ವಚನ ಸಾಹಿತ್ಯದಲ್ಲಿ ಪರಂಪರೆ ಹಾಗೂ ಆಧುನಿಕ ಚಿಂತನೆಗಳು

Main Article Content

ರಾಮರೆಡ್ಡಿ ಕೆ.

Abstract

ಹನ್ನೆರಡನೆಯ ಶತಮಾನ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಲಿಂಗತ್ವದ ನೆಲೆಯಲ್ಲಿ ಅಸಮಾನತೆಯನ್ನು ಜೀವಂತವಾಗಿಟ್ಟಿರುವಂತಹ ಕಾಲವಾಗಿತ್ತು. ಇಂತಹ ಕಾಲದಲ್ಲಿ ಬದುಕಿದ್ದ ಬಸವಣ್ಣ, ಅಲ್ಲಮಪ್ರಭು, ದೇವರ ದಾಸಿಮಯ್ಯ, ಮಾದಾರ ಚನ್ನಯ್ಯ, ಅಂಬಿಗರ ಚೌಡಯ್ಯ ಮುಂತಾದ ಶರಣರೆಲ್ಲರೂ ಜೀವಪರ, ಸಮಾನತೆಯ ಪರ ಕಾಳಜಿಯನ್ನು ಹೊಂದಿದ ಮಾನವತಾವಾದಿಗಳಾಗಿದ್ದರು. ಇವರೆಲ್ಲರೂ ಈ ಅಸಮಾನತೆಯ ವಿರುದ್ಧ ಪ್ರತಿಭಟಿಸಿದರು. ಶರಣರು ನಡೆ-ನುಡಿ, ಸಮಾನತೆ, ಕಾಯಕ, ದಾಸೋಹ, ವೈಚಾರಿಕತೆ, ವೈಜ್ಞಾನಿಕ ಚಿಂತನೆ, ಅಂತರಂಗ ಮತ್ತು ಬಹಿರಂಗ ಶುದ್ಧಿ, ಮೌಢ್ಯ ನಿವಾರಣೆ ಮುಂತಾದ ವಿಷಯಗಳನ್ನು ತಲಸ್ಪರ್ಶಿಯಾಗಿ ವಾಸ್ತವದ ನೆಲೆಯಲ್ಲಿ ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿದರು. ಇವರುಗಳು ಪರಂಪರೆ ಮತ್ತು ಆಧುನಿಕ ಚಿಂತನೆಯ ಪ್ರಜ್ಞೆಯನ್ನು ಹೊಂದಿದ್ದವರಾಗಿದ್ದರೆಂಬುದನ್ನು ಅವರ ವಚನಗಳಲ್ಲಿಯೇ ಕಾಣಬಹುದು.

Article Details

Section

Research Articles

Author Biography

ರಾಮರೆಡ್ಡಿ ಕೆ.

ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಕೆ.ಎಲ್.ಇ. ಸಂಸ್ಥೆಯ, ಎಸ್.ವಿ.ಎಸ್., ಬೆಳ್ಳುಬ್ಬಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಸವದತ್ತಿ, ಬೆಳಗಾವಿ ಜಿಲ್ಲೆ.

 

How to Cite

ರಾಮರೆಡ್ಡಿ ಕೆ. (2025). ವಚನ ಸಾಹಿತ್ಯದಲ್ಲಿ ಪರಂಪರೆ ಹಾಗೂ ಆಧುನಿಕ ಚಿಂತನೆಗಳು. ಅಕ್ಷರಸೂರ್ಯ (AKSHARASURYA), 7(03), 165 to 172. https://aksharasurya.com/index.php/latest/article/view/1200

References

ಕಲಬುರ್ಗಿ ಎಂ.ಎಂ., (೨೦೧೬), ಬಸವ ಯುಗದ ವಚನ ಮಹಾಸಂಪುಟ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಪ್ರಸನ್ನಕುಮಾರ್ ಎಂ., (೨೦೨೧), ನಡುಗನ್ನಡ ಸಾಹಿತ್ಯದ ಪ್ರಕಾರಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಮಲ್ಲೆದೇವರು ಎಚ್.ಪಿ. (ಸಂ), (೧೯೭೫), ಉರಿಲಿಂಗಪೆದ್ದಿಗಳ ವಚನಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಶಿವಾಜಿ ಜ್ಯೋತಿ, (೨೦೧೧), ಕಾಯಕ ಜೀವಿಗಳ ಸಾಮಾಜಿಕ ಚಿಂತನೆ, ಬರಹ ಪಬ್ಲಿಷಿಂಗ್ ಹೌಸ್, ಬೆಂಗಳೂರು.

ಹೂಗಾರ ಎಂ.ಬಿ., (೨೦೨೨), ವಚನ ಸಾಹಿತ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

Most read articles by the same author(s)