ಎಲ್‌.ಎಸ್.ಶೇಷಗಿರಿ ರಾವ್‌ ರವರ 'ಕಾದಂಬರಿ ಮತ್ತು ಸಾಮಾನ್ಯ ಮನುಷ್ಯ' ವಿಮರ್ಶಾ ಕೃತಿಯ ಅವಲೋಕನ

Main Article Content

ಅನ್ನಪೂರ್ಣ ಗುಡುದೂರು

Abstract

ಎಲ್.ಎಸ್. ಶೇಷಗಿರಿರಾವ್ ಅವರು ಖ್ಯಾತ ವಿಮರ್ಶಕರೆಂದೇ ಗುರುತಿಸಿಕೊಂಡವರು. ವಿಮರ್ಶಕರಲ್ಲದೆ ಬಹುಮುಖ ಪ್ರತಿಭೆ ಉಳ್ಳವರು ಎಂಬುದು ಇವರ ವಿಭಿನ್ನ ಸಾಹಿತ್ಯ ಕೃತಿಗಳಿಂದ ಗೋಚರವಾಗುತ್ತದೆ. ವಿಮರ್ಶೆಯಲ್ಲಿಯೂ ನಾವು ಇವರನ್ನು ಯಾವುದೇ ಒಂದು ಕಾಲಘಟ್ಟಕ್ಕೆ ಅಥವಾ ಒಂದೇ ಸಾಹಿತ್ಯ ಪ್ರಕಾರದ ವಿಮರ್ಶೆಯೊಳಗೆ ಗುರುತಿಸಲಾಗದು. ಎಲ್ಲ ಕಾಲಘಟ್ಟದ ಸಾಹಿತ್ಯ ಕೃತಿಗಳನ್ನು ವಿಮರ್ಶಿಸಿ ಸಮನ್ವಯ ಸಾಧಿಸಿದ ವಿಮರ್ಶಕರು ಇವರು. ಇಂಗ್ಲಿಷ್ ಸಾಹಿತ್ಯದಲ್ಲಿಯೂ ಇವರ ವಿಮರ್ಶೆ ಹೀಗೆಯೇ ಸಾಗಿದೆ. ಸಾಹಿತ್ಯದ ವಿವಿಧ ಕಾಲಘಟ್ಟಗಳ ಧೈಯ ಧೋರಣೆಗಳನ್ನು ಬಲ್ಲವರಾಗಿದ್ದ ಇವರು ಒಂದು ಭಾಷೆಯ ಸಾಹಿತ್ಯದ ಸಮೀಕ್ಷೆಯನ್ನು, ಚರಿತ್ರೆಯನ್ನು ಬರೆದಿದ್ದಾರೆ. ಗ್ರೀಕ್ ರಂಗಭೂಮಿ ಮತ್ತು ನಾಟಕ, ಇಂಗ್ಲಿಷ್ ಸಾಹಿತ್ಯ ಚರಿತ್ರೆ, ಹೊಸಗನ್ನಡ ಸಾಹಿತ್ಯ ಚರಿತ್ರೆ ಬರೆದಿರುವ ಇವರ ಈ ಕೃತಿಗಳ ವಿಷಯಗಳ ಹಿಂದೆ ಅವರ ಆಸಕ್ತಿ, ಪರಿಶ್ರಮ, ತಮ್ಮ ತಾಯಿ ನಾಡಿನ ಓದುಗರಿಗೆ ಜಗತ್ತಿನ ಸಾಹಿತ್ಯವನ್ನು ಪರಿಚಯಿಸಬೇಕೆಂಬ ಹಂಬಲ ಎಲ್ಲವು ಕಾರಣಗಳಾಗಿವೆ. ಹಾಗಾಗಿ ಈ ಲೇಖನದ ಮೂಲಕ ಇವರ ವಿಮರ್ಶಾ ಕೃತಿಯನ್ನು ಪರಿಚಯಿಸುವ ಉದ್ದೇಶವನ್ನು ಪ್ರಸ್ತುತ ಲೇಖನವು ಹೊಂದಿದೆ.

Article Details

Section

Book Review

Author Biography

ಅನ್ನಪೂರ್ಣ ಗುಡುದೂರು

ಪ್ರಾಂಶುಪಾಲರು ಮತ್ತು ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಂಪ್ಲಿ ತಾಲೂಕು, ಬಳ್ಳಾರಿ ಜಿಲ್ಲೆ.

 

How to Cite

ಅನ್ನಪೂರ್ಣ ಗುಡುದೂರು. (2024). ಎಲ್‌.ಎಸ್.ಶೇಷಗಿರಿ ರಾವ್‌ ರವರ ’ಕಾದಂಬರಿ ಮತ್ತು ಸಾಮಾನ್ಯ ಮನುಷ್ಯ’ ವಿಮರ್ಶಾ ಕೃತಿಯ ಅವಲೋಕನ. ಅಕ್ಷರಸೂರ್ಯ (AKSHARASURYA), 3(06), 86 to 96. https://aksharasurya.com/index.php/latest/article/view/786

References

ಮಾವಿನಕೆರೆ ರಂಗನಾಥನ್ (ಸಂ), (2007). ಎಲ್.ಎಸ್.ಶೇಷಗಿರಿರಾವ್ ಬದುಕು ಬರಹ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

ನಾರಾಯಣ ಪಿ. ವಿ. (2006), ಎಲ್. ಎಸ್. ಶೇಷಗಿರಿರಾವ್, ನವ ಕರ್ನಾಟಕ ಪ್ರಕಾಶನ. ಬೆಂಗಳೂರು.

Most read articles by the same author(s)