ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಚಿಂತನೆ

Main Article Content

ಪಿ. ನಾಗರಾಜ

Abstract

ಆಧುನಿಕೋತ್ತರ ಕಾಲಘಟ್ಟದಲ್ಲಿ ಸ್ತ್ರೀವಾದಿ ಚಿಂತನೆಯು ಕೇವಲ ಲಿಂಗ ತಾರತಮ್ಯವನ್ನು ಪ್ರಶ್ನಿಸುವುದಕ್ಕೆ ಸೀಮಿತವಾಗದೆ, ಜನಾಂಗ, ವರ್ಗ ಮತ್ತು ಸಾಮಾಜಿಕ ನೆಲೆಗಳಲ್ಲಿ ಮಹಿಳೆಯ ಅಸ್ಮಿತೆಯನ್ನು ಮರುಶೋಧಿಸುತ್ತಿದೆ. 1960ರ ನಂತರದ ಸಾಹಿತ್ಯಿಕ ಚಳವಳಿಗಳ ಹಿನ್ನೆಲೆಯಲ್ಲಿ, ಕನ್ನಡ ಸಾಹಿತ್ಯವು ಪಾಶ್ಚಾತ್ಯ ಸಿದ್ಧಾಂತಗಳ ಪ್ರೇರಣೆಯೊಂದಿಗೆ ದೇಶೀಯ ಸಂವೇದನೆಗಳನ್ನು ಮೈಗೂಡಿಸಿಕೊಂಡು ಬೆಳೆದ ಬಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮುರಿದು, ಮಹಿಳೆಯರ ಅನುಭವಗಳು, ಸಂಕಟಗಳು ಮತ್ತು ಬೌದ್ಧಿಕ ಸಾಮರ್ಥ್ಯಗಳನ್ನು ಅನಾವರಣಗೊಳಿಸುವಲ್ಲಿ ಲೇಖಕಿಯರು ವಹಿಸಿದ ಪಾತ್ರ ಪ್ರಮುಖವಾದುದು. ನಂಜನಗೂಡು ತಿರುಮಲಾಂಬರಿಂದ ಹಿಡಿದು ಸಮಕಾಲೀನ ಬರಹಗಾರ್ತಿಯರವರೆಗೆ ಸ್ತ್ರೀವಾದಿ ಧೋರಣೆಗಳು ಬದಲಾದ ಕ್ರಮ, ಅನುವಾದ ಸಾಹಿತ್ಯದ ಪ್ರಭಾವ ಹಾಗೂ ಬಹುಮುಖಿ ನೆಲೆಗಳ ಶೋಧನೆಯು ಸ್ತ್ರೀಸಂವೇದನೆಯನ್ನು ಗಟ್ಟಿಗೊಳಿಸಿದೆ. ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧದ ಪ್ರತಿರೋಧ ಮತ್ತು ಸಮಾನತೆಯ ಆಶಯಗಳು ಆಧುನಿಕೋತ್ತರ ಸ್ತ್ರೀವಾದದ ಜೀವಾಳವಾಗಿವೆ.

Article Details

Section

Research Articles

Author Biography

ಪಿ. ನಾಗರಾಜ

ಸಹಾಯಕ ಪ್ರಾಧ್ಯಾಪಕರು, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

How to Cite

ಪಿ. ನಾಗರಾಜ. (2026). ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಚಿಂತನೆ. ಅಕ್ಷರಸೂರ್ಯ (AKSHARASURYA), 14(01), 120 to 124. https://aksharasurya.com/index.php/latest/article/view/653

References

ಶ್ರೀಮತಿ ಎಚ್. ಎಸ್. (ಅನು), (2001), ಆಧುನಿಕ ಭಾರತದಲ್ಲಿ ಮಹಿಳೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ತಾರಿಣಿ ಶುಭದಾಯಿನಿ (ಸಂ), (2013), ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ವಿಚಾರ ಸಾಹಿತ್ಯ ಸಂಪುಟ – 7), ಬಿಜಾಪುರ: ಪ್ರಸಾರಾಂಗ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ.

ಶ್ರೀಮತಿ ಎಚ್. ಎಸ್., (2006), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಗಾಯತ್ರಿ ಎನ್., (1996), ಮಹಿಳೆ – ಬಿಡುಗಡೆಯ ಹಾದಿಯಲ್ಲಿ, ಬೆಂಗಳೂರು: ನವಕರ್ನಾಟಕ ಪ್ರಕಾಶನ.

ಸುಮಿತ್ರಾ ಬಾಯಿ ಬಿ. ಎನ್. ಮತ್ತು ಗಾಯತ್ರಿ ಎನ್. (ಸಂ), (1992), ವಿಮರ್ಶೆಯ ಹಾದಿ, ಬೆಂಗಳೂರು: ಜಾಗೃತಿ ಪ್ರಕಾಶನ.

ಮಂಗಳಾ ಪ್ರಿಯದರ್ಶಿನಿ, (2007), ಸ್ತ್ರೀವಾದ ಮತ್ತು ಮಹಿಳಾ ಅಧ್ಯಯನ – ಒಂದು ಪ್ರವೇಶಿಕೆ, ಬೆಂಗಳೂರು: ಕಮಲಾಂಗಿನಿ ಪ್ರಕಾಶನ.

Most read articles by the same author(s)