKSHARASURYA), 9(06), 132 to 142. https://aksharasurya.com/index.php/latest/article/view/1710

References

ಮುಗಳಿ ಎಸ್.ವಾಯ್., “ಪೂನಾ ಒಪ್ಪಂದ ಪೂರ್ವ ಶೋಷಿತ ಸಮುದಾಯದ ಬಗೆಗಿನ ಕಾಂಗ್ರೇಸ್ ಧೋರಣೆ” ಪ್ರೋ. ಎಸ್. ರಾಜಶೇಖರ ದತ್ತಿ ಉಪನ್ಯಾಸ. TKHA Studies in Karnataka history and culture vol, 19, 2022. pp 663

ಅದೇ, ಪು.ಸಂ. 665-666.

ಬಸೆಟ್ಟಿ, ಎಸ್.ಬಿ. “ರಚನಾತ್ಮಕ ಕಾರ್ಯಕ್ರಮ : ಗಾಂಧೀ ಕನಸಿನ ಭಾರತದ ಅಡಿಪಾಯ”, ಶ್ರೀ ಬಸವರತ್ನ ಪ್ರಕಾಶನ ಧಾರವಾಡ2021 ಪು.ಸಂ. 15-16.

ಅದೇ, ಪು.ಸಂ

ಅಪ್ಪಗೆರೆ ಸೋಮಶೇಖರ್, “ದಲಿತ ಸಂವೇದನೆಅಂಬೇಡ್ಕರ್ ವಾದಿ ಚಿಂತನೆಯ ಬರಹಗಳು” ಲಡಾಯಿ ಪ್ರಕಾಶನ ಗದಗ2016, ಪು.ಸಂ. 41-43.

Mugali S.Y, “Shri Hosamami Siddappa and The Upliftment of The Depressed Classes.” Review Of Research Vol. 3 | Issue. 9 | June. 2014, ISSN:2249894X. P.No 14.

ಅಪ್ಪಗೆರೆ ಸೋಮಶೇಖರ್, “ದಲಿತ ಸಂವೇದನೆಅಂಬೇಡ್ಕರ್ ವಾದಿ ಚಿಂತನೆಯ ಬರಹಗಳು” ಲಡಾಯಿ ಪ್ರಕಾಶನ ಗದಗ2016, ಪು.ಸಂ. 33-34.

Nagaraj Veerabhadrappa, “Social Awareness In The National Movement: Haveri Distirct” Indian Streams Research Journal ISSN: 22307850 Volume 10 | Issue 11 | December 2020 P.No6

Nagamma Veerangouda patil, https://indianculture .gov.in.

ದೇವರಕೊಂಡಾರೆಡ್ಡಿ, ಶ್ರೀ ಜಿ.ಕೆ. ದೇವರಾಜ ಸ್ವಾಮಿ (ಸಂ), “ಇತಿಹಾಸ ದರ್ಶನ ಸಂಪುಟ 29” ಪು.ಸಂ. 483

ಗಾಯತ್ರಿ ಜೆ.ವಿ. “ದಲಿತರ ಉದ್ಧಾರಕ್ಕಾಗಿ ದುಡಿದ ಗೋವಿಂದಾಚಾರ್ಯಸ್ವಾಮಿ” ಇತಿಹಾಸ ದರ್ಶನ ಸಂಪುಟ. 9. ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು 1994, ಪು.ಸಂ. 233.

Halappa G.S. “History of freedom movement in Karnataka vol 2” Government of Mysore publication 1964, pp 437.

ಕೃಷ್ಣಮೂರ್ತಿ ಸಿ.ಎನ್. “ದಾವಣಗೆರೆ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ: ಒಂದು ಅಧ್ಯಯನ”, ಸಂಶೋಧನಾ ಮಹಾಪ್ರಬಂಧ ಇತಿಹಾಸ ವಿಭಾಗ ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ವಿಜಯಪುರ – 2016, ಪು.ಸಂ. 2425.

ಅಪ್ಪಗೆರೆ ಸೋಮಶೇಖರ್, ಪು.ಸಂ. 88.

Meenakshi M.G., “The rule of backward class leaders in the movement for responsible government in the princely state of mysore” Ph.D Thesis department of history Bangalore University 2012, pp 291.