ಮಹಾಸತಿಗಲ್ಲುಗಳು
Main Article Content
Abstract
ಸತಿ ಎಂದರೆ ಮೂಲತಃ ತನ್ನ ಗಂಡನ ಮರಣದ ನಂತರ ತನ್ನನ್ನು ತಾನೇ ಅಗ್ನಿಗಾಹುತಿ ಮಾಡಿಕೊಂಡ ಮಹಿಳೆ ಎಂದರ್ಥ. ಈ ಪದವು “ಅಸ್ತಿ” ಎಂಬ ಸಂಸ್ಕೃತ ಪದದಿಂದ ಬಂದಿದೆ. ಇದರರ್ಥ ಅವಳು ಶುದ್ಧ ಅಥವಾ ಸತ್ಯ. ಮಾಸ್ತಿ ಎಂಬುದು ಮಹಾಸತಿಯ ತದ್ಭವ. ಗಂಡ ಸತ್ತಾಗ ಅವನೊಡನೆ ಚಿತೆ ಏರುತ್ತಿದ್ದವಳು ಸತಿಯಾಗುತ್ತಿದ್ದಳು. ಅವಳನ್ನೇ “ಮಹಾಸತಿ” ಎಂದು ಕರೆದರು. ಈ ಮಹಾಸತಿಯು ಜನರ ಬಾಯಲ್ಲಿ “ಮಾಸ್ತಿ” ಯಾಗಿದೆ. ಹಿಂದೆ ಪತ್ನಿಯ ಆದರ್ಶವಾಗಿತ್ತು. ಸತಿಯಾಗುವುದರಲ್ಲಿ ಎರಡು ವಿಧ:
i. ಗಂಡನ ಕಳೇಬರದೊಡನೆ ಚಿತೆಯೇರುವುದು ‘ಸಹಗಮನ’. ಗಂಡ ಸತ್ತಾಗ ಸಹಗಮನ ಮಾಡುವುದು.
ii. ಗಂಡ ಎಲ್ಲೋ ಸತ್ತ ಸುದ್ದಿಯನ್ನು ಕೇಳಿ ಚಿತೆಯನ್ನು ನಿರ್ಮಿಸಿ ಅದನ್ನು ಏರುವುದು ‘ಅನುಗಮನ’.
ಮೊದಲನೆಯದರಲ್ಲಿ ಗಂಡನ ಜೊತೆಗೆ ಹೋಗುತ್ತಿದ್ದಾಳೆ ಎಂಬ ಅರ್ಥ ಬಂದರೆ, ಎರಡನೆಯದರಲ್ಲಿ ಗಂಡನನ್ನು ಹಿಂಬಾಲಿಸುತ್ತಿದ್ದಾಳೆ ಎಂಬ ಅರ್ಥ ಬರುತ್ತದೆ. ಹೀಗೆ ಸತಿ ಆದವರ ನೆನಪಿಗಾಗಿ ನಿಲ್ಲಿಸಿದ ಕಲ್ಲುಗಳೇ ಮಾಸ್ತಿಗಲ್ಲುಗಳು. ಮಾಸ್ತಿಗಲ್ಲುಗಳನ್ನು ಸಹಾನುಭೂತಿ ಕಲ್ಲು, ಮದವಳಿಗೆ ಕಲ್ಲು, ತೋಳ್ಕೈಗಲ್ಲು, ವ್ಯಾಸನ ತೋಳು ಮುಂತಾದ ಹೆಸರುಗಳಿಂದ ಕರೆಯುತ್ತಾರೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬಿ. ಆರ್. ಅಂಬೇಡ್ಕರ್ – “ಕ್ರಾಂತಿ ಮತ್ತು ಪ್ರತಿಕ್ರಾಂತಿ”
ನಾಗಭೂಷಣ ಸಿ., “ಕನ್ನಡ ಸಾಹಿತ್ಯ-ಸಂಸ್ಕೃತಿ-ಬಾಗಿನ”
ಗೋವಿಂದರಾಜು. ಸಿ.ಆರ್., (2017)., ” ಚರಿತ್ರೆ ಅಧ್ಯಯನ ಸಂಪುಟ 10 “ವಿಜಯನಗರ ಚರಿತ್ರೆ: ಪ್ರವಾಸಿ ಬರೆಹಗಳಲ್ಲಿ ಹೆಣ್ಣು ಸಂಕಥನ”.
Epigraphia Shashin., (CARI) Vol-3. 60. Boltur belonting to 1057 AD “Anugamana”