ನಿಜಶರಣ ಅಂಬಿಗರ ಚೌಡಯ್ಯ

Main Article Content

ಪಿ. ನಾಗರಾಜ

Abstract

ಹನ್ನೆರಡನೆಯ ಶತಮಾನದ ಶರಣರಲ್ಲಿ ಅಂಬಿಗರ ಚೌಡಯ್ಯನವರು ತಮ್ಮ ನೇರ ಮತ್ತು ನಿಷ್ಠುರ ವಾದಗಳಿಗೆ ಹೆಸರಾಗಿದ್ದಾರೆ. ವೃತ್ತಿಯಲ್ಲಿ ಅಂಬಿಗನಾಗಿದ್ದರೂ, ಪ್ರವೃತ್ತಿಯಲ್ಲಿ ಶ್ರೇಷ್ಠ ಅನುಭಾವಿಯಾಗಿದ್ದ ಇವರು, ಸಮಾಜದ ಡಾಂಭಿಕತೆ, ಜಾತಿ ಪದ್ಧತಿ ಮತ್ತು ಮೌಢ್ಯಗಳನ್ನು ಕಟುವಾಗಿ ಟೀಕಿಸಿದ್ದಾರೆ. ಅರಿಯದ ಗುರು ಮತ್ತು ಶಿಷ್ಯರನ್ನು ಕುರುಡರಿಗೆ ಹೋಲಿಸಿ, ಅಂತರಂಗದ ಶುದ್ಧಿಗೆ ಮತ್ತು ನೈಜ ಭಕ್ತಿಗೆ ಒತ್ತು ನೀಡಿದ್ದಾರೆ. ಅವರ ವಚನಗಳಲ್ಲಿನ ಭಾಷೆ ಹರಿತವಾಗಿದ್ದು, ಒರಟು ಎನಿಸಿದರೂ ಸತ್ಯದ ಪ್ರತಿಪಾದನೆಯಾಗಿದೆ. ಕಾಯಕವೇ ಕೈಲಾಸ ಎಂಬ ತತ್ವವನ್ನು ಪಾಲಿಸುತ್ತಲೇ, ಭವಸಾಗರವನ್ನು ದಾಟಿಸುವ ಅಂಬಿಗನಾಗಿ ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದ್ದಾರೆ. ಇಂದಿನ ಕಲುಷಿತ ಸಾಮಾಜಿಕ ಸನ್ನಿವೇಶಕ್ಕೆ ಚೌಡಯ್ಯನವರ ವೈಚಾರಿಕ ನಿಲುವುಗಳು ಮತ್ತು ವಚನಗಳು ಹೇಗೆ ದಾರಿದೀಪವಾಗಿವೆ ಎಂಬುದನ್ನು ಲೇಖನದಲ್ಲಿ ಚರ್ಚಿಸಲಾಗಿದೆ.

Article Details

Section

Research Articles

Author Biography

ಪಿ. ನಾಗರಾಜ

ಸಹಾಯಕ ಪ್ರಾಧ್ಯಾಪಕರು, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

How to Cite

ಪಿ. ನಾಗರಾಜ. (2023). ನಿಜಶರಣ ಅಂಬಿಗರ ಚೌಡಯ್ಯ. ಅಕ್ಷರಸೂರ್ಯ (AKSHARASURYA), 2(01), 26 to 29. https://aksharasurya.com/index.php/latest/article/view/35

References

ಕನ್ನಡ ವಿಶ್ವಕೋಶ -ಸಂಪುಟ 1- ಅಂಬಿಗರ ಚೌಡಯ್ಯ

ಬಸವಪಥ ಕನ್ನಡ ಮಾಸಪತ್ರಿಕೆ- ಜೂನ್- 2022, ಸಂಚಿಕೆ-499

ಬಂಡಾಯ ವಚನಕಾರ ಅಂಬಿಗರ ಚೌಡಯ್ಯ- ನಾಗಪ್ಪ ಟಿ ಗೋಣಿ.- ಅಭಿಷೇಕ್ ಪ್ರಕಾಶನ 2013

Most read articles by the same author(s)