ಮಹಿಳೆಯರ ಮೇಲೆ ಮಾಧ್ಯಮದ ಪ್ರಭಾವ

Main Article Content

ಶ್ರೀನಿವಾಸ ಬಿ.ಎಸ್.

Abstract

ಇಂದು 21ನೇ ಶತಮಾನವನ್ನು ಮಾಧ್ಯಮ ಯುಗ ಎಂದು ನಾವು ಪರಿಗಣಿಸಿದ್ದೇವೆ. ಸಂವಹನ ತಂತ್ರಜ್ಞಾನದಲ್ಲಿ ನಡೆದಿರುವ ಕ್ರಾಂತಿಕಾರಕ ಬೆಳವಣಿಗೆಯಿಂದ ಇದೊಂದು ಜಗತ್ತಿನ ಕೇಂದ್ರಬಿಂದುವಾಗಿದೆ. ಪ್ರತಿಕ್ಷಣದಲ್ಲೂ ಬದಲಾವಣೆ ಕಾಣುತ್ತಿರುವ ಈ ಕ್ಷೇತ್ರದಲ್ಲಿ ಮಾಧ್ಯಮ ಇಂದು ಜನರ ಒಡನಾಡಿಯಾಗಿದೆ. ತಂತ್ರಜ್ಞಾನ ಮನೆಯ ಬಾಗಿಲಿಗೆ ಲಭ್ಯ; ಮಾಧ್ಯಮ ಮತ್ತು ಕಂಪ್ಯೂಟರ್ ಮನೆಯ ವಿನ್ಯಾಸವನ್ನೇ ಬದಲಾಯಿಸಿವೆ. ವಿಶ್ವದ ಸುದ್ದಿ ವಿಷಯಗಳನ್ನು ಕ್ಷಣ ಮಾತ್ರದಲ್ಲಿ ಮನೆಯಲ್ಲೇ ಪಡೆಯುವ ಸೌಲಭ್ಯದಿಂದ ಜನರ ಸಂಪರ್ಕದ ರೀತಿ ನೀತಿಯೇ ಬದಲಾವಣೆಯಾಗಿದೆ. ಮಾಧ್ಯಮವು ಹಲವಾರು ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರ ಮೂಲಕ ಸಮಾಜದಲ್ಲಿನ ಮಹಿಳೆಯರು ಮತ್ತು ಮಕ್ಕಳಿಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಇಂದು ಮಹಿಳೆ ಮನೆಯ ಹೊರಗೂ ಒಳಗೂ ದುಡಿಯುವ ಅನಿವಾರ್ಯತೆ ಇದೆ. ಆಕೆ ತನ್ನ ವ್ಯಕ್ತಿತ್ವವನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳಲು ಅನುಕೂಲಗಳಿವೆ ಮತ್ತು ಅವಕಾಶಗಳಿವೆ. ಸಮಾಜ ಈ ಬದಲಾವಣೆಯನ್ನು ಒಪ್ಪಿಕೊಂಡರೆ, ಮಹಿಳೆಯರು ತಮ್ಮ ಪ್ರಗತಿಗೆ ತಾವೇ ಮಾರ್ಗೋಪಾಯವನ್ನು ಮಾಧ್ಯಮದ ಮೂಲಕ ಕಂಡುಕೊಳ್ಳಬಹುದು.

Article Details

Section

Research Articles

Author Biography

ಶ್ರೀನಿವಾಸ ಬಿ.ಎಸ್.

ಅತಿಥಿ ಉಪನ್ಯಾಸಕರು, ಮಹಿಳಾ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಬೆಂಗಳೂರು.

How to Cite

ಶ್ರೀನಿವಾಸ ಬಿ.ಎಸ್. (2025). ಮಹಿಳೆಯರ ಮೇಲೆ ಮಾಧ್ಯಮದ ಪ್ರಭಾವ. ಅಕ್ಷರಸೂರ್ಯ (AKSHARASURYA), 7(06), 78 to 86. https://aksharasurya.com/index.php/latest/article/view/1340

References

ಕಲಾವತಿ ಬಿ.ಜಿ., (2010) ಮಾಧ್ಯಮ ಮತ್ತು ಮಹಿಳೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಉಷಾರಾಣಿ ಎನ್., (2002), ಮಾಧ್ಯಮ ಮತ್ತು ಮಹಿಳೆ, ರಾಧಾ ಟ್ರಸ್ಟ್, ಮಂಡ್ಯ.

ಗೀತಾ ತಿವಾರಿ, (2010) ಮಾಧ್ಯಮ ಮತ್ತು ಮಹಿಳೆ, ಮಹಾವೀರ ಅಂಡ್ ಸನ್ಸ್ ಪ್ರಕಾಶನ, ಬೆಂಗಳೂರು.

ನೇಮಿಚಂದ್ರ, (2001), ಮಹಿಳಾ ಅಧ್ಯಯನ, ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು.

ಮಣಿಕರ್ಣಿಕಾ ಎಚ್.ಆರ್., (2013), ಮಹಿಳೆಯರ ಹದಿಹರೆಯದ ಸಮಸ್ಯೆಗಳು, ಸವಾಲುಗಳು ಮತ್ತು ಪರಿಹಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.

ಶಂಕರ್‌ರಾವ್ ಚ.ನ., (2012), ಮಹಿಳಾ ಅಧ್ಯಯನ, ಜೈ ಭಾರತ್ ಪ್ರಕಾಶನ, ಮಂಗಳೂರು.

ಶ್ರೀಮತಿ ಎಚ್.ಎಸ್., (2001), ಆಧುನಿಕ ಭಾರತದಲ್ಲಿ ಮಹಿಳೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಸುಧಾ ಸೀತಾರಾಮನ್, (2010), ಮಹಿಳಾ ಅಧ್ಯಯನ ಸಮಾಜ ಶಾಸ್ತ್ರೀಯ ದೃಷ್ಟಿಕೋನ, ಸ್ತ್ರೀಲೇಖ ಪ್ರಕಾಶನ, ಬೆಂಗಳೂರು.

Most read articles by the same author(s)