ಜಾನಪದ ಸಾಹಿತ್ಯದ ಶ್ರೀಮಂತಿಕೆ

Main Article Content

ನೇತ್ರಾವತಿ ಗಬ್ಬೂರ

Abstract

ಈ ಲೇಖನವು ಕನ್ನಡದ ಜಾನಪದ ಸಾಹಿತ್ಯದ ಶ್ರೀಮಂತಿಕೆಯನ್ನು ವಿಶ್ಲೇಷಿಸುತ್ತದೆ. ಮೌಖಿಕ ಪರಂಪರೆಯಿಂದ ಹರಿದು ಬಂದ ಜನಪದ ಸಾಹಿತ್ಯವು ಗ್ರಾಮೀಣ ಜನರ ಭಾವನೆಗಳು, ಸಂಪ್ರದಾಯಗಳು, ನಂಬಿಕೆಗಳು ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಶಕ್ತಿಯುತ ಮಾಧ್ಯಮವಾಗಿದೆ. ತ್ರಿಪದಿಗಳು, ಗಾದೆಗಳು, ಗರತಿಯ ಹಾಡುಗಳು, ಭಜನೆಗಳು, ಕುಣಿತಗಳು ಮುಂತಾದ ಪ್ರಕಾರಗಳಲ್ಲಿ ಜನಪದ ಸಾಹಿತ್ಯ ವ್ಯಕ್ತವಾಗಿದೆ. ಇವುಗಳಲ್ಲಿ ತಾಯಿ-ತವರು, ಭೂಮಿತಾಯಿ, ದೇವತೆಗಳು, ಪ್ರೀತಿ, ಭಕ್ತಿ, ಸಹೋದರತೆ, ಸಹಬಾಳ್ವೆ ಮತ್ತು ದುಡಿಮೆಯ ಮೌಲ್ಯಗಳು ವ್ಯಕ್ತವಾಗಿವೆ. ಜನಪದ ಸಾಹಿತ್ಯವು ಕೇವಲ ಮನರಂಜನೆ ಮಾತ್ರವಲ್ಲ, ಜೀವನದ ದರ್ಶನ, ನೈತಿಕ ಬೋಧನೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಯ ಪ್ರಮುಖ ಸಾಧನವಾಗಿದೆ. ಆಧುನಿಕ ಜಾಗತೀಕರಣದ ಯುಗದಲ್ಲೂ ಜನಪದ ಸಾಹಿತ್ಯದ ಮೌಲ್ಯಗಳು ಸಮಾಜಕ್ಕೆ ಪ್ರೇರಣೆಯಾಗಿ, ಹೊಸ ಪೀಳಿಗೆಗೆ ಮಾರ್ಗದರ್ಶಕವಾಗಿವೆ. ಹೀಗಾಗಿ, ಜಾನಪದ ಸಾಹಿತ್ಯವು ಕನ್ನಡ ಸಂಸ್ಕೃತಿಯ ತಾಯಿ ಬೇರಾಗಿದ್ದು, ಹಳೆಬೇರು-ಹೊಸ ಚಿಗುರುಗಳನ್ನು ಸೇರ್ಪಡೆಗೊಳಿಸುವ ಶ್ರೀಮಂತ ಪರಂಪರೆಯ ಪ್ರತೀಕವಾಗಿದೆ.

Article Details

Section

Research Articles

Author Biography

ನೇತ್ರಾವತಿ ಗಬ್ಬೂರ

ಸಹಾಯಕ ಕನ್ನಡ ಪ್ರಾಧ್ಯಾಪಕರು, ಕೆ.ಎಲ್.ಇ ಸಂಸ್ಥೆಯ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯ, ಹುಬ್ಬಳ್ಳಿ.

How to Cite

ನೇತ್ರಾವತಿ ಗಬ್ಬೂರ. (2025). ಜಾನಪದ ಸಾಹಿತ್ಯದ ಶ್ರೀಮಂತಿಕೆ. ಅಕ್ಷರಸೂರ್ಯ (AKSHARASURYA), 8(02), 203 to 210. https://aksharasurya.com/index.php/latest/article/view/1414

References

ಹಲಸಂಗಿ ಗೆಳೆಯರು, (2017), ಗರತಿಯ ಹಾಡುಗಳು, ಕಾವ್ಯಶ್ರೀ ಪ್ರಕಾಶನ, ಬೆಂಗಳೂರು.

ಸೀತಾರಾಮಯ್ಯ ವಿ., (1978), ಜಾನಪದ ಸಾಹಿತ್ಯ, ಸಪ್ನ ಬುಕ್ ಹೌಸ್, ಬೆಂಗಳೂರು.

ನಾಯಕ ಹಾ.ಮಾ., (1967), ಹೊನ್ನ ಬಿತ್ತೇವು ಹೋಲಕೆಲ್ಲ, ಕರ್ನಾಟಕ ಜನಪದ ಅಕಾಡೆಮಿ, ಬೆಂಗಳೂರು.

ಪರಮಶಿವಯ್ಯ ಜಿ.ಶಂ., (2012), ಜನಪದ ಕೆಲವು ಮುಖಗಳು, ಸಾಗರ ಪ್ರಕಾಶನ, ಬೆಂಗಳೂರು.

Most read articles by the same author(s)