ಸ್ಥಳೀಯ ಸ್ವಯಂ-ಸರ್ಕಾರದಲ್ಲಿ ಚುನಾಯಿತ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು
Main Article Content
Abstract
ಭಾರತ ಸಂವಿಧಾನದ ೭೩ನೇ ತಿದ್ದುಪಡಿಯು ಸ್ಥಳೀಯ ಸ್ವಯಂ-ಸರ್ಕಾರಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸಿಕೊಟ್ಟಿದೆ. ಇದು ಮಹಿಳೆಯರಿಗೆ ರಾಜಕೀಯವಾಗಿ ಭಾಗವಹಿಸಲು ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಒದಗಿಸಿದೆ. ಹಾಗೂ ಇದು ಮಹಿಳಾ ಸಬಲೀಕರಣಕ್ಕೂ ಕಾರಣವಾಗಿದೆ. ಪಂಚಾಯಿತಿಗಳಿಗೆ ಆಯ್ಕೆಯಾದ ಮಹಿಳೆಯರೆಲ್ಲರೂ ಒಂದೇ ರೀತಿಯಲ್ಲಿ ಆಡಳಿತ ಮಾಡಲು ಸಾಧ್ಯವಾಗಿರುವುದಿಲ್ಲ. ಏಕೆಂದರೆ ಈ ಮಹಿಳೆಯರು ಎಲ್ಲಾ ವರ್ಗ, ಜಾತಿ, ಮತ, ಧರ್ಮವನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಆಲೋಚನಾ ಕ್ರಮ, ನಿರ್ಧಾರ ತೆಗೆದುಕೊಳ್ಳುವಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣುತ್ತೇವೆ. ಅಕ್ಷರಸ್ಥ ವಿದ್ಯಾವಂತ ಮಹಿಳೆಯರ ಆಲೋಚನಾ ಕ್ರಮ ಒಂದು ರೀತಿ ಇದ್ದರೆ ಅನಕ್ಷರಸ್ಥ ಅವಿದ್ಯಾವಂತ ಮಹಿಳೆಯರ ಆಲೋಚನಾ ಕ್ರಮ ಇನ್ನೊಂದು ರೀತಿ ಇರುತ್ತದೆ. ಇಬ್ಬರೂ ಮಹಿಳೆಯರೇ ಆಗಿರುತ್ತಾರೆ. ಆದರೆ ಅವರ ಚಿಂತನೆ-ನಡುವಳಿಕೆ, ಆಡಳಿತದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳನ್ನ ಕಾಣುತ್ತೇವೆ. ಈ ಸಮಸ್ಯೆ ಮತ್ತು ಸವಾಲುಗಳು ಎರಡು ವರ್ಗದ ಮಹಿಳೆಯರನ್ನು ಕೇಂದ್ರೀಕರಿಸಿ ಬರುತ್ತವೆ. ಹಾಗಾಗಿ ಪಂಚಾಯಿತಿಯ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮತ್ತು ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಗಾಯಿತ್ರಿ ಎನ್., (೨೦೧೨), ಮಹಿಳಾ ಮೀಸಲಾತಿ ಮತ್ತು ಲಿಂಗ ರಾಜಕಾರಣ, ಲಡಾಯಿ ಪ್ರಕಾಶನ, ಗದಗ.
ಈಶ್ವರಚಂದ್ರ, (೨೦೧೦), ಭಾರತದಲ್ಲಿ ಪಂಚಾಯತಿ ರಾಜ್, ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ಹೊಸದೆಹಲಿ.
ಒಡೆಯರ್ ಡಿ. ಹೆಗ್ಗಡೆ, (೨೦೦೭), ಭಾರತದಲ್ಲಿ ಮಹಿಳಾ ರಾಜಕೀಯ ಪ್ರತಿನಿಧ್ಯ, ಅರ್ಜುನ್ ಪಬ್ಲಿಷಿಂಗ್ ಹೌಸ್, ಮೈಸೂರು.
ಚಂದ್ರಶೇಖರ್ ಕೆ., (೨೦೦೯), ಅಭಿವೃದ್ಧಿ ಪಥದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು, ಅಹನ ಪ್ರಕಾಶನ, ಬೆಂಗಳೂರು.
ಮೀನಾಕ್ಷಿ ಡಿ., (೨೦೧೦), ನಿರ್ಣಯ ಪ್ರಕ್ರಿಯೆಯಲ್ಲಿ ಚುನಾಯಿತ ಮಹಿಳೆಯರ ಪಾತ್ರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಲೋಹಿತಾಶ್ವ ಹೆಚ್.ಸಿ., (೧೯೯೮), ಪಂಚಾಯತ್ ರಾಜ್ ವ್ಯವಸ್ಥೆ, ವಿದ್ಯಾನಿಧಿ ಪ್ರಕಾಶನ, ಬೆಂಗಳೂರು.
ಶಂಕರಪ್ಪ. ಆರ್., (೨೦೦೭), ಆಡಳಿತ ವಿಕೇಂದ್ರೀಕರಣ ಮತ್ತು ಗ್ರಾಮೀಣಾಭಿವೃದ್ಧಿ, ಅನುಜಯ ಪ್ರಕಾಶನ, ಬೆಂಗಳೂರು.