ಜಾನಪದ ಗೀತೆಗಳ ವೈವಿಧ್ಯತೆ
Main Article Content
Abstract
ಈ ಲೇಖನದ ಪ್ರಮುಖ ಉದ್ದೇಶವು ಜನಪದ ಗೀತೆಗಳ ವೈವಿಧ್ಯತೆಯನ್ನು ವಿಶ್ಲೇಷಿಸುವುದರೊಂದಿಗೆ, ಅವುಗಳಲ್ಲಿ ಅಡಗಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾವನಾತ್ಮಕ ಅಂಶಗಳನ್ನು ಅನಾವರಣಗೊಳಿಸುವುದಾಗಿದೆ. ಜನಪದ ಗೀತೆಗಳು ಕೇವಲ ಕಲಾತ್ಮಕ ಗೀತೆಗಳಲ್ಲ, ಬದಲಾಗಿ ಅವು ಜನಜೀವನದ ಸಾಂಸ್ಕೃತಿಕ ದಾಖಲೆಗಳಾಗಿವೆ. ನಿತ್ಯಜನ ಜೀವನದ ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡ ನಾಡಿನ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಕಳೆದುಕೊಳ್ಳುವಂತಿದೆ. ಜನಪದ ಗೀತೆಗಳು ಸಾಂಸ್ಕೃತಿಕ ಆಸ್ತಿ. ವಿವಿಧ ಕ್ಷೇತ್ರಗಳಾದ ಕೃಷಿ, ಮದುವೆ, ಹಬ್ಬಹರಿದಿನ, ಧಾರ್ಮಿಕ ಆಚರಣೆಗಳು, ಜನನಮರಣದ ಸಂಪ್ರದಾಯಗಳು ಮೊದಲಾದ ವಿಚಾರಗಳನ್ನು ಗೀತೆಗಳ ರೂಪದಲ್ಲಿ ಕಟ್ಟಿಕೊಡಲಾಗಿದೆ. ಅವು ಪ್ರಾದೇಶಿಕ ವೈಶಿಷ್ಟ್ಯತೆ, ಸ್ಥಳೀಯ ಸಾಂಸ್ಕೃತಿಕ ಮತ್ತು ಜನಜೀವನದ ಹೋರಾಟಹರ್ಷಗಳನ್ನು ಪ್ರತಿಬಿಂಬಿಸುತ್ತವೆ. ಭಾವನಾತ್ಮಕ ಅಂಶಗಳಾದ ಪ್ರೀತಿಪ್ರೇಮ, ತಾಯಿಮಗುವಿನ ಬಾಂಧವ್ಯ, ಶೌರ್ಯ, ಧಾರ್ಮಿಕ ಭಕ್ತಿ ಮತ್ತು ಸಮೂಹ ಜೀವನದ ಒಗ್ಗಟ್ಟನ್ನು ಅವು ಸ್ಪಷ್ಟಪಡಿಸುತ್ತವೆ. ಜನಪದ ಗೀತೆಗಳ ವೈವಿಧ್ಯತೆ ಭಾರತೀಯ ಸಂಸ್ಕೃತಿಯ ಸಮೃದ್ಧ ಪರಂಪರೆಯ ಜೀವಂತ ನಿದರ್ಶನವಾಗಿದೆ. ಅವು ಕೇವಲ ಹಳೆಯ ಕಾಲದ ನೆನಪುಗಳಲ್ಲ, ಬದಲಾಗಿ ಆಧುನಿಕ ಕಾಲದಲ್ಲಿಯೂ ಜನರಿಗೆ ಪ್ರೇರಣೆ ಮತ್ತು ಸಾಂಸ್ಕೃತಿಕ ಗುರುತಿನ ಭಾವನೆ ನೀಡುತ್ತಿವೆ. ಹೀಗಾಗಿ ಜನಪದ ಗೀತೆಗಳ ಅಧ್ಯಯನವು ಭಾರತೀಯ ಸಮಾಜದ ಅಂತರಂಗವನ್ನು ಅರ್ಥಮಾಡಿಕೊಳ್ಳಲು ಹಾಗೂ ಅದರ ಸಾಂಸ್ಕೃತಿಕ ಏಕತೆಯನ್ನು ಅರಿಯಲು ಮಹತ್ವದ್ದಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಜವರೇಗೌಡ ದೇ., (2023), ಜನಪದ ಗೀತಾಂಜಲಿ, ಸಪ್ನ ಬುಕ್ ಹೌಸ್, ಬೆಂಗಳೂರು.
ಶ್ರೀಶೈಲ ನಾಗರಾಳ, (2024), ಜನಪದ ಸಮಾಜೋಸಂಸ್ಕೃತಿ, ಸಪ್ನ ಬುಕ್ ಹೌಸ್, ಬೆಂಗಳೂರು.
ಹೆಗಡೆ ಬಾಳಗೋಡ ಜಿ.ಜಿ., (2023), ಜಾನಪದ ದೀವಿಗೇ, ಪ್ರೇಮ ಪ್ರಕಾಶನ, ಮೈಸೂರು.