ಕನ್ನಡ ಕತೆಗಳಲ್ಲಿ 'ಒಳಗೊಳ್ಳುವಿಕೆ ಹಾಗೂ ಐಡೆಂಟಿಟಿಯ' ಚಿತ್ರಣ

Main Article Content

ಅಮರೇಂದ್ರ ಶೆಟ್ಟಿ ಆರ್.

Abstract

ಜಾಗತೀಕರಣದ ಕಾಲಘಟ್ಟದ ಕನ್ನಡ ಸಣ್ಣಕತೆಗಳು ಧರ್ಮ, ಜಾತಿ ಮತ್ತು ವರ್ಗಕ್ಕೆ ಸಂಬಂಧಿಸಿದ ಐಡೆಂಟಿಟಿ ಹಾಗೂ ಒಳಗೊಳ್ಳುವಿಕೆಯ ಸವಾಲುಗಳನ್ನು ಗಂಭೀರವಾಗಿ ಚರ್ಚಿಸುತ್ತವೆ. ಕವಿ ಸಿದ್ದಲಿಂಗಯ್ಯನವರ 'ಮತಾಂತರ' ಕತೆಯು ದಲಿತರು ಎದುರಿಸುವ ಅಸ್ಪೃಶ್ಯತೆಯ ಘೋರ ಅವಮಾನಗಳು ಮತ್ತು ಅದರಿಂದ ಪಾರಾಗಲು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಗಳಿಗೆ ಮತಾಂತರಗೊಳ್ಳುವ ಅಸಹಾಯಕತೆಯನ್ನು ವಿಷಾದದಿಂದ ಚಿತ್ರಿಸುತ್ತದೆ. ಅಂತೆಯೇ, ಮಿತ್ರಾ ವೆಂಕಟ್ರಾಜ ಅವರ 'ಅಲ್ಲೇ ಇರು' ಕತೆಯು ಮುಂಬೈ ಗಲಭೆಗಳ ಹಿನ್ನೆಲೆಯಲ್ಲಿ, ಮನುಷ್ಯ ಸಂಬಂಧಗಳು ಹೇಗೆ ಹಠಾತ್ತಾಗಿ ಬದಲಾಗಿ, ಧರ್ಮದ ಆಧಾರದ ಮೇಲೆ 'ನಮ್ಮವರು' ಮತ್ತು 'ಅನ್ಯರು' ಎಂಬ ಕಂದರಗಳು ಸೃಷ್ಟಿಯಾಗುತ್ತವೆ ಎಂಬುದನ್ನು ನಿರೂಪಿಸುತ್ತದೆ. ಈ ಎರಡೂ ಕತೆಗಳು ಮನುಷ್ಯರ ನಡುವೆ ಏಳುವ ವಿಭಜನೆಯ ಗೋಡೆಗಳನ್ನು ಮತ್ತು ಸಾಮಾಜಿಕ ಅಸಹನೆಯ ದುರಂತಗಳನ್ನು ಮಾರ್ಮಿಕವಾಗಿ ಅನಾವರಣಗೊಳಿಸುತ್ತವೆ.

Article Details

Section

Research Articles

Author Biography

ಅಮರೇಂದ್ರ ಶೆಟ್ಟಿ ಆರ್.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು

How to Cite

ಅಮರೇಂದ್ರ ಶೆಟ್ಟಿ ಆರ್. (2023). ಕನ್ನಡ ಕತೆಗಳಲ್ಲಿ ’ಒಳಗೊಳ್ಳುವಿಕೆ ಹಾಗೂ ಐಡೆಂಟಿಟಿಯ’ ಚಿತ್ರಣ. ಅಕ್ಷರಸೂರ್ಯ (AKSHARASURYA), 2(06), 36 to 44. https://aksharasurya.com/index.php/latest/article/view/142

References

ಜಿ.ಎಸ್.ಅಮೂರ, ಪ್ರಸ್ಥಾವನೆ, ಸ್ವಾತಂತ್ರೋತ್ತರ ಕನ್ನಡ ಕಥಾಲೋಕ, ಅಂಕಿತ ಪುಸ್ತಕ, ಬೆಂಗಳೂರು, ೨೦೦೪.

ಕರೀಗೌಡ ಬೀಚನಹಳ್ಳಿ, ಶತಮಾನದ ಸಣ್ಣ ಕಥೆಗಳ ಸಮೀಕ್ಷೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ೨೦೧೧.

ಮಿತ್ರಾ ವೆಂಕಟ್ರಾಜ, ಮಾಯಕದ ಸತ್ಯ, ಅಂಕಿತ ಪುಸ್ತಕ, ಬೆಂಗಳೂರು, 2009.

Most read articles by the same author(s)