ಡಿ.ವಿ.ಜಿ. ಅವರ ಚಿಂತನಾ ಸಾಹಿತ್ಯ: ಸಾಮಾನ್ಯ ವ್ಯಕ್ತಿ

Main Article Content

ಬಸವರಾಜ ಜಿ.

Abstract

ಸಾಮಾನ್ಯರಲ್ಲಿ ಅಸಾಮಾನ್ಯರ ಹೆಜ್ಜೆಯ ಗುರುತುಗಳ ಕುರಿತು ಚಿಂತಿಸುವುದು ಒಂದು ಅಸಾಮಾನ್ಯ ಕ್ರಿಯೆ ಆಗಿದೆ. ಸಮಾಜದಲ್ಲಿ ಎಲೆಮರೆ ಕಾಯಿಯಂತೆ ಬಾಳಿ ಬೆಳಗಿದ ವ್ಯಕ್ತಿಗಳ ಮೌಲ್ಯಯುತವಾದ ಬಾಳ್ವೆಗೆ ಕನ್ನಡಿ ಹಿಡಿದು ಚಿಂತನೆ ನಡೆಸಲಾಗಿದೆ. ಡಿ.ವಿ.ಜಿ. ಅವರು ತಮ್ಮ ಬದುಕಿನ ಅನುಭವಗಳನ್ನು ಸಾಮಾನ್ಯ ವ್ಯಕ್ತಿಗಳಲ್ಲಿ ವಿಸ್ತರಿಸುವ ಹಾಗೂ ಬದುಕಿದ ನೆಲೆಗಳನ್ನು ತಮ್ಮ ವೈಚಾರಿಕ ದೃಷ್ಟಿಕೋನದಲ್ಲಿ ಚಿಂತಿಸಿದವರು. ತಮ್ಮ ʼಜ್ಞಾಪಕ ಚಿತ್ರಶಾಲೆʼ ಎಂಬ ಶೀರ್ಷಿಕೆಯಲ್ಲಿ ಹಲವು ವ್ಯಕ್ತಿಗಳ ಕುರಿತು ಅವರ ಜೀವನದ ವಿವಿಧ ಮಗ್ಗಲುಗಳನ್ನು ಪರಿಚಯಿಸುತ್ತಾರೆ. ಅಲ್ಲಿರುವ ವೈಚಾರಿಕ ನಿಲುವುಗಳನ್ನು ತಮ್ಮ ಚಿಂತನೆಯ ಮೂಲಕ ಸಹೃದಯರಿಗೆ ಮುಟ್ಟಿಸುವ ಸೃಜನಶೀಲತೆಯನ್ನು ಈ ಕೃತಿಯಲ್ಲಿ ಕಾಣಬಹುದು. ಅಂತಹ ವ್ಯಕ್ತಿಗಳಲ್ಲಿ ಬಹುಮುಖ್ಯರಾದವರೆಂದರೆ ಬಂಡಿ ರಸೂಲ್ ಖಾನ್, ಪಿಚ್ಚೆಮೊದಲಿಯಾರ್, ಬೆಂಗಳೂರು ನಾಗರತ್ನಮ್ಮ, ಡಾ. ಗುಂಡಣ್ಣ ಮುಂತಾದವರ ಕುರಿತ ವಿಚಾರಧಾರೆಗಳು.

Article Details

Section

Research Articles

Author Biography

ಬಸವರಾಜ ಜಿ.

ಸಂಶೋಧನಾ ವಿದ್ಯಾರ್ಥಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

How to Cite

ಬಸವರಾಜ ಜಿ. (2025). ಡಿ.ವಿ.ಜಿ. ಅವರ ಚಿಂತನಾ ಸಾಹಿತ್ಯ: ಸಾಮಾನ್ಯ ವ್ಯಕ್ತಿ. ಅಕ್ಷರಸೂರ್ಯ (AKSHARASURYA), 7(06), 19 to 28. https://aksharasurya.com/index.php/latest/article/view/1333

References

ತಿಪ್ಪೇರುದ್ರಸ್ವಾಮಿ ಎಚ್., (2011), ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಡಿವಿಕೆ ಮೂರ್ತಿ ಪ್ರಕಾಶನ, ಮೈಸೂರು.

ನಾಯಕ ಹಾ.ಮಾ. (ಸಂ), (2013), ಡಿ.ವಿ.ಜಿ. ಕೃತಿಶ್ರೇಣಿ: ಸಂಪುಟ-6, ನೆನಪಿನ ಚಿತ್ರಗಳು, ಜ್ಞಾಪಕ ಚಿತ್ರಶಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

Most read articles by the same author(s)