1990 ರ ದಶಕದ ಮಹಿಳಾ ಸಾಹಿತ್ಯ: ಸ್ತ್ರೀಸಂವೇದನೆ ಒಂದು ವಿವೇಚನೆ

Main Article Content

ನೇತ್ರಾವತಿ ಗಬ್ಬೂರ

Abstract

1990ರ ದಶಕವು ಕನ್ನಡ ಮಹಿಳಾ ಸಾಹಿತ್ಯದ ಇತಿಹಾಸದಲ್ಲಿ ಮಹತ್ವದ ತಿರುವಿನ ಘಟ್ಟವಾಗಿದೆ. 1991ರ ಆರ್ಥಿಕ ಉದಾರೀಕರಣ, ಜಾಗತೀಕರಣ, ನಗರೀಕರಣ ಮತ್ತು ಮಹಿಳಾ ಚಳುವಳಿಗಳ ಬಲವರ್ಧನೆ ಮಹಿಳೆಯರ ಜೀವನಾನುಭವಗಳಲ್ಲಿ ಆಳವಾದ ಬದಲಾವಣೆಗಳನ್ನು ಉಂಟುಮಾಡಿದವು. ಈ ಬದಲಾವಣೆಗಳು ಸಾಹಿತ್ಯದಲ್ಲೂ ಪ್ರತಿಫಲಿಸಿ, ಮಹಿಳೆಯ ಅಸ್ತಿತ್ವ, ಆತ್ಮಪರಿಚಯ, ಲಿಂಗಸಮಾನತೆ, ದೇಹರಾಜಕೀಯ, ದಲಿತ ಮಹಿಳಾ ಅನುಭವಗಳು ಮತ್ತು ಧಾರ್ಮಿಕ ಸಾಂಸ್ಕೃತಿಕ ನಿರ್ಬಂಧಗಳ ವಿರುದ್ಧದ ಪ್ರಶ್ನೆಗಳು ಪ್ರಮುಖ ವಿಷಯಗಳಾಗಿ ಹೊರಹೊಮ್ಮಿದವು.
ಈ ಸಂಶೋಧನಾ ಲೇಖನವು ಗುಣಾತ್ಮಕ ವಿಧಾನವನ್ನು ಆಧರಿಸಿಕೊಂಡಿದ್ದು, 1990ರ ದಶಕದ ಪ್ರಮುಖ ಮಹಿಳಾ ಲೇಖಕಿಯರ ಕೃತಿಗಳ ವಿಶ್ಲೇಷಣೆಯ ಮೂಲಕ ಮಹಿಳಾ ಚೇತನದ ಬೆಳವಣಿಗೆಯನ್ನು ಅಧ್ಯಯನ ಮಾಡುತ್ತದೆ. ಈ ಅಧ್ಯಯನದಿಂದ ತಿಳಿಯುವುದೇನೆಂದರೆ, 1990ರ ದಶಕದ ಮಹಿಳಾ ಸಾಹಿತ್ಯವು ಗೃಹಪರಿಧಿಯನ್ನು ಮೀರಿ ಸಾಮಾಜಿಕ ವಿಮರ್ಶಾತ್ಮಕ ಧ್ವನಿಯಾಗಿ ಬೆಳೆಯಿತು ಮತ್ತು ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದ ಚಿಂತನೆಗೆ ದೃಢನೆಲೆಗಟ್ಟನ್ನು ಒದಗಿಸಿತು.

Article Details

Section

Research Articles

Author Biography

ನೇತ್ರಾವತಿ ಗಬ್ಬೂರ

ಸಹಾಯಕ ಕನ್ನಡ ಪ್ರಾಧ್ಯಾಪಕರು, ಕೆ.ಎಲ್.ಇ ಸಂಸ್ಥೆಯ ಜೆ.ಜಿ ವಾಣಿಜ್ಯ ಮಹಾವಿದ್ಯಾಲಯ, ಹುಬ್ಬಳ್ಳಿ.

 

How to Cite

ನೇತ್ರಾವತಿ ಗಬ್ಬೂರ. (2026). 1990 ರ ದಶಕದ ಮಹಿಳಾ ಸಾಹಿತ್ಯ: ಸ್ತ್ರೀಸಂವೇದನೆ ಒಂದು ವಿವೇಚನೆ. ಅಕ್ಷರಸೂರ್ಯ (AKSHARASURYA), 14(01), 115 to 119. https://aksharasurya.com/index.php/latest/article/view/652

References

ವೈದೇಹಿ, (2000), ಅಮ್ಮಚ್ಚಿಯೆಂಬ ನೆನಪು (ಕಥಾಸಂಕಲನ), ಸಾಗರ: ಅಕ್ಷರ ಪ್ರಕಾಶನ.

ಸಾರಾ ಅಬೂಬಕರ್, (1984), ಚಂದ್ರಗಿರಿಯ ತೀರದಲ್ಲಿ (ಕಾದಂಬರಿ), ಬೆಂಗಳೂರು: ಲಂಕೇಶ್ ಪ್ರಕಾಶನ.

ಬಿ. ಟಿ. ಲಲಿತಾ ನಾಯಕ್, (1986), ಗತಿ (ಕಾದಂಬರಿ), ಬೆಂಗಳೂರು: ಲಂಕೇಶ್ ಪ್ರಕಾಶನ.

ತೇಜಸ್ವಿನಿ ನಿರಂಜನ ಮತ್ತು ಸೀಮಂತಿನಿ ನಿರಂಜನ (ಸಂ), (1994), ಸ್ತ್ರೀವಾದ (ವಿಮರ್ಶಾ ಗ್ರಂಥ), ಬೆಂಗಳೂರು: ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್.

ಅರ್ಜುನ ಗೋಳಸಂಗಿ (ಸಂ), (2003), ದಲಿತ ಮಹಿಳೆ: ಸಂವೇದನೆ (ಸಂಶೋಧನಾ ಲೇಖನಗಳ ಸಂಕಲನ), ವಿಜಯಪುರ: ಪ್ರಸಾರಾಂಗ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ.

Most read articles by the same author(s)