ಅಡಿಗರ ಕಾವ್ಯದಲ್ಲಿ ಮಹಿಳೆ

Authors

  • ಅಣ್ಣಮ್ಮ ಪ್ರಾಧ್ಯಾಪಕರು, ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

Keywords:

ರೊಮ್ಯಾಂಟಿಕ್, ಅತಿಭಾವುಕತೆ, ಸೌಂದರ್ಯೋಪಾಸನೆ, ಸಂಪ್ರದಾಯ, ಹೃದಯವಿದ್ರಾವಕ, ಇಂದ್ರಿಯಸುಖ

Abstract

ನವೋದಯದ ಜಾಡಿನಲ್ಲೇ ಮೊದಲ ಮೂರು ಸಂಕಲನ (ಭಾವತರಂಗ, ಕಟ್ಟುವೆವು ನಾವು, ನಡೆದು ಬಂದ ದಾರಿ) ಬರೆದ ಗೋಪಾಲಕೃಷ್ಣ ಅಡಿಗರು, ಈ ಮೂರು ಸಂಕಲನದಲ್ಲಿ ಮಹಿಳೆಯನ್ನು ಕುರಿತು ಅನೇಕ ಕವಿತೆಗಳನ್ನು ಬರೆಯುತ್ತಾರೆ. ರೊಮ್ಯಾಂಟಿಕ್ ಸಂಪ್ರದಾಯದಲ್ಲಿ ಕಂಡುಬರುವ ಅತಿಭಾವುಕತೆ, ಸೌಂದರ್ಯೋಪಾಸನೆ, ನಿಸ್ಸತ್ವವಾದ ಭಾಷೆ ತ್ಯಜಿಸಿ ವಾಸ್ತವಿಕ ಜೀವನಕ್ಕೆ ಸ್ಪಂದಿಸಿ ಕವಿತೆ ರಚಿಸುವ ಪ್ರಯೋಗಕ್ಕೆ ಕೈ ಹಚ್ಚಿದ್ದು ನಂತರ ಕಂಡು ಬರುತ್ತೆ.

1938ರಿಂದ 1942ರ ವರೆಗೆ ಅನೇಕ ಕವಿತೆಗಳನ್ನು ಬರೆದ ಅಡಿಗರು ‘ಜೀವನಸಖಿ’ ‘ನಗು ನನ್ನ ನಲ್ಲೆ’ ‘ಮುಗುದೆ ಇವಳು’ ‘ನನ್ನವಳೀ ಹೆಣ್ಣು’ ‘ನನ್ನ ಮೋಹದ ಮೂರ್ತಿ’ ‘ಒಡೆದು ಬಿದ್ದ ಕೊಳಲು’ ‘ಹೆಣ್ಣು: 1’ ‘ಹೆಣ್ಣು: 2’ ‘ಒಲವು’ ‘ಎಂಥ ಕಣ್ಣು’ ‘ತರಳೆ’ ‘ನಿಜವ ನುಡಿ ತಂಗಿ’ ‘ಮಾನವ ಹೃದಯವು’ ‘ನನ್ನ ನಿನ್ನ ಲೋಕ’ ‘ಒಂದು ಕಾಗದ’ ‘ನನ್ನ ನಿನ್ನ ನಡುವೆ’ ‘ಏಕತೆ’, ‘ಪರಿತಾಪ’- ಇಂಥ ಕವಿತೆಗಳು ಪ್ರಾರಂಭದ ಹೆಣ್ಣನ್ನು ಕುರಿತ ಕವಿತೆಗಳು.

References

ಲಕ್ಷ್ಮೀನಾರಾಯಣ ಭಟ್ಟ ಎನ್. ಎಸ್. (2016). ಅನನ್ಯ. ಕ್ಷಮಾ ಪ್ರಕಾಶನ. ಬೆಂಗಳೂರು.

ಸುಮತೀಂದ್ರ ನಾಡಿಗ. (1997). ಅಡಿಗರು ಮತ್ತು ನವ್ಯಕಾವ್ಯ. ಎಸ್.ಬಿ.ಎಸ್.‌ ಪಬ್ಲಿಷರ್ಸ್.‌ ಬೆಂಗಳೂರು.

ದೇಶಪಾಂಡೆ ಸುಬ್ಬರಾಯ (ಸಂ). (1977). ಅನ್ವೇಷಣದ ಅಡಿಗರು. ಅನ್ವೇಷಣ ಪ್ರಕಾಶನ. ಹುಬ್ಬಳ್ಳಿ

ಅಣ್ಣಮ್ಮ. (2016). ಅಡಿಗರ ಕಾವ್ಯದಲ್ಲಿ ವಾಸ್ತವತೆ. ನಿವೇದಿತಾ ಪ್ರಕಾಶನ. ಬೆಂಗಳೂರು.

Downloads

Published

05.11.2024

How to Cite

ಅಣ್ಣಮ್ಮ. (2024). ಅಡಿಗರ ಕಾವ್ಯದಲ್ಲಿ ಮಹಿಳೆ. AKSHARASURYA, 5(02), 35 to 41. Retrieved from https://aksharasurya.com/index.php/latest/article/view/521

Issue

Section

ಕಾಲುದಾರಿ. | BYWAY.