ಶೋಷಿತರ ಉದ್ಧಾರಕ್ಕಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳು

Main Article Content

ರವೀಂದ್ರ ಕೆ. ವಿ.

Abstract

ಭಾರತೀಯ ಸಮಾಜದಲ್ಲಿ ಶತಮಾನಗಳಿಂದ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಶೋಷಣೆಗೆ ಒಳಗಾದ ತಳಸಮುದಾಯಗಳ ಬಿಡುಗಡೆಗಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರು ನೀಡಿದ ತಾತ್ವಿಕ ಕೊಡುಗೆಗಳು ಅಪಾರವಾಗಿವೆ. ಅಸ್ಪೃಶ್ಯತೆ, ಅಸಮಾನತೆ ಹಾಗೂ ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಅವರು, 'ಶಿಕ್ಷಣ, ಸಂಘಟನೆ ಮತ್ತು ಹೋರಾಟ' ಎಂಬ ಮೂಲಮಂತ್ರದ ಮೂಲಕ ಶೋಷಿತರಲ್ಲಿ ಆತ್ಮಗೌರವವನ್ನು ಜಾಗೃತಗೊಳಿಸಿದರು. ಮಹಾಡ್ ಸತ್ಯಾಗ್ರಹ, ದೇವಾಲಯ ಪ್ರವೇಶ, ಹಿಂದೂ ಕೋಡ್ ಬಿಲ್ ಮಂಡನೆ ಹಾಗೂ ಸಂವಿಧಾನ ರಚನೆಯ ಮೂಲಕ ಸಮಾನತೆಯ ಹಕ್ಕುಗಳನ್ನು ಕಾನೂನಾತ್ಮಕವಾಗಿ ಒದಗಿಸಿದ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ. ಪ್ರಜಾಪ್ರಭುತ್ವದ ಯಶಸ್ಸಿಗಾಗಿ ಜಾತಿವಿನಾಶ ಹಾಗೂ ವೈಚಾರಿಕ ಪ್ರಜ್ಞೆಯ ಅಗತ್ಯವನ್ನು ಸಾರಿದ ಅಂಬೇಡ್ಕರ್‌ರವರ ಆದರ್ಶಗಳು ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳ ಪ್ರಸ್ತುತತೆಯನ್ನು ವಿವರಿಸಲಾಗಿದೆ.

Article Details

Section

Research Articles

Author Biography

ರವೀಂದ್ರ ಕೆ. ವಿ.

ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು.

How to Cite

ರವೀಂದ್ರ ಕೆ. ವಿ. (2023). ಶೋಷಿತರ ಉದ್ಧಾರಕ್ಕಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳು. ಅಕ್ಷರಸೂರ್ಯ (AKSHARASURYA), 2(05), 165 to 170. https://aksharasurya.com/index.php/latest/article/view/133

References

ಅಂಬೇಡ್ಕ‌ರ್ ಚಿಂತನೆಗಳ ಅನಂತ ಸಾಧ್ಯತೆಗಳು ಸಂ: ಡಾ. ಬಸವರಾಜ ಕಲ್ಗುಡಿ, ಪ್ರಸಾರಂಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, 2009.

ಸಾಮಾಜಿಕ ಪರಿವರ್ತನಾಕಾರರು ಮತ್ತು ಡಾ. ಅಂಬೇಡ್ಕರ್: ಎಸ್. ಡಿ. ರಾಯಮನೆ, ಕರ್ನಾಟಕ ದಲಿತ ಸಂಘರ್ಷ ರಾಜ್ಯ ಸಮಿತಿ, ಬೆಂಗಳೂರು, 2012.

ಅಂಬೇಡ್ಕರ್‌ರ ಕ್ರಾಂತಿಕಾರಿ ವಿಚಾರಗಳು, ಸಂ: ಎನ್. ಬಿ. ರೋಡಗಿ, ಡಾ. ಶ್ರೀ. ಆ. ಚ. ನಿ. ಪ್ರಕಾಶನ, ಸಿಂದಗಿ ತಾಲೂಕು, ವಿಜಯಪುರ ಜಿಲ್ಲೆ, ಮಳಸಾವಳಗಿ, 2016.

ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ, ಕನ್ನಡಕ್ಕೆ: ಎಚ್. ವಿ. ಸುಜ್ಞಾನಮೂರ್ತಿ, ಲಡಾಯಿ ಪ್ರಕಾಶನ, ಗದಗ, 2017.

ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಸಾಮಾಜಿಕ ಋಣ ಸಂದಾಯ: ಎನ್. ಸಿ. ಮುನಿಯಪ್ಪ ಸಿದ್ದಾರ್ಥ, ಪೌಂಡೇಶನ್, ಬೆಂಗಳೂರು, 2020.

Most read articles by the same author(s)