ಕನ್ನಡ ಡಿಜಿಟಲ್ ಸಾಹಿತ್ಯ: ಸವಾಲು ಮತ್ತು ಸಾಧ್ಯತೆಗಳು

Main Article Content

ಅನ್ನಪೂರ್ಣ ಗುಡುದೂರು

Abstract

21ನೆಯ ಶತಮಾನದ ಸ್ಮಾರ್ಟ್‌ಯುಗದಲ್ಲಿ ಕನ್ನಡ ಸಾಹಿತ್ಯವು ಕಾಗದದ ಮಾಧ್ಯಮದಿಂದ ಡಿಜಿಟಲ್ ಮಾಧ್ಯಮದತ್ತ ಹೊರಳುತ್ತಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಫೇಸ್‌ಬುಕ್, ಇನ್ಸ್‌ಟಾಗ್ರಾಮ್, ವಾಟ್ಸಪ್, ಟೆಲಿಗ್ರಾಮ್, ಕ್ಲಬ್‌ಹೌಸ್, ಯುವರ್ ಕೋಟ್ ಮತ್ತು ಪ್ರತಿಲಿಪಿಯಂತಹ ವೇದಿಕೆಗಳು ಯುವ ಬರಹಗಾರರಿಗೆ ಸಾಹಿತ್ಯ ಸೃಜನೆಗೆ ಹಾಗೂ ಪ್ರಚಾರಕ್ಕೆ ವಿಪುಲ ಅವಕಾಶಗಳನ್ನು ಒದಗಿಸಿವೆ. ಕೋವಿಡ್-19ರಂತಹ ಸಂಕಷ್ಟದ ಕಾಲದಲ್ಲೂ ಆನ್‌ಲೈನ್ ವೇದಿಕೆಗಳು ಸಾಹಿತ್ಯ ಚರ್ಚೆ ಮತ್ತು ಸಂವಾದಗಳನ್ನು ನಿರಂತರವಾಗಿ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಓಟದ ಬದುಕಿನಲ್ಲಿ ಸ್ಮಾರ್ಟ್‌ಫೋನ್‌ಗಳ ಮೂಲಕ ಸಾಹಿತ್ಯವನ್ನು ತ್ವರಿತವಾಗಿ ತಲುಪಿಸುವ ಈ ಡಿಜಿಟಲ್ ಓದುಗ ವಲಯದ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಗಂಭೀರವಾಗಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಅನ್ನಪೂರ್ಣ ಗುಡುದೂರು

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಂಪ್ಲಿ.

How to Cite

ಅನ್ನಪೂರ್ಣ ಗುಡುದೂರು. (2023). ಕನ್ನಡ ಡಿಜಿಟಲ್ ಸಾಹಿತ್ಯ: ಸವಾಲು ಮತ್ತು ಸಾಧ್ಯತೆಗಳು. ಅಕ್ಷರಸೂರ್ಯ (AKSHARASURYA), 2(08), 155 to 159. https://aksharasurya.com/index.php/latest/article/view/212

References

Most read articles by the same author(s)