ರಂಗಭೂಮಿ ಮತ್ತು ಚಳುವಳಿ

Main Article Content

ರವೀಂದ್ರ ಕೆ. ವಿ.

Abstract

ಮಾನವನ ದೈನಂದಿನ ದಣಿವನ್ನು ನಿವಾರಿಸಲು ಆರಂಭವಾದ ರಂಗಭೂಮಿಯು ಕಾಲಕ್ರಮೇಣ ಸಾಮಾಜಿಕ ಬದಲಾವಣೆಯ ಪ್ರಬಲ ಮಾಧ್ಯಮವಾಗಿ ಬೆಳೆದಿದೆ. ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ದಬ್ಬಾಳಿಕೆ, ಶೋಷಣೆ ಮತ್ತು ಸಾಮಾಜಿಕ ಸಮಸ್ಯೆಗಳ ವಿರುದ್ಧ ಜನಸಾಮಾನ್ಯರನ್ನು ಜಾಗೃತಗೊಳಿಸಲು ಬೀದಿನಾಟಕಗಳು ಚಳುವಳಿಯ ರೂಪವನ್ನು ಪಡೆದುಕೊಂಡವು. ಇಪ್ಪಾ (IPTA), ಜನಕಲಾ ಸಮಿತಿಯಂತಹ ಸಂಘಟನೆಗಳು ಜನಪರ ಸಿದ್ಧಾಂತಗಳ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವು. ಭಾಷಾ ಚಳುವಳಿ, ದಲಿತ ಚಳುವಳಿ, ಪರಿಸರ ಸಂರಕ್ಷಣೆ ಮತ್ತು ಸ್ತ್ರೀವಾದಿ ಹೋರಾಟಗಳಲ್ಲಿ ಬೀದಿನಾಟಕಗಳು ನಿರ್ಣಾಯಕ ಪಾತ್ರ ವಹಿಸಿವೆ. ಬಂಡವಾಳಶಾಹಿ ಮತ್ತು ಸರ್ಕಾರದ ರೈತ ವಿರೋಧಿ ಧೋರಣೆಗಳನ್ನು ಖಂಡಿಸಲು, ಸಮಾಜಘಾತಕ ಚಟುವಟಿಕೆಗಳ ಅರಿವು ಮೂಡಿಸಲು ರಂಗಭೂಮಿ ಇಂದಿಗೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಸಮಾಜ ನಿರ್ಮಾಣ ಮತ್ತು ಸಾಮಾಜಿಕ ಪರಿವರ್ತನೆಯಲ್ಲಿ ರಂಗಭೂಮಿ ಮತ್ತು ಚಳುವಳಿಗಳ ನಡುವಿನ ಅವಿನಾಭಾವ ಸಂಬಂಧವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ರವೀಂದ್ರ ಕೆ. ವಿ.

ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

How to Cite

ರವೀಂದ್ರ ಕೆ. ವಿ. (2023). ರಂಗಭೂಮಿ ಮತ್ತು ಚಳುವಳಿ. ಅಕ್ಷರಸೂರ್ಯ (AKSHARASURYA), 2(04), 46 to 48. https://aksharasurya.com/index.php/latest/article/view/109

References

ರಂಗಭೂಮಿ ಮತ್ತು ಚಳುವಳಿ: ಪ್ರೊ. ನಾಗೇಶ್ ವಿ. ಬೆಟ್ಟಕೋಟೆ, ಧ್ವನಿ ಪ್ರಕಾಶನ, ಜ್ಞಾನಗಂಗಾನಗರ ಜ್ಞಾನಭಾರತಿ, 2019.

ಆಧುನಿಕ ಕನ್ನಡ ನಾಟಕ: ಡಾ. ಕೆ ಮರಳು ಸಿದ್ದಪ್ಪ, ಅಂಕಿತ ಪ್ರಕಾಶನ, ಬಸವನಗುಡಿ, ಬೆಂಗಳೂರು, 2013.

ಕನ್ನಡ ರಂಗಭೂಮಿಯ ವಿಕಾಸ: ಡಾಎಚ್.ಕೆ. ರಾಮನಾಥ, ಅಭಿನಯ ಪ್ರಕಾಶನ, ಮೈಸೂರು

Most read articles by the same author(s)