ಬಸವೇಶ್ವರ, ಗಾಂಧೀಜಿ ಹಾಗೂ ಅಂಬೇಡ್ಕರ್‌ರವರ ಸಾಮಾಜಿಕ ಸಮಾನತೆಯ ಚಿಂತನೆಗಳು

Main Article Content

ಶ್ರೀಶೈಲ ಬಬಲಾದ

Abstract

ಭಾರತೀಯರು ಆತ್ಮ ಪರಮಾತ್ಮನೆಂಬ ವ್ಯಕ್ತಿ ಕೇಂದ್ರಿತ ಸಿದ್ಧಾಂತದಿಂದ ಸಮಾಜ ಕೇಂದ್ರಿತ ಸಿದ್ಧಾಂತಕ್ಕೆ ಸಾಮಾಜಿಕ ವ್ಯವಸ್ಥೆಯನ್ನು ವಿಸ್ತರಿಸಿದ್ದರು. ಸಮಾಜವೆನ್ನುವುದು ಸಂಕೀರ್ಣ ವ್ಯವಸ್ಥೆ, ಅದರ ಎಲ್ಲ ಸ್ತರಗಳನ್ನು ಎಲ್ಲ ಮಗ್ಗುಲಗಳನ್ನು ಬದಲಿಸಲು ಮಾಡಿದ ಪ್ರಯತ್ನವಾಗಿದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನಿಂದಾಗಿ ವ್ಯಕ್ತಿ ಸ್ವಾತಂತ್ರ್ಯ ಪಡೆದ ಜನವರ್ಗವು ವ್ಯಕ್ತಪಡಿಸಿದ ಅಭಿಪ್ರಾಯದಿಂದ ವಚನ ಸಾಹಿತ್ಯದ ಉದಯ. ಆದ್ದರಿಂದ ಸಾಮಾಜಿಕ ಸಮಾನತೆಯ ಚಿಂತನೆಗಳು ಹೊರಬಂದವು. ವರ್ಣಭೇದ, ವರ್ಗಭೇದ ಹಾಗೂ ಲಿಂಗಭೇದ ನಿರಾಕರಣೆಗಳಂತಹ ವಿಚಾರ ಸ್ಫೋಟಗೊಂಡವು. ಬಸವಣ್ಣನವರು “ಎಲ್ಲಿ ಕುಲಗಳಿಲ್ಲವೋ, ಎಲ್ಲಿ ಜಾತಿಗಳಿಲ್ಲವೋ, ಎಲ್ಲಿ ಲಿಂಗಭೇದವಿಲ್ಲವೋ, ಎಲ್ಲಿ ವರ್ಗಭೇದವಿಲ್ಲವೋ” ಅದಕ್ಕೆ ಶರಣಸಂಕುಲ ಎಂದು ಕರೆಯುತ್ತಾರೆ.

Article Details

Section

Research Articles

Author Biography

ಶ್ರೀಶೈಲ ಬಬಲಾದ

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಶ್ರೀ.ಚ.ಚ.ಹೆಬ್ಬಾಳ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಗೊಳಸಂಗಿ.

 

References

ಡಾ. ಬಸವರಾಜು ಎಲ್., (2000), ಬಸವಣ್ಣ ವಚನಗಳು, ಗೀತಾ ಬುಕ್ ಹೌಸ್, ಮೈಸೂರು.

ಎಂ. ಚಿದಾನಂದಮೂರ್ತಿ, (2015), ಬಸವಣ್ಣನವರು, ನ್ಯಾಷನಲ್ ಬುಕ್ ಟ್ರಸ್ಟ್, ದೆಹಲಿ.

ನುಗಡೋಣಿ ಅಮರೇಶ., (ಸಂ.), (2018), ಬಸವಣ್ಣ ವಚನಗಳು – ಸಾಂಸ್ಕೃತಿಕ ಮುಖಾಮುಖಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಡಾ. ತಿಪ್ಪೇರುದ್ರ ಸ್ವಾಮಿ ಎಚ್., (2016), ಬಸವೇಶ್ವರ ವಚನದೀಪಿಕೆ, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು.

ನಾಗಭೂಷಣ ಡಿ. ಎಸ್., (2019), ಗಾಂಧಿ ಕಥನ, ಎಂ. ಮೂನಿಸ್ವಾಮಿ ಅಂಡ್ ಸನ್ಸ್, ಬೆಂಗಳೂರು.

ಹುಳಿಯಾರ್ ನಟರಾಜ., (ಸಂ.), (2022), ಎಲ್ಲರ ಗಾಂಧೀಜಿ, ಪಲ್ಲವ ಪ್ರಕಾಶನ, ಚನ್ನಪಟ್ಟಣ.

ಡಾ. ಅಂಬೇಡ್ಕರ್, ಬಿ. ಆರ್., (1951), ಬುದ್ಧಿಸಂ ಅಂಡ್ ಇಂಡಿಯಾಸ್ ಇಲ್ಸ್ (ಬುದ್ಧ ಜಯಂತಿಯಂದು ಮಾಡಿದ ಭಾಷಣ), ಭಾರತ ಸರ್ಕಾರ, ನವದೆಹಲಿ.

ಜವರಯ್ಯ ಮ. ನ., (1995), ಅಂಬೇಡ್ಕರ್ ಮತ್ತು ಸಾಮಾಜಿಕ ನ್ಯಾಯ, ಸಿದ್ಧಾರ್ಥ ಗ್ರಂಥಮಾಲೆ, ಮೈಸೂರು.

ಡಾ. ಅಂಬೇಡ್ಕರ್, ಬಿ. ಆರ್., (2015), ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಇನಾಂದಾರ್ ವಿ. ಎಂ., (2020), ಡಾ. ಬಿ. ಆರ್. ಅಂಬೇಡ್ಕರ್: ವ್ಯಕ್ತಿ ಮತ್ತು ವಿಚಾರ, ವಸಂತ ಪ್ರಕಾಶನ, ಬೆಂಗಳೂರು.