ಆಧುನಿಕೋತ್ತರ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಮಸ್ಯೆ ಮತ್ತು ಸವಾಲುಗಳು
Main Article Content
Abstract
ನಮ್ಮ ದೇಶದಲ್ಲಿ ಕೌಟುಂಬಿಕ ಪದ್ಧತಿ, ಸಂಸ್ಕೃತಿ, ಸಂಸ್ಕಾರಗಳು, ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಾಬ್ದಾರಿ ಅನಾದಿ ಕಾಲದಿಂದಲೂ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಗೆ ಹಲವಾರು ನೀತಿ ನಿಯಮಗಳು, ಕಟ್ಟುಪಾಡುಗಳನ್ನು ಹಾಕಲಾಗುತ್ತದೆ. ಕನ್ನಡ ಸಾಹಿತ್ಯದ ಆಧುನಿಕೋತ್ತರ ಕಾಲಘಟ್ಟದಲ್ಲಿ ಸ್ತ್ರೀವಾದಿ ಸಾಹಿತ್ಯವು ಚಿಂತನಾ ಮತ್ತು ಚಳವಳಿಯಾಗಿ ರೂಪುಗೊಂಡಿದೆ. ಸಾಮಾಜಿಕ–ಸಾಂಸ್ಕೃತಿಕ ವ್ಯವಸ್ಥೆಯನ್ನು ಪ್ರಶ್ನಿಸುವ ಉದ್ದೇಶದಿಂದ ಸ್ತ್ರೀವಾದಿ ಬರವಣಿಗೆ ಉದ್ಭವಿಸಿದೆ. ಈ ಸಾಹಿತ್ಯವು ಮಹಿಳೆಯ ಅನುಭವ, ಅಸ್ತಿತ್ವ, ಸ್ವಾತಂತ್ರ್ಯ, ಲೈಂಗಿಕತೆ, ಶೋಷಣೆ ಹಾಗೂ ಗುರುತುಗಳ ಕುರಿತು ನೇರ ಮತ್ತು ಪ್ರಶ್ನಾತ್ಮಕ ಭಾಷೆಯಲ್ಲಿ ಚರ್ಚಿಸುತ್ತದೆ. ಆಧುನಿಕ ಮಹಿಳಾ ಸಾಹಿತ್ಯವನ್ನು ಸಂಪೂರ್ಣ ಮಹಿಳಾ ವಿರಚಿತ ಸಾಹಿತ್ಯದ ಹಿನ್ನೆಲೆಯನ್ನು ವಿಶಿಷ್ಟವಾಗಿ ಗುರುತಿಸಬಹುದು. ಸ್ವಾತಂತ್ರ್ಯಪೂರ್ವದ ಮಹಿಳಾ ಸಂವೇದನೆಗಳಲ್ಲಿ ತಮ್ಮ ವ್ಯಕ್ತಿತ್ವ ಮತ್ತು ಸ್ತ್ರೀ ಅನುಭವಿಸುವ ಸಂಕಟಗಳ ಬಗ್ಗೆ ವಿಷಾದವಿದ್ದರೂ, ಪಿತೃಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸದೇ ಕೌಟುಂಬಿಕ ನೆಲೆಯಲ್ಲಿ ಅದನ್ನು ಪೋಷಿಸುವ ಜವಾಬ್ದಾರಿಯನ್ನು ಹೆಣ್ಣೇ ಹೊರಬೇಕೆನ್ನುವ ಅಧೀನ ಭಾವ ಗೋಚರಿಸುತ್ತದೆ. ಅಲ್ಲದೇ ಕೊಡಗಿನ ಗೌರಮ್ಮ, ತಿರುಮಲಾಂಬ, ಸರಸ್ವತಿಬಾಯಿ ರಾಜವಾಡೆ, ತಿರುಮಲೆ ರಾಜಮ್ಮ ಮುಂತಾದವರ ಕೃತಿಗಳಲ್ಲಿ ದಾರ್ಶನಿಕತೆಯನ್ನು ಕಾಣುತ್ತೇವೆ. ಮಹಿಳಾ ಶೋಷಣೆಗಳು, ದೌರ್ಜನ್ಯಗಳು ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ; ಕುಟುಂಬದಿಂದ ಹಿಡಿದು, ಹೊಲ-ಗದ್ದೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳಲ್ಲಿ ಕಂಡು ಬರುತ್ತವೆ. ಕುಟುಂಬದಲ್ಲಿ ಗಂಡ, ಮಾವ, ಮೈದುನ, ಅತ್ತೆ ಮತ್ತು ನಾದಿನಿಯರಿಂದ ಸೊಸೆಯ ಮೇಲೆ ದೌರ್ಜನ್ಯ, ಜಮೀನ್ದಾರಿ ಗಂಡಸರಿಂದ ಕೆಲಸದ ಮಹಿಳಾ ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಂತೆಗಳಲ್ಲಿ ಅಪರಿಚಿತರಿಂದ ಲೈಂಗಿಕ ಕಿರುಕುಳ, ಕಚೇರಿಗಳಲ್ಲಿ ಮ್ಯಾನೇಜರ್ ಮತ್ತು ಸಹ ಕೆಲಸಗಾರರಿಂದ ಲೈಂಗಿಕ ಶೋಷಣೆಗಳು ನಡೆಯುತ್ತವೆ. ಇವುಗಳ ವಿರುದ್ಧ ನಿಲ್ಲುವ ಸಾಮರ್ಥ್ಯದ ಅನಿವಾರ್ಯತೆ ಇದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಗಾಯತ್ರಿ ಎನ್., (1996), ಮಹಿಳೆ ಬಿಡುಗಡೆಯ ಹಾದಿಯಲ್ಲಿ, ಬೆಂಗಳೂರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ. ಲಿಮಿಟೆಡ್.
ಪ್ರಭಾ ಎನ್., (2003), ಕೌಟುಂಬಿಕ ಹಿಂಸಾಚಾರ ಮತ್ತು ಕಾನೂನುಗಳು (ಐಕ್ಯರಂಗ, ಸಂಪುಟ 25, ಸಂಚಿಕೆ 11), ಐಕ್ಯರಂಗ ಪತ್ರಿಕೆ.
ಶೃತಿ ಜಿ. ಎಂ., (2006), ಮಹಿಳಾ ಶೋಷಣೆ (ಕೃತಿ: ಮಹಿಳಾ ಸಬಲೀಕರಣದ ವಿಭಿನ್ನ ನೆಲೆಗಳು, ಸಂ: ಡಾ. ಶಿವಚಿತ್ತಪ್ಪ ಕೆ.), ಮೈಸೂರು: ಲಕ್ಷ್ಮೀ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್.