ಸಮಕಾಲೀನ ಕವಯಿತ್ರಿಯರಾದ ಲಲಿತಾ ಸಿದ್ಧಬಸವಯ್ಯ ಮತ್ತು ಪ್ರತಿಭಾ ನಂದಕುಮಾರ್ ಅವರ ಕಾವ್ಯ ಧ್ವನಿಯ ವಿಭಿನ್ನ ನೆಲೆ

Main Article Content

ದಿವ್ಯಶ್ರೀ, ಬಿ.ಎನ್.
ಅಣ್ಣಮ್ಮ

Abstract

1970-80ರ ದಶಕದ ಕನ್ನಡ ಕಾವ್ಯದಲ್ಲಿ ಮಹಿಳಾವಾದಿ ನೆಲೆಯ ವಿಭಿನ್ನ ಆಯಾಮಗಳನ್ನು ಪ್ರತಿಭಾ ನಂದಕುಮಾರ್ ಹಾಗೂ ಲಲಿತಾ ಸಿದ್ಧಬಸವಯ್ಯ ಅವರ ಕವಿತೆಗಳ ಮೂಲಕ ಇಲ್ಲಿ ವಿಶ್ಲೇಷಿಸಲಾಗಿದೆ. ಪ್ರತಿಭಾ ಅವರ ‘ನಾವು ಹುಡುಗಿಯರೇ ಹೀಗೆ’ ಕವಿತೆಯು ನಗರ ಕೇಂದ್ರಿತ, ತೀವ್ರ ಸ್ತ್ರೀವಾದಿ ಧೋರಣೆಯನ್ನು ಹೊಂದಿದ್ದು, ಹೆಣ್ಣಿನ ಸಂಕಟಗಳಿಗೆ ಪುರುಷಪ್ರಧಾನ ವ್ಯವಸ್ಥೆಯನ್ನೇ ಹೊಣೆಗಾರನಾಗಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಲಲಿತಾ ಅವರ ‘ನಾವು ಹೆಂಗಸರೇ ಹೀಗೆ’ ಕವಿತೆಯು ದೇಸಿ ಸೊಗಡಿನೊಂದಿಗೆ ಜೈವಿಕ ವಾಸ್ತವಗಳನ್ನು ತೆರೆದಿಡುತ್ತದೆ; ಇಲ್ಲಿ ಪುರುಷ ದ್ವೇಷದ ಬದಲು ಹೆಣ್ಣು ತನ್ನನ್ನು ತಾನು ವಿಮರ್ಶಿಸಿಕೊಳ್ಳುತ್ತಾ, ಕುಟುಂಬದ ಚೌಕಟ್ಟಿನಲ್ಲಿಯೇ ಸಮಾನತೆಯನ್ನು ಕಂಡುಕೊಳ್ಳುವ ತಾತ್ವಿಕತೆಯಿದೆ. ಒಂದೇ ಆಶಯವನ್ನು ಭಿನ್ನ ದೃಷ್ಟಿಕೋನ ಹಾಗೂ ಭಾಷಿಕ ಶೈಲಿಯಲ್ಲಿ ಕಟ್ಟಿಕೊಟ್ಟಿರುವ ಈ ಕವಯಿತ್ರಿಯರ ಕಾವ್ಯಶಕ್ತಿ ಮತ್ತು ಅಭಿವ್ಯಕ್ತಿ ಕ್ರಮಗಳ ತುಲನಾತ್ಮಕ ನೋಟವನ್ನು ಪ್ರಸ್ತುತಪಡಿಸಲಾಗಿದೆ.

Article Details

Section

Research Articles

Author Biographies

ದಿವ್ಯಶ್ರೀ, ಬಿ.ಎನ್.

ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾವಿ, ತುಮಕೂರು.

ಅಣ್ಣಮ್ಮ

ಪ್ರಾಧ್ಯಾಪಕರು, ಡಾ.ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

 

How to Cite

ದಿವ್ಯಶ್ರೀ, ಬಿ.ಎನ್., & ಅಣ್ಣಮ್ಮ. (2026). ಸಮಕಾಲೀನ ಕವಯಿತ್ರಿಯರಾದ ಲಲಿತಾ ಸಿದ್ಧಬಸವಯ್ಯ ಮತ್ತು ಪ್ರತಿಭಾ ನಂದಕುಮಾರ್ ಅವರ ಕಾವ್ಯ ಧ್ವನಿಯ ವಿಭಿನ್ನ ನೆಲೆ. ಅಕ್ಷರಸೂರ್ಯ (AKSHARASURYA), 14(02), 32 to 37. https://aksharasurya.com/index.php/latest/article/view/661

References

ಪ್ರತಿಭಾ ನಂದಕುಮಾರ್, (2020), ಪ್ರತಿಭಾ ಕಾವ್ಯ: ಇಲ್ಲಿಯವರೆಗಿನ ಕವಿತೆಗಳು, ಬೆಂಗಳೂರು: ಅಂಕಿತ ಪುಸ್ತಕ.

ಲಲಿತಾ ಸಿದ್ಧಬಸವಯ್ಯ, (2020), ಕರೆ ಪಾರಕ್ಕ ಮತ್ತು ಇತರೆ ಕವಿತೆಗಳು, ತುಮಕೂರು: ಚಿನ್ಮಯಿ ಪ್ರಕಾಶನ.

Most read articles by the same author(s)