ತತ್ವಪದಗಳಲ್ಲಿನ ಪಾರಂಪರಿಕತೆ ಹಾಗೂ ಆಧುನಿಕತೆ

Main Article Content

ಶೈಲಜ ವಿ.

Abstract

ತತ್ವಪದ ಸಾಹಿತ್ಯವು ಅನುಭಾವಿಕ ಅಥವಾ ಆಧ್ಯಾತ್ಮಿಕ ಎಂದು ಕರೆಯುವ ಗುರು ಪರಂಪರೆಗೆ ಒಳಗಾಗಿರುವ ಸಾಹಿತ್ಯ. ತತ್ವಪದಗಳು ಆತ್ಮ ಮತ್ತು ಪರಮಾತ್ಮರ ನಡುವಿನ ಸಂಬಂಧವನ್ನು ಪ್ರತಿಪಾದಿಸುತ್ತವೆ. ತತ್ವಪದ ಸಾಹಿತ್ಯವು ಶರಣರು, ದಾಸರು, ಸೂಫಿಗಳು, ಜೈನ ಧರ್ಮೀಯರು, ಆರೂಢರು, ಅವಧೂತರು, ಸಿದ್ಧರು, ನಾಥರು, ಪಾಂಚಾಳರು ಮುಂತಾದ ಅನೇಕ ಅನುಭಾವ ಪಂಥದ ಸಾಧಕರಿಂದ ರಚನೆಯಾದ ಗೇಯಾತ್ಮಕ ಗೀತೆಗಳಾಗಿವೆ. ಜನಸಮುದಾಯಗಳಲ್ಲಿ ಮೌಖಿಕ ಪರಂಪರೆಯ ಮೂಲಕ ನೆಲೆ ನಿಂತಿವೆ. ಇದು ಭಕ್ತಿ ಸಾಹಿತ್ಯ ಅಲ್ಲ, ದೈವ ಮಾರ್ಗದ ಸಾಹಿತ್ಯವೂ ಅಲ್ಲ. ಕೇವಲ ಹಾಡುವ, ಹಾಡಿಕೊಳ್ಳುವ ಸಾಹಿತ್ಯವೂ ಅಲ್ಲ. ಇದು ಸಾಧಕ ಸಾಹಿತ್ಯ.
ಸಮಾಜ ಮತ್ತು ತನ್ನ ನಡುವೆ ಸಾಮರಸ್ಯತೆ ತಂದು ಕೊಡುತ್ತದೆ. ನಿತ್ಯ ಜೀವನದ ಅಂತಃಸತ್ವ ಎತ್ತಿ ತೋರುತ್ತದೆ. ಸ್ವರ ವಚನ, ಭಜನೆ, ತತ್ವ ಪದ ಎನ್ನುತ್ತೇವೆ. ಇದು ನಡುರಾತ್ರಿಯ ಕಾವ್ಯ. ಲೋಕ ಮಲಗಿರುವಾಗ ತತ್ವಪದಕಾರರು ಎಚ್ಚರವಾಗಿರುತ್ತಾರೆ. ಲೋಕವನ್ನು ಅರಿಯಲು ಬೇಕಾದ ವಿವೇಕ, ಭಕ್ತಿ, ಜ್ಞಾನ ರೂಪದ ಗುರು ಒಳಗಿನ ಅರಿವಿನ ಗುರುವಾಗಿರುತ್ತಾನೆ. ಸಾಮಾಜಿಕವಾಗಿ ಕ್ಷೋಭೆಗಳಿಂದ ತಲ್ಲಣಗೊಳ್ಳುತ್ತಿರುವ ಇಂದಿನ ಸಂದರ್ಭಗಳಲ್ಲಿ ಅವರ ನೀತಿ ಬೋಧನೆಗಳು, ಸಾಮಾಜಿಕ ವಿಡಂಬನೆಗಳು ಹಾಗೂ ಅರಿವಿನ ತತ್ವಗಳು ನಿಜಕ್ಕೂ ಪರಿಣಾಮಕಾರಿಯಾಗಿವೆ.

Article Details

Section

Research Articles

Author Biography

ಶೈಲಜ ವಿ.

ಸಂಶೋಧನಾರ್ಥಿ, ಬೆಂಗಳೂರು ಉತ್ತರ ವಿ.ವಿ., ತಮಟ, ಕೋಲಾರ.

How to Cite

ಶೈಲಜ ವಿ. (2025). ತತ್ವಪದಗಳಲ್ಲಿನ ಪಾರಂಪರಿಕತೆ ಹಾಗೂ ಆಧುನಿಕತೆ. ಅಕ್ಷರಸೂರ್ಯ (AKSHARASURYA), 7(03), 183 to 188. https://aksharasurya.com/index.php/latest/article/view/1202

References

ಪ್ರಭು ಖಾನಾಪುರ (ಸಂ), (1998), ಮುಸ್ಲಿಂ ತತ್ವಪದಕಾರರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಶಾಂತರಸ (ಪ್ರ.ಸಂ.), (2000), ತತ್ವಪದಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಬಸವರಾಜ ಸಭರದ (ಸಂ.), (2000), ಹೈದರಾಬಾದ್ ಕರ್ನಾಟಕದ ತತ್ವಪದಗಳು, ಪ್ರಸಾರಾಂಗ, ಕನ್ನಡ ವಿ.ವಿ., ಹಂಪಿ.

Most read articles by the same author(s)