ಶ್ರೀ ಮಡಿಯಾಲ ನಾರಾಯಣ ಭಟ್ಟರ ‘ಅಧ್ಯಾಪಕರಿಗೆ ದಾರಿದೀಪ’ ಕೃತಿಯ ವಿಶ್ಲೇಷಣೆ
Main Article Content
Abstract
ಈ ಸಂಶೋಧನಾ ಲೇಖನವು ದಿ. ಮಡಿಯಾಲ ನಾರಾಯಣಭಟ್ಟರ ಶಿಕ್ಷಣ ಚಿಂತನೆಗಳನ್ನು ಆಧಾರವಾಗಿ ತೆಗೆದುಕೊಂಡು, ಅಧ್ಯಾಪಕರ ಪಾತ್ರ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಮಹತ್ವವನ್ನು ವಿಶ್ಲೇಷಿಸುತ್ತದೆ. ಅಧ್ಯಾಪಕರಿಗೊಂದು ದಾರಿದೀಪ ಎಂಬ ಕೃತಿಯಲ್ಲಿ ಭಟ್ಟರು ಪ್ರತಿಪಾದಿಸಿರುವ ಶೀಲ, ಸಂಸ್ಕೃತಿ ಮತ್ತು ನೈತಿಕತೆಯ ಮೇಲಾಧಾರಿತ ಶಿಕ್ಷಣ ತತ್ವವು ಇಂದಿನ ಶಿಕ್ಷಣ ವ್ಯವಸ್ಥೆಯ ಸಂಕಷ್ಟಗಳಿಗೆ ಸೂಕ್ತ ಪರಿಹಾರವನ್ನು ನೀಡುತ್ತದೆ. ಶಿಕ್ಷಣ ಸಂಸ್ಥೆಗಳ ಸಂಖ್ಯಾತ್ಮಕ ವೃದ್ಧಿಯ ನಡುವೆಯೂ ವಿದ್ಯಾರ್ಥಿಗಳ ಬೌದ್ಧಿಕ, ನೈತಿಕ ಮತ್ತು ಸಾಂಸ್ಕೃತಿಕ ಗುಣಮಟ್ಟ ಕುಸಿಯುತ್ತಿರುವುದನ್ನು ಲೇಖಕರು ಗಂಭೀರವಾಗಿ ಗಮನಿಸುತ್ತಾರೆ. ಈ ಸ್ಥಿತಿಗೆ ಪ್ರಮುಖ ಕಾರಣವೆಂದರೆ ಯೋಗ್ಯ, ಧ್ಯೇಯನಿಷ್ಠ ಹಾಗೂ ಶೀಲಸಂಪನ್ನ ಅಧ್ಯಾಪಕರ ಕೊರತೆ. ಈ ಲೇಖನದಲ್ಲಿ ಅಧ್ಯಾಪಕನನ್ನು ಕೇವಲ ಪಾಠ ಬೋಧಕನಾಗಿ ಅಲ್ಲದೆ, ರಾಷ್ಟ್ರಶಿಲ್ಪಿ, ಜನಮನದ ರೂಪಶಿಲ್ಪಿ ಮತ್ತು ನೈತಿಕ ಜಾಗೃತಿಯ ಸಾರಥಿಯಾಗಿ ಪರಿಗಣಿಸಲಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಅಧ್ಯಾಪಕರ ಪ್ರಭಾವವು ಪೋಷಕರು ಮತ್ತು ಸಮಾಜಕ್ಕಿಂತಲೂ ಹೆಚ್ಚಾಗಿದೆ ಎಂಬ ತತ್ವವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಪ್ರೀತಿ, ಸಹಾನುಭೂತಿ, ಕ್ಷಮೆ, ಶಿಸ್ತು ಮತ್ತು ಆದರ್ಶಯುತ ಜೀವನವನ್ನು ಅನುಸರಿಸುವ ಅಧ್ಯಾಪಕರೇ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ದೇಶಪ್ರೇಮ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಲು ಸಮರ್ಥರಾಗುತ್ತಾರೆ ಎಂಬುದೇ ಈ ಕೃತಿಯ ಕೇಂದ್ರ ಆಶಯ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶ್ರೀ ಮಡಿಯಾಲ ನಾರಾಯಣ ಭಟ್, (2011), ಅಧ್ಯಾಪಕರಿಗೊಂದು ದಾರಿದೀಪ, ಅಳಿಕೆ: ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರಕಾಶನ.
ಶ್ರೀ ಮಡಿಯಾಲ ನಾರಾಯಣ ಭಟ್, (1966), ಭಾರತ ದರ್ಪಣ, ಅಳಿಕೆ: ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರಕಾಶನ.
ಪಟ್ಟಾಭಿರಾಮ್ ಬಿ.ವಿ., (2012), ಆದರ್ಶ ಶಿಕ್ಷಕರಾಗುವುದು ಹೇಗೆ?, ಬೆಂಗಳೂರು: ವಿಕಾಸ್ ಪ್ರಕಾಶನ.
ವಾಮದೇವಪ್ಪ ಎಚ್.ವಿ., (2025), ಶೈಕ್ಷಣಿಕ ಮನೋವಿಜ್ಞಾನ, ಬೆಂಗಳೂರು: ಸ್ವಪ್ನ ಪ್ರಕಾಶನ.
ವಿರೂಪಾಕ್ಷ ದೇವರಮನೆ, (2019), ಥ್ಯಾಂಕ್ಯೂ ಟೀಚರ್, ಬೆಂಗಳೂರು: ಸ್ವಪ್ನ ಬುಕ್ ಹೌಸ್.